ವಿಜಯಪುರ : ಮನೆಯ ಆವರಣದಲ್ಲಿ ಅವಿತುಕೊಂಡಿರುವ ಉರಗವನ್ನು ಉರಗ ರಕ್ಷಕನೋರ್ವ ರಕ್ಷಣೆ ಮಾಡಿರುವ ಘಟನೆ ವಿಜಯಪುರ ನಗರದ ಸಾಯಿ ಪಾರ್ಕದ ಹತ್ತಿರ ನಡೆದಿದೆ. ವಿಜಯಪುರ ನಗರದ ನಿವಾಸಿ ಅಬ್ದುಲ್ ರೆಹಮಾನ್ ಹುಲ್ಲೂರ್ ಉರಗ ರಕ್ಷಿಸಿ ಮತ್ತೇ ಕಾಡಿಗೆ ಬಿಟ್ಟು ಬಂದಿದ್ದಾನೆ. ಸಾಯಿ ಪಾರ್ಕ್ ನಿವಾಸಿ ಉಳ್ಳಾಗಡ್ಡಿ ಎನ್ನುವರ ಮನೆಯ ಆವರಣದಲ್ಲಿ ಸ್ನೇಕ್ ಕಾಣಿಸಿಕೊಂಡಿದೆ. ಅದಕ್ಕಾಗಿ ತಕ್ಷಣವೇ ಉರಗ ರಕ್ಷಕ ಅಬ್ದುಲ್ ಅವರಿಗೆ ಕರೆ ಮಾಡಿದ್ದಾರೆ. ತಕ್ಷಣವೇ ಆಗಮಿಸಿ ಉರಗವನ್ನು ರಕ್ಷಣೆಗೈದಿದ್ದಾರೆ. ಈಗಾಗಲೇ ಅಬ್ದುಲ್ 25ಕ್ಕಿಂತ್ ಹೆಚ್ಚು ಹಾವು ರಕ್ಷಿಸಿದ್ದು, ಯಾವುದೇ ಒಂದು ಸಲಕರಣೆ ಇಲ್ಲದೆ ಬರಿಗೈಯಿಂದ ಈತ ಹಾವು ರಕ್ಷಿಸುತ್ತಾನೆ. ನಾಡಿಗೆ ಬಂದ ಹಾವುಗಳನ್ನು ಸುರಕ್ಷಿತವಾಗಿ ಕಾಡಿಗೆ ಬಿಡುವುದು ಇವರ ಕಾಯಕ ಆಗಿದೆ. ಈ ಕಾರ್ಯಕ್ಕೆ ಸ್ಥಳೀಯರು ಭೇಷ್ ಎನ್ನುತ್ತಿದ್ದಾರೆ.