ಇಂಡಿ : ಇಂಡಿ ಪಟ್ಟಣದಿಂದ ಅಂಜುಟಗಿ, ಝಳಕಿ, ಜೇವೂರ ಮಾರ್ಗವಾಗಿ ಚಡಚಣ ಪಟ್ಟಣಕ್ಕೆ ತೆರಳುವ ಬಸ್ಸುಗಳು ಸರಿಯಾದ ಸಮಯಕ್ಕೆ ತೆರುಳುತ್ತಿಲ್ಲ. ದಿನ ನಿತ್ಯವೂ ಸಮಸ್ಯೆಗಳಲ್ಲಿಯೇ ನಮ್ಮ ವಿಧ್ಯಾರ್ಥಿಯ ಜೀವನ ಹಾಳಾಗುತ್ತಿದೆ . ಸರಿಯಾದ ಸಮಯಕ್ಕೆ ಬಸ್ ಸೌಕರ್ಯ ಕಲ್ಪಿಸಿ ಎಂದು ಅಂಜುಟಗಿ ಗ್ರಾಮದಲ್ಲಿ ನೂರಾರು ವಿದ್ಯಾರ್ಥಿಗಳು ಬಸ್ ತಡೆದು ಪ್ರತಿಭಟನೆ ನಡೆಸಿದರು.
ಸ್ಥಳಕ್ಕೆ ಪೋಲಿಸ್ ಅಧಿಕಾರಿಗಳು ಬೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸಿದರು. ತದನಂತರ ಬಸ್ ಸಮಸ್ಯೆ ಕುರಿತು ಕೂಡಲೇ ಮೇಲಾಧಿಕಾರಿಗಳ ಗಮನಕ್ಕೆ ತರುತ್ತೆವೆ ಎಂದು ತೀಳಿ ಹೇಳಿದ ನಂತರ ಪ್ರತಿಭಟನೆ ಕೈ ಬಿಟ್ಟರು. ಅಜುಂಟಗಿ ಗ್ರಾಮದಿಂದ ನೂರಾರು ವಿದ್ಯಾರ್ಥಿಗಳು ದಿನನಿತ್ಯ ಸಮೀಪದ ಝಳಕಿ ಗ್ರಾಮದಲ್ಲಿ ಇರುವ ಸರಕಾರಿ ಪ್ರೌಢಶಾಲೆಗೆ ಹಾಗೂ ಕಾಲೇಜು ಹೋಗಲಿಕ್ಕೆ ಸರಿಯಾದ ಸಮಯಕ್ಕೆ ಬಸ್ ಇಲ್ಲದಿರುವುದರುವ ಬಗ್ಗೆ ಸಾಕಷ್ಟು ಬಾರಿ ಇಂಡಿ ಘಟಕಕ್ಕೆ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಕೂಡಲೇ ಅಂಜುಟಗಿ ಗ್ರಾಮದಿಂದ ಝಳಕಿ ಗ್ರಾಮದ ಶಾಲೆ-ಕಾಲೇಜುಗೆ ತೆರಳಲು ಬೆಳಗ್ಗೆ 8:0, 8:30 ಹಾಗೂ 9 ಘಂಟೆಗೆ ಮತ್ತು ಸಾಯಂಕಾಲ 4:0, 4:30, 5 ಗಂಟೆಗೆ ಬಸ್ ಸೌರ್ಕಯ ಕಲ್ಪಿಸಬೇಕೆಂದು ಆಗ್ರಹಿಸಿದರು