ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆಯ ನಾಮಪತ್ರ ಹಿಂಪಡೆಯುವ ಕೊನೆದಿನ. ಕಣದಲ್ಲಿ ಯಾರು..? ಯಾವ ಪ್ರಮುಖರು..?
ಇಂಡಿ : ತಾಲೂಕಿನ ಮರಗೂರ ಭೀಮಾಶಂಕರ
ಸಹಕಾರಿ ಸಕ್ಕರೆ ಕಾರ್ಖಾನೆಗೆ ಫೆಬ್ರವರಿ 11ರಂದು
ಚುನಾವಣೆ ನಿಗದಿಯಾಗಿದ್ದು, ಫೆಬ್ರವರಿ 5
ಸೋಮವಾರ ನಾಮಪತ್ರ ಹಿಂಪಡೆಯಲು
ಕೊನೆಯ ದಿನವಾಗಿತ್ತು. ಸೋಮವಾರ 33 ಜನ ಅಭ್ಯರ್ಥಿಗಳು ತಮ್ಮ ನಾಮಪತ್ರವನ್ನು ಹಿಂಪಡೆದುಕೊಂಡರು, ಪ್ರಮುಖವಾಗಿ ಮಾಜಿ ಶಾಸಕ ರವಿಕಾಂತ ಪಾಟೀಲ್ ಅವರು ಸಹ ತಮ್ಮ ನಾಮಪತ್ರ ಹಿಂಪಡೆದಿದ್ದು ಅವರ ಅಭಿಮಾನಿಗಳಲ್ಲಿ ನಿರಾಶೆ
ಮೂಡಿಸುವಂತಾಯಿತು.
ಸ್ಥಳೀಯ ಶಾಸಕ ಹಾಗೂ ಕಾರ್ಖಾನೆಯ
ಅಧ್ಯಕ್ಷರಾಗಿರುವ ಯಶವಂತರಾಯಗೌಡ
ಪಾಟೀಲ್ ಅವರು ಅವಿರೋಧ ಆಯ್ಕೆ ಮಾಡುವ
ಪ್ರಯತ್ನದಲ್ಲಿ ಇದ್ದರೂ ಅವರ ಪ್ರಯತ್ನ ಕೈಗೂಡಲಿಲ್ಲ, ಸಾಮಾನ್ಯ ಸ್ಥಾನದಲ್ಲಿ ಐದು ಸ್ಥಾನಗಳಿಗೆ 8 ಜನ ಅಭ್ಯರ್ಥಿಗಳು ಉಳಿದುಕೊಂಡಿದ್ದು ನಾಳೆಯಿಂದಲೇ ಚುನಾವಣಾ ಪ್ರಚಾರ ಪ್ರಾರಂಭವಾಗಲಿದೆ. ಕಣದಲ್ಲಿರುವವರಲ್ಲಿ ಮಾಜಿ ಶಾಸಕ ಡಾ. ಸಾರ್ವಭೌಮ
ಬಗಲಿ ಅವರು ಇರುವ ಕಾರಣ ಚುನಾವಣೆ ಕಾವು ದಿನಿ ದಿನೇ ಹೆಚ್ಚಾಗುವ ಸಾಧ್ಯತೆ ಇದೆ. ಸಾಮಾನ್ಯ ವರ್ಗದಲ್ಲಿ-
ಚಂದ್ರಕಾಂತ್ ಬೋರಗಿ, ನಾಗನಾಥ ಬಿರಾದಾರ,
ಬಸವರಾಜ ಧನಶ್ರೀ, ಮಲ್ಲನಗೌಡ ಪಾಟೀಲ,
ಯಶವಂತರಾಯಗೌಡ ಪಾಟೀಲ, ರೇವಗೊಂಡಪ್ಪ
ಪಾಟೀಲ, ಸಿದ್ದಣ್ಣ ಬಿರಾದಾರ ಡಾ.ಸಾರ್ವಭೌಮ ಬಗಲಿ
ಕಣದಲ್ಲಿದ್ದಾರೆ. ಪರಿಶಿಷ್ಟ ಜಾತಿ ಮೀಸಲು ಸ್ಥಾನದಲ್ಲಿ
ಅಶೋಕ್ ಗಜಾಕೋಶ, ಮುತ್ತಪ್ಪ ಪೊತೆ ಕಣದಲ್ಲಿದ್ದಾರೆ.
ಮಹಿಳಾ ಮೀಸಲು ಸ್ಥಾನದಲ್ಲಿ-ದಾನವ್ವ ಬಿರಾದಾರ ಉರ್ಫ ಪಾಟೀಲ, ಲಲಿತಾ ನಡಿಗೇರಿ, ಸರೋಜಿನಿ ಪಾಟೀಲ ಕಣದಲ್ಲಿ ಉಳಿದಿದ್ದಾರೆ. ಐದು ಸ್ಥಾನಗಳು ಅವಿರೋಧ- ಹಿಂದುಳಿದ ವರ್ಗ “ಅ” ಮೀಸಲು ಸ್ಥಾನದಿಂದ ಜಟ್ಟೆಪ್ಪ ರವಳಿ, ಹಿಂದುಳಿದ ವರ್ಗ “ಬ”
ಮೀಸಲು ಸ್ಥಾನದಿಂದ ಬಸಣ್ಣ ಮ. ಕೋರೆ, “ಪರಿಶಿಷ್ಠ ಪಂಗಡ”ಮೀಸಲು ಸ್ಥಾನದಿಂದ- ಸುರೇಶಗೌಡ ರಾ, ಪಾಟೀಲ, “ಸಹಕಾರ ಸಂಘಗಳ ಮತಕ್ಷೇತ್ರ ಬ”
ವರ್ಗದಿಂದ ವಿಶ್ವನಾಥ ಷ. ಬಿರಾದಾರ (ಬರಡೋಲ)
“ಕಬ್ಬು ಬೆಳೆಗಾರರಲ್ಲದ ಮತಕ್ಷೇತ್ರ ಡ” ವರ್ಗದಿಂದ ವಿಶ್ವನಾಥ ಮ. ಬಿರಾದಾರ (ಇಂಡಿ) ಇವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಕಣದಲ್ಲಿರುವ
ಅಭ್ಯರ್ಥಿಗಳಿಗೆ ಪ್ರಚಾರ ಚಿನ್ಹೆ ಸಹ ನೀಡಿದ್ದು ಫೆ. 11
ರಂದು ಚುನಾವಣೆ ನಡೆಯಲಿದೆ ಎಂದು ಚುನಾವಣಾಧಿಕಾರಿ, ಕಂದಾಯ ಉಪವಿಭಾಗ ಅಧಿಕಾರಿ
ಅಬೀದ್ ಗದ್ಯಾಳ ತಿಳಿಸಿದ್ದಾರೆ.