ಹಿರೇಬೇವನೂರದಲ್ಲಿ ಬಸವ ಜಯಂತಿ
ಇಂಡಿ : ತಾಲೂಕಿನ ಹಿರೇಬೇವನೂರ ಗ್ರಾಮದಲ್ಲಿ ಬಸವ ಸಮಿತಿ ಹಾಗೂ ಶ್ರೀ ಬಸವೇಶ್ವರ ಗಜಾನನ ಯುವಕ ಮಂಡಳಿ ಇವರ ಸಹಯೋಗದಲ್ಲಿ ಗ್ರಾಮದ ಬಸವೇಶ್ವರ ವೃತ್ತದಲ್ಲಿ 12ನೇ ಶತಮಾನದ ಕ್ರಾಂತಿಕಾರಿ ಅಣ್ಣ ಬಸವಣ್ಣನವರ 891ನೇ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಸೋಮಶೇಖರ ಪಾತಾಳಿ, ಬಸವ ಸಮಿತಿ ಅಧ್ಯಕ್ಷ ಹಾಗೂ ಗ್ರಾ ಪಂ. ಸದಸ್ಯ ಅಯ್ಯನಗೌಡ ಬಿರಾದಾರ,ಗ್ರಾ,ಪಂ ಅಧ್ಯಕ್ಷರಾದ ಶ್ರೀಮತಿ ಶೈಲಾಜಾ ಜಾದವ ಮುಖ್ಯ ಅತಿಥಿಗಳಾಗಿ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಆರ್. ಡಿ ಪಿಕೆಪಿಎಸ್ ಮಾಜಿ ಅಧ್ಯಕ್ಷ ಭೀಮರಾಯಗೌಡ ಬಿರಾದಾರ ಬಸವಣ್ಣನವರ ಕುರಿತು ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಗ್ರಾ ಪಂ ಅಧ್ಯಕ್ಷ ಮುತಪ್ಪ ಚಿಕ್ಕಬೇನೂರ, ಶಿವಶಂಕರ ಮೇತ್ರಿ, ಸೋಮಶೇಖರ ಕುಂಬಾರ, ಮುದಕಪ್ಪ ಸೋಲಪೂರ, ಊರಿನ ಸಮಸ್ತ ಗ್ರಾಮಸ್ಥರು ಭಾಗವಹಿಸಿದ್ದರು.


















