ರಾಜಕೀಯವಾಗಿ ಈ ಸಮಾಜ ಸಾಕಷ್ಟು ತುಳಿತಕ್ಕೆ ಒಳಗಾಗಿದೆ; ಡಾ. ಪುರುಷೋತ್ತಮಾನಂದಪುರಿ
ಸಮಾಜದ ಸುಧಾರಣೆಗೆ ಶಿಕ್ಷಣ ಅವಶ್ಯಕ ; ಶಾಸಕ ಯಶವಂತರಾಯಗೌಡ ಪಾಟೀಲ
ಇಂಡಿ : ಪ್ರತಿಯೊಬ್ಬರೂ ಶಿಕ್ಷಣ ಪಡೆದರೆ ಉಪ್ಪಾರ ಸಮಾಜ ಸುಧಾರಣೆಯಾಗುತ್ತದೆ. ಸಮಾಜ ಸುಧಾರಣೆಯಲ್ಲಿ ಯುವಕರ ಪಾತ್ರ ಪ್ರಮುಖ. ದುಶ್ಚಟಗಳಿಗೆ ದಾಸರಾಗದೆ ಇತರರಿಗೆ ಮಾದರಿಯಾಗಿ ಬದುಕು ನಡೆಸಬೇಕೆಂದು ವಿಧಾನ ಸಭೆಯ ಅಂದಾಜು ಸಮಿತಿಯ ಅಧ್ಯಕ್ಷ, ಶಾಸಕ ಯಶವಂತರಾಯಗೌಡ ಪಾಟೀಲ ಮಾತಾನಾಡಿದರು.
ತಾಲೂಕಿನ ತಡವಲಗಾ ಗ್ರಾಮದ ಸಭಾಭವನದಲ್ಲಿ ಶ್ರೀ ಭಗೀರಥ ಸಮಾಜ ಸೇವಾ ಸಂಘ ಸಂಯುಕ್ತಾಶ್ರಯದಲ್ಲಿ ಜರುಗಿದ ಹ್ಯಾಟ್ರಿಕ್ ಗೆಲುವು ಸಾಧಿಸಿದ ಶಾಸಕ ಯಶವಂತರಾಯಗೌಡ ಪಾಟೀಲ ಹಾಗೂ ಭಗೀರಥ ಸಮುದಾಯ ವಿಧ್ಯಾರ್ಥಿಗಳ ಪ್ರತಿಭಾಪುರಸ್ಕಾರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತಾನಾಡಿದರು.
ಇನ್ನೂ ಮಕ್ಕಳ ಭವಿಷ್ಯ ರೂಪಿಸುವಲ್ಲಿ ತಾಯಿ ಪಾತ್ರ ಅಪಾರ. ತಾಯಿ ತನ್ನ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ ಸಂಸ್ಕಾರವಂತರನ್ನಾಗಿ ಮಾಡಬೇಕು. ಸಂಸ್ಕಾರದಿಂದ ದೇಶಪ್ರೇಮ ಹೆಚ್ಚುತ್ತದೆ ಎಂದರು. ಇನ್ನೂ ಈ ಸಮುದಾಯದಲ್ಲಿ ಶೈಕ್ಷಣಿಕ ಕ್ರಾಂತಿ ನಡೆದರೆ, ಸಾಮಾಜಿಕ, ಆರ್ಥಿಕ, ರಾಜಕೀಯ ವಾಗಿ ಮುನ್ನಡೆಗೆ ಬರಲು ಸಾಧ್ಯ ಎಂದು ಹೇಳಿದರು. ಈ ಸಮುದಾಯದ ಜನರು ರಾಜಕಾರಣ ಅತೀವ ಸಹಕಾರ ನೀಡಿದ್ದು ಚೀರರುಣಿ ಎಂದು ಹೇಳಿದರು.
ತಾಲೂಕು ಭಗೀರಥ ಸಮಾಜ ಸೇವಾ ಸಂಘದ ಅಧ್ಯಕ್ಷ ಮಾತಾನಾಡಿ ಡಾ. ಪುರುಷೋತ್ತಮಾನಂದಪುರಿ ಸ್ವಾಮೀಜಿ ಉಪ್ಪಾರ ಜನಾಂಗ ಒಗ್ಗೂಡಿಸಿ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿಗೆ ಶ್ರಮಿಸುತ್ತಿದ್ದಾರೆ ಎಂದು ಶ್ಲಾಘಿಸಿದರು. ಇನ್ನೂ ಇಂಡಿ ತಾಲೂಕಿನಲ್ಲಿ ಉಪ್ಪಾರ ಜನಾಂಗದ ಸಂಖ್ಯೆ ಅತೀ ಹೆಚ್ಚು ಇದೆ.ಈ ಸಮುದಾಯಕ್ಕೆ ರಾಜಕೀಯ ಸ್ಪರ್ಶ ಬೇಕಾಗಿದೆ ಎಂದು ಹೇಳಿದರು.
ಇನ್ನೂ ದಿವ್ಯ ಸಾನಿಧ್ಯ ವಹಿಸಿರುವ ಡಾ.ಪುರುಷೋತ್ತಮನಾಂದರು ಸ್ವಾಮಿಜಿಯವರು ಮಾತನಾಡಿ ಅವರು, ಒಗ್ಗಟಿನಲ್ಲಿ ಬಲವಿದೆ. ಉಪ್ಪಾರ ಸಮಾಜದಲ್ಲಿ ಒಗ್ಗಟ್ಟಿಲ್ಲದ ಕಾರಣ ಅಭಿವೃದ್ಧಿ ಕುಂಠಿತವಾಗಿದೆ. ಶೇ. 30 ಶೈಕ್ಷಣಿಕ ಸುಧಾರಣೆ ಕಂಡಿದ್ದು ದುರದೃಷ್ಟಕರ. ಮೂಢನಂಬಿಕೆ, ಕಂದಾಚಾರದಿಂದ ಸಮಾಜ ಬಾಂಧವರು ಹೊರಬರಬೇಕು. ಅಂದಾಗ ಶೈಕ್ಷಣಿಕ ಪ್ರಗತಿ, ಸಮಾಜ ಸುಧಾರಣೆ ಸಾಧ್ಯ ಎಂದರು.
ಜನಪ್ರತಿನಿಧಿಗಳು ಈ ಸಮಾಜವನ್ನು ಮುಖ್ಯ ವಾಹಿನಿಗೆ ತರುವಲ್ಲಿ ವಿಫಲರಾಗಿದ್ದು, ರಾಜ್ಯದಲ್ಲಿ ಈವರೆಗೂ ಬೆರಳೆಣಿಕೆಯಷ್ಟು ಉಪ್ಪಾರ ಸಮಾಜದಿಂದ ವಿಧಾನ ಪರಿಷತ್ ಸದಸ್ಯರಾಗಿದ್ದಾರೆ. ರಾಜಕೀಯವಾಗಿ ಈ ಸಮಾಜ ಸಾಕಷ್ಟು ತುಳಿತಕ್ಕೆ ಒಳಗಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ವೇದಿಕೆಯ ಮೇಲೆ ಜಟ್ಟೆಪ್ಪ ಹತ್ತಿ , ಮಳಸಿದ್ದ ಬ್ಯಾಳಿ ಭೀಮರಾಯ ಉಪ್ಪಾರ್, ತಮ್ಮಣ್ಣ ಪೂಜಾರಿ ಸಂಜು ಮೊಟ್ಟಾಗಿ ಶ್ರೀಶೈಲ್ ಮಾದರಿ ಶ್ರೀಶೈಲ್ ಶಿವಣ್ಣ , ಸೋಮಶೇಖರ್ ಸೊನ್ನ ಅನಿಲ್, ಸೋಮಶೇಖರ್ ಬ್ಯಾಳಿ ನಿಂಗೂ ಬಿರಾದ, ಸಂತೋಷ್ ಕಟ್ಟಿ ಪರಶುರಾಮ ಕಸ್ಕಿ , ಜಕ್ಕಪ್ಪ ಉಪ್ಪಾರ್, ವಿಠ್ಠಲ್ ಸೊನ್ನ ಜಟ್ಟೆಪ್ಪ ನೆರಳೆ,ಮಾಳಪ್ಪ ದಳವಾಯಿ ಅನೇಕ ಗಣ್ಯಮಾನ್ಯರು ಉಪಸ್ಥಿತರಿದ್ದರು.