ಪೋಲಿಸ್ ಕರ್ತವ್ಯ ಕೂಟ ಸ್ಪರ್ಧೆಯಲ್ಲಿ ಇಂಡಿಗೆ ಎಷ್ಟು ಚಿನ್ನದ ಪದಕ ಗೊತ್ತಾ..?
ಇಂಡಿ: ಇತ್ತೀಚೆಗೆ ಬೆಳಗಾವಿಯಲ್ಲಿ ನಡೆದ ಉತ್ತರ ವಲಯ ಮಟ್ಟದ ಪೋಲಿಸ್ ಕರ್ತವ್ಯ ಕೂಟ ಸ್ಪರ್ಧೆಯಲ್ಲಿ ಇಂಡಿಯ ಗ್ರಾಮಾಂತರ ಸಿಪಿಐ ಮಲ್ಲಿಕಾರ್ಜುನ ಎಂ. ಡಪ್ಪಿನ ಅವರು ಪ್ರಥಮ ಸ್ಥಾನ ಪಡೆದು ಆರು ಚಿನ್ನದ ಪದಕ ಪಡೆದಿದ್ದಾರೆ.
ಸಾಧನೆ ಮಾಡಿದ ಡಪ್ಪಿನ ಅವರಿಗೆ ಬೆಳಗಾವಿ ಉತ್ತರ
ವಲಯದ ಪೋಲಿಸ್ ಮಹಾನಿರ್ದೇಶಕ ವಿಕಾಸಕುಮಾರ
ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಮಲ್ಲಿಕಾರ್ಜುನ ಡಪ್ಪಿನ 2005 ರಲ್ಲಿ ತರಬೇತಿ ಪಡೆದು ಬೆಳಗಾವಿಯಲ್ಲಿ ಪ್ರೊಬೇಷನರಿ ಅವಧಿ ಪೂರ್ಣಗೊಳಿಸಿ ಹುಬ್ಬಳ್ಳಿ ಧಾರವಾಡ ರಾಯಚೂರು, ಯಾದಗಿರಿ ಬೀದರ್,
ಕಲಬುರಗಿ, ಬಳ್ಳಾರಿ, ವಿಜಯನಗರ ಠಾಣೆಗಳಲ್ಲಿ
ಕಾರ್ಯನಿರ್ವಹಿಸಿದ್ದಾರೆ. ಪೋಲಿಸ್ ವೃತ್ತಿ ನೈಪುಣ್ಯತೆಯೊಂದಿಗೆ ಕೈಗೊಳ್ಳ ಬೇಕಾದ ವೈಜ್ಞಾನಿಕ ಕಾನೂನು ಜ್ಞಾನ, ಸಾಕ್ಷಿಗಳ ಸಂಗ್ರಹದಲ್ಲಿ ನೈಪುಣ್ಯತೆ ಬೆರಳಚ್ಚು ತನಿಖೆ, ವಿಧಿ ವಿಜ್ಞಾನ, ಪಾದದ ಮುದ್ರೆ, ಫೋಟೋ ವಿಡಿಯೋಗ್ರಫಿ, ಶ್ವಾನದಳಪೋಲಿಸ್ ವೃತ್ತಿಪರ ತನಿಖೆ ಸೇರಿದಂತೆ ಹಲವು ಮಹತ್ವದ ಪರೀಕ್ಷೆಯಲ್ಲಿ ಸಿಪಿಐ ಎಂ.ಎಂ. ಡಪ್ಪಿನರವರು
ಅತ್ಯುತ್ತಮ ಸಾಧನೆ ತೋರಿ ಬಹುಮಾನ ತನ್ನದಾಗಿಸಿಕೊಂಡಿದ್ದಾರೆ.
ಲಖನೌದಲ್ಲಿ 67 ನೇ ರಾಷ್ಟ್ರೀಯ ಕರ್ತವ್ಯ ಕೂಟ
ಹಿನ್ನೆಲೆಯಲ್ಲಿ ಎಲ್ಲ ತಾಲೂಕು, ಜಿಲ್ಲಾ ಹಾಗೂ ವಲಯ
ಮಟ್ಟದಲ್ಲಿ ಪೋಲಿಸ ಕರ್ತವ್ಯ ಕೂಟ ಆಯೋಜಿಸಿ
ವಿಜೇತರನ್ನು ರಾಜ್ಯ ಮಟ್ಟದ ಸ್ಪರ್ಧೇಗೆ ಆಯ್ಕೆ ಮಾಡಿ
ಕಳುಹಿಸಲಾಗುವದು. ಅಲ್ಲೂ ಉತ್ತಮ ಪ್ರದರ್ಶನ ನೀಡಿ
ಆಯ್ಕೆಯಾಗುವ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ವೃತ್ತಿ
ಪರತೆಯ ಬಗ್ಗೆ ಹೆಚ್ಚಿನ ತರಬೇತಿ ನೀಡಿ ರಾಷ್ಟ್ರೀಯ ಪೋಲಿಸ್ ಕರ್ತವ್ಯ ಕೂಟಕ್ಕೆ ಕಳುಹಿಸಲಾಗುತ್ತಿದೆ. ಅಖಿಲ
ಭಾರತ ಮಟ್ಟದಲ್ಲಿ ನಡೆಯುವ ಈ ಸ್ಪರ್ಧೆಯಲ್ಲಿ
ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಸಾಧನೆ ಮಾಡಿದ ದೇಶದ ಎಲ್ಲ ರಾಜ್ಯಗಳ ಪೋಲಿಸ ಅಧಿಕಾರಿ ಸಿಬ್ಬಂದಿ ಪಾಲ್ಗೊಳ್ಳಲಿದ್ದಾರೆ.