ಭೀಮಾಶಂಕರ ಸಕ್ಕರೆ ಕಾರ್ಖಾನೆ : ಚುನಾವಣೆ ಹಿನ್ನೆಲೆ 144 ಕಲಂ ಜಾರಿ : ಎಸಿ ಅಬೀದ್ ಗದ್ಯಾಳ
ಇಂಡಿ : ತಾಲ್ಲೂಕಿನ ಮರಗೂರ ಭೀಮಾಶಂಕರ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನಿರ್ದೇಶಕರ ಚುನಾವಣೆ ಹಿನ್ನೆಲೆ ಭಾನುವಾರ (ಫೆ 10) ಸಾಯಂಕಾಲ 5 ಗಂಟೆಯಿಂದ (ಫೆ. 12) ಬೆಳಿಗ್ಗೆ 7 ಗಂಟೆಯವರೆಗೆ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144ರಡಿ ಕೆಲ ಷರತ್ತುಗಳನ್ನು ವಿಧಿಸಿ, ಭೀಮಾಶಂಕರ ಸಕ್ಕರೆ ಕಾರ್ಖಾನೆ ಸಿದ್ದೇಶ್ವರ ಗೋದಾಮಿನ ಸುತ್ತಲೂ – ಮೂತ್ತಲೂ 500 ಮೀಟರ್ ನಿಷೇಧಾಜ್ಞೆ ಜಾರಿ ಮಾಡಿ ಉಪವಿಭಾಗ ಅಧಿಕಾರಿ ಅಬೀದ್ ಗುರುವಾರ ಆದೇಶ ಹೊರಡಿಸಿದ್ದಾರೆ.
ನೂತನ ಚಡಚಣ ತಾಲೂಕಿನ ಮರಗೂರ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಮರಗೂರ, 13 ಜನ ಆಡಳಿತ ಮಂಡಳಿಯ ಸದಸ್ಯರ ಚುನಾವಣೆ ಪ್ರಕ್ರೀಯೆ ನಡೆದಿದ್ದು, ಆದ್ದರಿಂದ ಅದರಲ್ಲಿ 05 ಸ್ಥಾನಗಳ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು ಇನ್ನೂಳಿದ 08 ಜನ ಸದಸ್ಯರು ಆಯ್ಕೆಯ ಹಿನ್ನೆಲೆಯಲ್ಲಿ ಫೆ.11 ರಂದು ಕಾರ್ಖಾನೆಯ ಆವರಣದಲ್ಲಿರುವ ಶ್ರೀ ಸಿದ್ದೇಶ್ವರ ಗೋದಾಮಿನಲ್ಲಿ ಚುನಾವಣೆ ಜರುಗಲಿದ್ದು, ಕಾರಣ ಕಾರ್ಖಾನೆಯ ಆಡಳಿತ ಮಂಡಳಿಯ ಸದಸ್ಯರ ಚುನಾವಣೆಯ ಕಾಲಕ್ಕೆ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಕಾನೂನು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಶ್ರೀ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ, ಸಿದ್ದೇಶ್ವರ ಗೊದಾಮಿನ ಸುತ್ತಮುತ್ತಲು 500 ಮೀಟರ್ ವ್ಯಾಪ್ತಿಯ ಒಳಗೆ ಫೆ. 10- ರಂದು ಸಾಯಂಕಾಲ: 05-00 ಗಂಟೆಯಿಂದ ಫೆ.12 ರ ಬೆಳಿಗ್ಗೆ 07-00 ಗಂಟೆಯ ವರೆಗೆ ದಂಡಪ್ರಕ್ರೀಯಾ ಸಂಹಿತೆ ಕಲಂ 144 ರಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ನಿ. ಮರಗೂರ, ಆಡಳಿತ ಮಂಡಳಿಯ ಸದಸ್ಯರ ಚುನಾವಣೆ ಪ್ರಕ್ರೀಯೆಯಲ್ಲಿ ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಮುಂಜಾಗೃತ ಕ್ರಮವಾಗಿ ಸದರ ಕಾರ್ಖಾನೆಯ “ಸಿದ್ದೇಶ್ವರ ಗೊದಾಮಿನ“ ಸುತ್ತಮುತ್ತಲು 500 ಮೀಟರ್ ವ್ಯಾಪ್ತಿಯ ಒಳಗೆ ಈ ಮೇಲೆ ತಿಳಿಸಿದ ದಿನಾಂಕ ಹಾಗೂ ಸಮಯದಂದು ದಂಡಪ್ರಕ್ರೀಯಾ ಸಂಹಿತೆ ಕಲಂ 144 ರಡಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.
ಷರತ್ತುಗಳು:
1]ಸದರಿ ಕಾರ್ಖಾನೆಯ ನಿಗದಿತ ಜಾಗೆಯಲ್ಲಿ ಕಾರ್ಖಾನೆಯ ಕಾರ್ಯ ಚಟುಚಟಿಕೆ ಮತ್ತು ಚುನಾವಣಾ ಚುಟುವಟಿಕೆಗಳನ್ನು ಹೊರತುಪಡಿಸಿ, ಇನ್ನಿತರ ಯಾವುದೇ ಚಟುವಟಿಕೆಗಳಿಗೆ ಅವಕಾಶ ವಿರುವದಿಲ್ಲ.
2]ನಿಷೇಧಿತ ಪ್ರದೇಶದಲ್ಲಿ ನಿಯಮಬಾಹಿರವಾಗಿ ಯಾರಾದರೂ ನಡೆದುಕೊಂಡಲ್ಲಿ ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಕಾನೂನುರಿತ್ಯಾ ಕ್ರಮ ಜರುಗಿಸುವುದು.
3] ನಿಷೇಧಿತ ಪ್ರದೇಶದಲ್ಲಿ ಯಾವುದೇ ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಿದೆ.
4] ನಿಷೇಧಿತ ಪ್ರದೇಶದಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡ ಅಧಿಕಾರಿ/ಸಿಬ್ಬಂದಿ ಹೊರತುಪಡಿಸಿ 3 ಅಥವಾ ಅದಕ್ಕಿಂತ ಹೆಚ್ಚು ಜನರ ಒಳಗೊಂಡ ಗುಂಪಿಗೆ ಓಡಾಡಲು ಅವಕಾಶವಿರುವುದಿಲ್ಲ.