ಇಂಡಿ : ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ಸಾಕಷ್ಟು ಅವ್ಯವಹಾರವಾಗಿದೆ ಸಾಕಷ್ಟು ಭ್ರಷ್ಟಾಚಾರ ತಾಂಡವಾಡುತ್ತಿದೆ ಎಂದು ಮಾಜಿ ಶಾಸಕ ರವಿಕಾಂತ್ ಪಾಟೀಲ್ ಆರೋಪಿಸಿದರು.
ಅವರು ಇಂದು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ಅಕಾಲಿಕ ಮಳೆಯಾಗಿ 65000 ಸಕ್ಕರೆ ಚೀಲಗಳು ನಾಶವಾಗಿವೆ ಎಂದು ಪತ್ರಿಕೆ ಮುಖಾಂತರ ತಿಳಿಸಿದ್ದಾರೆ ಆದರೆ ಅಷ್ಟು ಮಳೆಯಾಗಿಲ್ಲ ಗಾಳಿಯಿಂದಾಗಿ ಶೆಡ್ ಮಾತ್ರ ಬಿದ್ದಿದ್ದು ಸಕ್ಕರೆ ಹಾನಿಯಾಗಿಲ್ಲ ಆದರೂ ಸಹ ಕಾರ್ಖಾನೆ ಆಡಳಿತ ಮಂಡಳಿ ಹಾಗೂ ಅಧಿಕಾರಿಗಳು ಸಕ್ಕರೆ ಚೀಲ ಹಾಳು ಆಗಿವೆ ಎಂದು ಸುಳ್ಳು ಹೇಳಿಕೆ ನೀಡಿ ಹಣ ಲಪಟಾಯಿಸಲು ಪ್ರಯತ್ನಿಸುತ್ತಿದೆ ಎಂದರು.
ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಸಹ ಮಾತನಾಡುತ್ತೇನೆ ಮತ್ತು ಸಹಕಾರ ಸಚಿವರು ಮಾತನಾಡುತ್ತೇನೆ, ಈ ಬಗ್ಗೆ ಸಿಓಡಿ ತನಿಖೆ ಆಗಬೇಕು ಎಂದು ಆಗ್ರಹಿಸಿದರು. ಇನ್ನೆರಡು ದಿನದಲ್ಲಿ ಕಾರ್ಖಾನೆಗೆ ಭೇಟಿ ನೀಡಿ ಅಲ್ಲಿನ ವಸ್ತುಸ್ಥಿತಿ ತಿಳಿದುಕೊಂಡು ಮುಖ್ಯಮಂತ್ರಿಗಳಿಗೆ ಮಾತನಾಡುತ್ತೇನೆ. ಕಾರ್ಖಾನೆಗೆ ನಾಲ್ಕು ನೂರು ಕೋಟಿ ರೂಪಾಯಿ ಸಾಲ ಮಾಡಿ ರೈತರಿಗೆ ಸಾಲದ ಭಾರ ಹಾಕಲಾಗುತ್ತಿದೆ. ರೈತರು ಸಹ ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು ಎಂದರು.