ಲಿಂಗಸುಗೂರು: ರಾಯಚೂರು ಜಿಲ್ಲೆಯ ಲಿಂಗಸುಗೂರಿನಿಂದ ಮಹಾರಾಷ್ಟ್ರದ ಪುಣೆಗೆ ತೆರಳಿದ್ದ ಕಲ್ಯಾಣ ಕರ್ನಾಟಕ ಸಾರಿಗೆಯ ಬಸ್ ಮೇಲೆ ಕೆಲ ಕಿಡಿಗೇಡಿಗಳು ಮಸಿ ಬಳಿದು, ವಿರೂಪಗೊಳಿಸಿದ್ದಾರೆ. ಕೇಸರಿ ಬಣ್ಣದಲ್ಲಿ ಶಿವಸೇನೆ ಮತ್ತು ಶಿವಾಜಿ ಮಹಾರಾಜ ಎಂದು ಬರೆಯಲಾಗಿದೆ.
ಶನಿವಾರ ತಂಡೋಪತಂಡವಾಗಿ ಬಂದ ಯುವಕರು, ಕನ್ನಡಿಗರು ಮತ್ತು ಕರ್ನಾಟಕ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಂತರ ಕರ್ನಾಟಕದ ಬಸ್ಗಳ ಮೇಲೆ ಮನಸೋಇಚ್ಛೆ ಬರೆದು ವಿರೂಪಗೊಳಿಸಿದರು. ಅವರನ್ನು ತಡೆಯಲು ಸಾಧ್ಯವಾಗಲಿಲ್ಲ’ ಎಂದು ಬಸ್ ಚಾಲಕರಾದ ಕಾಶಿಂಸಾಬ ಮತ್ತು ಸಿದ್ದಪ್ಪ ತಿಳಿಸಿದರು.