ಯಶಸ್ಸು ತ್ಯಾಗವನ್ನು ಕೇಳುತ್ತದೆ.!
ಸಾಧನೆ ಎನ್ನುವದು ಸಾಧಕನ ಸ್ವೊತ್ತು ಹೊರತು, ಸೋಮಾರಿಯದಲ್ಲ : ಧಶರಥ ಕೋರಿ, ಶಿಕ್ಷಕ ಸಾಹಿತಿ
ಇಂಡಿ – ಕ್ರಿಕೆಟ್ ಲೋಕದ ಸಾಮ್ರಾಟ ವಿರಾಟ ಕೊಹ್ಲಿ 2006 ರಲ್ಲಿ ಕ್ರಿಕೇಟ್ ಪಂದ್ಯವಾಡುತ್ತಿದಾಗ ಆತನ ತಂದೆ ಹೃದಯಘಾತವಾಗಿ ತೀರಿಕೊಂಡಿದ್ದರು.ಅಂತಹ ಬಹು ದುಃಖದ ಮತ್ತು ಸಂದಿಗ್ಧದ ಪರಿಸ್ಥಿತಿಯಲ್ಲಿ ವಿರಾಟ್ ದೃತಿಗೆಡದೆ ಕರ್ನಾಟಕ ವಿರುದ್ಧ 90 ರನ್ನಗಳನ್ನು ಬಾರಿಸಿ ದೆಹಲಿ ತಂಡವನ್ನು ಬಚಾವ ಮಾಡಿದ್ದರು.
ಹೀಗೆ ಪ್ರತಿ ವ್ಯಕ್ತಿಯಾಗಲಿ ಆಟಗಾರನಾಗಿರಲಿ ವಿದ್ಯಾರ್ಥಿಯಾಗಿರಲಿ ತನ್ನ ವಿದ್ಯಾರ್ಥಿ ಜೀವನದಲ್ಲಿ ಪ್ರತಿಶತ ನೂರಕ್ಕೆ ನೂರರಷ್ಟು ಫಲಿತಾಂಶ ಹೊಂದಿ ತೇರ್ಗಡೆಯಾಗಬೇಕಾದರೆ,ನಮ್ಮ ಬದುಕು ನಮ್ಮ ಸಂತೋಷ -ಸಂಭ್ರಮ ಪ್ರಯಾಣ ಪ್ರವಾಸ ನಿದ್ದೆ -ನೀರಡಿಕೆ ಬಂಧು-ಬಾಂಧವರೊಡನೆಯ ಒಡನಾಟ ಎಲ್ಲವನ್ನು ಕಸಿದುಕೊಳ್ಳುತ್ತದೆ. ಹಾಗಾಗಿ ಯಶಸ್ಸು ನಮಗೆ ತ್ಯಾಗಗಳಿಂದ ಸಿಗುತ್ತದೆ ಹೊರತು, ಅನಾಯಾಸವಾಗಿ ಅಲ್ಲ ಎಂದು ಸಾಹಿತಿ ದಶರಥ ಕೋರಿ ತಿಳಿಸಿದರು.
ಇಂದು ಇಡೇ ರಾಜ್ಯಕ್ಕೆ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಸರಕಾರಿ ಶಾಲೆಯ ವಿದ್ಯಾರ್ಥಿನಿ ಅಂಕಿತಾ ಕುಂಬಾರ ಅತೀ ಹೆಚ್ಚು ಅಂಕ ಪಡೆದು ಮನೆ ಮಾತಾಗಿದ್ದಾಳೆ. ಅವಳ ಸಾಧನೆಗೆ ಇಡೀ ರಾಜ್ಯ ಸಂತೋಷ ಪಟ್ಟಿದೆ.ಸರಕಾರ ಅವಳ ಪ್ರತೀಭೆಗೆ ಪ್ರೋತ್ಸಾಹ ಧನವಾಗಿ ಇಂದು ಲಕ್ಷಾಂತರ ಹಣ ನೀಡಿ ಗೌರವಿಸಿದೆ
ಸಾಧನೆ ಎನ್ನುವದು ಸಾಧಕನ ಸ್ವೊತ್ತು ಹೊರತು ಸೋಮಾರಿಯದಲ್ಲ ಎಂದು ಬೆಸ್ಟ್ ಕೋಚಿಂಗ್ ಕ್ಲಾಸಿನ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದಲ್ಲಿ ಉಪನ್ಯಾಸಕರಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಗಮನಾರ್ಹ ಸಾಧನೆ ಮಾಡಿದ ಹತ್ತು ವಿದ್ಯಾರ್ಥಿಗಳಿಗೆ ಸಂಸ್ಥೆಯ ವತಿಯಿಂದ ಸನ್ಮಾನ ಹಾಗೂ ಧನಸಹಾಯ ನೀಡಲಾಯಿತು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಸಂಗಮೇಶ ಧಾಮಾ ಅಶೋಕ ಬಿರಾದಾರ ಶಿಕ್ಷಕರು ಶ್ರೀ ಚೌಗಲೆ ಶಿಕ್ಷಕರು ಬಸವರಾಜ ಪಲ್ಲೆದ ಶಿಕ್ಷಕರು ದಯಾನಂದ ಝಂಪಾ ಶಿಕ್ಷಕರು ರಶ್ಮಿ ಕರಿಗಣ್ಣವರ ಶಿಕ್ಷಕಿ ಉಪಸ್ಥಿತರಿದ್ದರು.