ರಾಯಚೂರು : ೨೦೨೨-೨೦೨೩ರ ಬಜೆಟ್‌ನಲ್ಲಿ ತುಂಗಭದ್ರ ಅಣೆಕಟ್ಟಿಗೆ ಸಮಾನಾಂತರ ಆಣೆಕಟ್ಟು ನಿರ್ಮಾಣ ಯೋಜನೆ ಅನುದಾನ ನೀಡಬೇಕು ಹಾಗೂ ಜಿಲ್ಲೆಯ ಇತರೆ ಯೋಜನೆಗಳಿಗೆ ಅನುದಾನವನ್ನು ಘೋಷಣೆ ಮಾಡುವಂತೆ ಒತ್ತಾಯಿಸಿ ಭಾರತೀಯ ಕಿಸಾನ್ ಸಂಘ ಜಿಲ್ಲಾಧಿಕಾರಿಗಳ ಮುಖಾಂತರ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿದರು.
ಕಳೆದ ೨೦೨೦-೨೦೨೧ರ ಬಜೆಟ್ಟಿನ ಒಟ್ಟು ಗಾತ್ರ ೨,೪೬,೨೦೬ ಕೋಟಿ ರೂಪಾಯಿ ಆಗಿದ್ದು, ಅದರಲ್ಲಿ ಕೃಷಿ ವಲಯಕ್ಕೆ ೧೧೦೨೮ಕೋಟಿ ರೂಪಾಯಿಗಳ ಅನುದಾನ ಘೋಷಣೆ ಆಗಿತ್ತು. ಈ ಬಾರಿ ಮುಖ್ಯಮಂತ್ರಿ ನೇತೃತ್ವದಲ್ಲಿ ಬಜೆಟ್ ಮಂಡನೆ ಆಗುತ್ತಿದ್ದು ಕೃಷಿ ವಲಯಕ್ಕೆ ಪ್ರತ್ಯೇಕ “ಕೃಷಿ ಬಜೆಟ್” ಮಂಡಿಸಬೇಕು ಮತ್ತು ೧ ಲಕ್ಷ ಕೋಟಿ ರೂಪಾಯಿಗಳ ಅನುದಾನವನ್ನು ಕೃಷಿ ವಲಕ್ಕೆ ಮೀಸಲಿಡಬೇಕು.
ತುಂಗಭದ್ರ ಆಣೆಕಟ್ಟಿನ ಒಟ್ಟು ಸಾಂದ್ರತೆ ೧೩೨ ಟಿ.ಎಂ.ಸಿ. ಯಲ್ಲಿ ೩೨ ಟಿ.ಎಂ.ಸಿ. ಹೂಳು ತುಂಬಿಕೊಂಡಿದ್ದು ಇದರಿಂದಾಗಿ ಜಿಲ್ಲೆಯ ಹಲವು ಗ್ರಾಮಗಳು ನೀರಾವರಿಯಿಂದ ವಂಚಿತವಾಗಿವೆ. ನಂದವಾಡಗಿ ಏತಾ ನೀರಾವರಿ ಯೋಜನೆಗೆ ಒಟ್ಟು ೧೮,೦೦ಕೋಟಿ ರೂಪಾಯಿಗಳು ಅವಶ್ಯಕತೆ ಇದ್ದು ಯೋಜನೆಯಿಂದ ಜಿಲ್ಲೆಯ ಲಿಂಗಸೂಗೂರು, ಮಸ್ಕಿ, ಸಿರವಾರ, ತಾಲೂಕಿನ ಹಲವು ಗ್ರಾಮ ಕುಡಿಯುವ ನೀರು, ಕೃಷಿಗೆ ನೀರು ಲಭ್ಯವಾಗುತ್ತಿದ್ದು ಈ ಯೋಜನೆಗೆ ಪ್ರಸ್ತುತ ಬಜೆಟನಲ್ಲಿ ೧೦೦೦ ಕೋಟಿ ರೂಪಾಯಿಗಳನ್ನು ಅನುದಾನ ನೀಡಬೇಕು. ಸಿರವಾರ, ಮಸ್ಕಿ ತಾಲೂಕುಗಳ ಅಭಿವೃದ್ಧಿಗೆ ತಲಾ ೧೦೦ ಕೋಟಿಗಳನ್ನು ಒದಗಿಸಬೇಕಾಗಿ. ಜಿಲ್ಲೆಯ ನೀರಾವರಿಗೆ ಸಂಬಂದಿಸಿದಂತೆ ಅಲವು ಬೇಡಿಕೆಗಳನ್ನು ಈಡೇರಿಸಲು ಒತ್ತಾಯಿಸಿ ಮನವಿ ಸಲ್ಲಿಸಿದರು.