ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆ ಚುನಾವಣೆ ಶಾಂತಿಯುತ ಮತದಾನ
ಇಂಡಿ: ಮರಗೂರಿನ ಶ್ರೀ ಭೀಮಾಶಂಕರ ಸಹಕಾರಿ
ಸಕ್ಕರೆ ಕಾರ್ಖಾನೆಯ 2024 ರಿಂದ 29 ರ ಅವಧಿಯ
ಆಡಳಿತ ಮಂಡಳಿ ಚುನಾವಣೆ ಭಾನುವಾರ ನಡೆದಿದ್ದು 2024 ಶೇರುದಾರರು ಮತದಾನ ಮಾಡಿದ್ದು ಪ್ರತಿಶತ 76.09 ರಷ್ಟು ಮತದಾನವಾಗಿದೆ. ಚುನಾವಣೆ ನಿಮಿತ್ಯ ಮತದಾನ ಮಾಡಲು 10 ಕೌಂಟರ್‍ಗಳಲ್ಲಿ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಲ್ಲದೆ ಗುರುತಿನ ಚೀಟಿ ಇಲ್ಲದವರಿಗೆ ಗುರುತಿನ ಚೀಟಿ ವಿತರಿಸಲು ಪ್ರತ್ಯೇಕ ಕೌಂಟರ್‍ಗಳನ್ನು
ತೆರೆಯಲಾಗಿತ್ತು. ಸರದಿ ಸಾಲಾಗಿ ಬಂದು ಶೇರುದಾರರು ತಮ್ಮ ಗುರುತಿನ ಚೀಟಿ ಪಡೆದು ಮತದಾನ ಮಾಡಿದರು.
ಶೇರುದಾರರು ಮತ ಚಲಾಯಿಸಲು ಒಳಗಡೆ ಮೋಬಾಯಿಲ್ ತೆಗೆದುಕೊಂಡು ಹೋಗಲು
ಅವಕಾಶವಿಲ್ಲದ್ದರಿಂದ ಗೇಟ್‍ನ ಕೌಂಟರ್‍ಗಳಲ್ಲಿ
ಮೋಬಾಯಿಲ್ ಇಟ್ಟು ಹೋಗುವ ವ್ಯವಸ್ಥೆ
ಕಲ್ಪಿಸಲಾಗಿತ್ತು.
ಸಿಂದಗಿ, ಇಂಡಿ, ಚಡಚಣ, ದೇವರಹಿಪ್ಪರಗಿ ತಾಲೂಕಿನ
ಜನರು ದ್ವಿಚಕ್ರ ವಾಹನ, ಕಾರ್, ಜೀಪ್‍ಗಳ ಮೂಲಕ
ಬಂದು ತಮ್ಮ ಮತದಾನ ಹಕ್ಕನ್ನು ಚಲಾಯಿಸಿದರು.
ಚುನಾವಣೆಗೆ ಮತದಾನ ಮಾಡಲು ಆಗಮಿಸುವ
ವೃದ್ಧರು, ಅಂಗವಿಕಲರಿಗೆ ವ್ಹೀಲ್ ಚೇರ್ ವ್ಯವಸ್ಥೆ
ಕಲ್ಪಿಸಲಾಗಿತ್ತು. ಚೇರ್ ಮೇಲೆ ಕರೆದು ತಂದು
ಮತದಾನ ಮಾಡಿಸಲಾಯಿತು. ಚುನಾವಣಾ ಪ್ರಕ್ರಿಯೆ ಮುಗಿದಿದ್ದು ಮತೆಣಿಕೆ ಕಾರ್ಯ ಶೀಘ್ರವೇ ಆರಂಭವಾಗಲಿದೆ ಎಂದು ಚುನಾವಣಾಧಿಕಾರಿ ಹಾಗೂ ಕಂದಾಯ ಉಪವಿಭಾಗಾಧಿಕಾರಿ
ಅಬೀದ್ ಗದ್ಯಾಳ ತಿಳಿಸಿದ್ದಾರೆ.
ಇಂಡಿ: ಭೀಮಾಶಂಕರ ಸಹಕಾರಿ ಸಕ್ಕರೆ ಕಾರ್ಖಾನೆಯ ಚುಮಾವಣೆ ನಿಮಿತ್ಯ ಗುರುತಿನ ಚೀಟಿ
ಪಡೆದುಕೊಳ್ಳುತ್ತಿರುವ ಶೇರುದಾರರು.