ಇಂಡಿ : ಕಿಡಿಗೇಡಿಗಳು ಅಂಗಡಿಗೆ ಬೆಂಕಿ ಹಚ್ಚಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿ ನಡೆದಿದೆ. ಮಹಾವೀರ ಸರ್ಕಲ್ ನಲ್ಲಿರುವ ಪ್ರಮೋದ ಟ್ರೆಡರ್ಸ್ ಅಂಗಡಿ ಭಸ್ಮವಾಗಿದೆ. ವಿರೇಂದ್ರ ಪಾಂಡ್ರೆ ಎಂಬುವವರಿಗೆ ಸೇರಿದ್ದ ಸಗಟು ವ್ಯಾಪ್ಯಾರ ಮಳಿಗೆ ಹಾನಿಯಾಗಿದೆ. ಸಾಬೂನು, ಶಾಂಪೋ, ಬಿಸ್ಕತ್, ತಂಬಾಕು ಉತ್ಪನ್ನಗಳು ಸೇರಿ ಅಂದಾಜು 20 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಭಸ್ಮವಾಗಿವೆ. ಇಂಡಿ ಶಹರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.