ರಾಮ ಮಂದಿರ ಹೋರಾಟದ ರೂವಾರಿ ಎಲ್ ಕೆ ಅಡ್ವಾನಿಗೆ ಭಾರತ್ನ ರತ್ನ ಗೋಷಣೆ, ಐತಿಹಾಸಿಕ ಕ್ಷಣ : ಶಾಂತು
ಪ್ರತಿಯೊಬ್ಬ ಕಾರ್ಯಕರ್ತರು ಅಭಿನಂದಿಸುವ ಕ್ಷಣ..! ಶಾಂತು ಕಂಬಾರ
ಇಂಡಿ : ಶ್ರೀರಾಮ ಮಂದಿರ ಹೋರಾಟದ ರುವಾರಿ ಹಾಗೂ ಬಿಜೆಪಿ ಪಕ್ಷದ ಭೀಷ್ಮನಂದೇ ಖ್ಯಾತಿಯ ಹೆಸರಾಂತ್ , ಮಾಜಿ ಉಪ ಪ್ರಧಾನಿ ಮಂತ್ರಿ ಎಲ್ ಕೆ ಅಡ್ವಾನಿ ಅವರಿಗೆ ಭಾರತ ರತ್ನ ಪ್ರಶಸ್ತಿ ಪುರಸ್ಕಾರ ಕೇಂದ್ರ ಸರಕಾರ ಘೋಷಣೆ ಮಾಡಿದ್ದು ಅತ್ಯಂತ ಹೆಮ್ಮೆಯ ಮತ್ತು ಹರ್ಷದ ಸಂಗತಿ ಎಂದು ಮಂಡಲ ಕಾರ್ಯದರ್ಶಿ ಶಾಂತು ಕಂಬಾರ ಹೇಳಿದರು.
ಪಟ್ಟಣದಲ್ಲಿ ಸುದ್ದಿಘೊಷ್ಠಿ ಉದ್ದೇಶಿಸಿ ಮಾತಾನಾಡಿದ ಅವರು,ಎಲ್ ಕೆ ಅಡ್ವಾನಿ ಅವರು ಜನಸಂಘದ ಕಾಲದಿಂದಲೂ ಬಿಜೆಪಿ ಪಕ್ಷವನ್ನು ಮುನ್ನಡೆಸಿದ್ದ ಕೀರ್ತಿ, ಯಾರಿಗಾದರೂ ಸಲ್ಲುತ್ತದೆ ಅಂದ್ರೆ ಅದು ಎಲ್ ಕೆ ಅಡ್ವಾನಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಸಲ್ಲುತ್ತದೆ. ಹಿಂದುತ್ವವನ್ನು ಮೈಗೂಡಿಸಿಕೊಂಡು ಲಕ್ಷಾಂತರ ಕಾರ್ಯಕರ್ತರ ಹೃದಯದಲ್ಲಿ ನೆಲೆಸಿರುವಂತಹ ಎಲ್ ಕೆ ಅಡ್ವಾನಿ ಅವರಿಗೆ ಭಾರತರತ್ನ ಪ್ರಶಸ್ತಿ ಘೋಷಿಸಿದ್ದು, ಬಿಜೆಪಿಯ ಪ್ರತಿಯೊಬ್ಬ ಕಾರ್ಯಕರ್ತರು ಅಭಿನಂದಿಸುವ ಕ್ಷಣ. ಇದೇ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿಜಿ ಹಾಗೂ ಕೇಂದ್ರ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದರು.