ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ೨೦೨೪-೨೫ ನೇಸಾಲಿನ ಕಬ್ಬು ನುರಿಸುವ ಕಾರ್ಯ ಮುಕ್ತಾಯ
ಇಂಡಿ: ತಾಲೂಕಿನ ಮರಗೂರದ ಗ್ರಾಮದ ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ೨೦೨೪-೨೫ ನೇಸಾಲಿನ ಕಬ್ಬು ನುರಿಸುವ ಕಾರ್ಯವನ್ನು ಫೆ, ೨೪ ರಂದು ಮುಕ್ತಾಯಗೊಳಿಸಲಾಗುವುದು ಎಂದು ಕಾರ್ಖಾನೆಯ ವ್ಯವಸ್ಥಾಪಕರು ಪ್ರಕಟಣೆಗೆ ತಿಳಿಸಿದ್ದಾರೆ.
ಕಬ್ಬು ಬೆಳೆಗಾರರು ಕಾರ್ಖಾನೆಯೊಂದಿಗೆ ಕಬ್ಬು ಪೂರೈಕೆಯ ಕರಾರಿಗೊಳಪಟ್ಟ ತಮ್ಮ ಎಲ್ಲಾ ಕಬ್ಬು ನಮ್ಮ ಕಬ್ಬು ಕಟಾವು ಆದೇಶಪತ್ರಗಳನ್ವಯ ಕಟಾವು ಮಾಡಿ ಫೆ,೨೩ ರಂದು ರಾತ್ರಿ ೧೦-೦೦ ಘಂಟೆಯ ಒಳಗಾಗಿ ಕಾರ್ಖಾನೆಗೆ ಕಬ್ಬು ಪೂರೈಸಿ ಕಬ್ಬು ಪೂರೈಕೆಗಾಗಿ ಕಾರ್ಖಾನೆಯಿಂದ ಪಡೆದುಕೊಂಡ ಎಲ್ಲ ಕಬ್ಬು ಪಟಾವು ಆದೇಶ ಪತ್ರಗಳು ಫೆ, ೨೩ ರಂದು ರವಿವಾರ ರಾತ್ರಿ ೧೦-೦೦ ಗಂಟೆಯ ನಂತರ ರದ್ದುಗೊಳಿಸಲಾಗುತ್ತದೆ. ಅವಧಿಯ ನಂತರ ಕಟಾವುಗೊಳ್ಳದೇ ಉಳಿಯುವ ಕಬ್ಬಿಗೆ ಕಾರ್ಖಾನೆಯು ಯಾವುದೇ ರೀತಿಯಿಂದ ಜವಾಬ್ದಾರಿಯಾಗಿರುವುದಿಲ್ಲ. ಪ್ರಸಕ್ತ ೨೦೨೪-೨೫ನೇ ಸಾಲಿನ ಕಬ್ಬು ನುರಿಸುವ ಹಂಗಾಮು ಯಶಸ್ವಿಗೊಳಿಸಲು ಸಹಕಾರ ನೀಡಿದ ಸಮಸ್ತ ಶೇರುದಾರ ಸದಸ್ಯರಿಗೆ, ರೈತ ಬಾಂಧವರಿಗೆ ಕಬ್ಬು ಕಟಾವು ಅಲ್ಲದೆ ಕಬ್ಬು ಸಾಗಾಣ ಕೆ ಗುತ್ತಿಗೆದಾರರಿಗೆ ಕಾರ್ಖಾನೆಯ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಹಾಗೂ ಕಾರ್ಮಿಕ ಬಂಧುಗಳಿಗೆ ಆಡಳಿತ ಮಂಡಳಿಯವರು ಅಭಿನಂದಿಸುವುದಾಗಿ ತಿಳಿಸಿದ್ದಾರೆ.


















