ಐತಿಹಾಸಿಕ ಸಿದ್ದೇಶ್ವರ ಜಾತ್ರೆಯಲ್ಲಿ ಬ್ಯಾನರ್ ವಾಗ್ದಾದ್..!
ವಿಜಯಪುರ: ಐತಿಹಾಸಿಕ ಸಿದ್ದೇಶ್ವರ ಜಾತ್ರೆಯಲ್ಲಿ ಮುಸ್ಲಿಂಮರಿಗೆ ವ್ಯಾಪಾರಕ್ಕೆ ಅವಕಾಶ ನೀಡದಂತೆ ಹಿಂದೂ ಸಂಘಟನೆಗಳು ಹಾಕಿದ್ದ ಬ್ಯಾನರ್‌ಗಳನ್ನು ಸಿದ್ದೇಶ್ವರ ಸಂಸ್ಥೆ ಪದಾಧಿಕಾರಿಗಳು ತೆರವು ಮಾಡಿದರು. ವಿಜಯಪುರ ನಗರದ ಸಿದ್ಧೇಶ್ವರ ದೇವಸ್ಥಾನ ಎದುರು ಬ್ಯಾನರ್ ತೆರವು ವಿಚಾರವಾಗಿ ಹಿಂದೂ ಸಂಘಟನೆ ಮುಖಂಡರು ಹಾಗೂ ಸಂಸ್ಥೆ ಪದಾಧಿಕಾರಿ ನಡುವೆ ಮಾತಿನ ಚಕಮಕಿ ಆಗಿದೆ. ಶ್ರೀರಾಮ ಸೇನೆ ಮುಖಂಡ ನೀಲಕಂಠ ಕಂದಗಲ್ ಹಾಗೂ ಸಿದ್ದೇಶ್ವರ ಸಂಸ್ಥೆ ಪದಾಧಿಕಾರಿ ಈ ಘಟನೆ ಆಗಿದೆ. ಅಲ್ಲದೇ, ಸಿದ್ದೇಶ್ವರ ಜಾತ್ರೆಯಲ್ಲಿ ಮುಸ್ಲಿಂಮರಿಗೆ ಅವಕಾಶ ನೀಡದಂತೆ ಹಿಂದೂ ಸಂಘಟನೆಗಳು ಈ ಹಿಂದೆ ಮನವಿ ಮಾಡಿದರು. ಸಿದ್ದೇಶ್ವರ ಸಂಸ್ಥೆಯ ಅಧ್ಯಕ್ಷ ಹಾಗೂ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಗೆ ಮನವಿ ಮಾಡಿದರು. ಬಳಿಕ ಸಿದ್ದೇಶ್ವರ ದೇವಸ್ಥಾನದ ಮುಂಭಾಗ ಮುಸ್ಲಿಂಮರಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದು ಬ್ಯಾನರ್ ಕಟ್ಟಲಾಗಿತ್ತು. ಆದ್ರೇ, ಏಕಾಏಕಿ ಬ್ಯಾನರ್ ತೆಗೆಯಲು ಸಿದ್ದೇಶ್ವರ ಸಂಸ್ಥೆ ಸಿಬ್ಬಂದಿಗಳು ಮುಂದಾಗಿದ್ದಾಗ ಈ ವೇಳೆ ಹಿಂದೂ ಸಂಘಟನೆ ಮುಖಂಡರು ಹಾಗೂ ಸಿಬ್ಬಂದಿ ನಡುವೆ ವಾಗ್ವಾದ ಆಗಿದೆ. ಬ್ಯಾನರ್ ತೆರವು ಮಾಡಲು ಮುಂದಾದ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಶಾಸಕ ಯತ್ನಾಳ್‌ಗೆ ಹಿಂದೂ ಮುಖಂಡರು ಆಗ್ರಹಿಸಿದ್ದಾರೆ. ಬರುವ ಜನೆವರಿ 12 ರಿಂದ 18 ವರಗೆ ವಿಜಯಪುರದ ಐತಿಹಾಸಿಕ ಸಿದ್ದೇಶ್ವರ ಜಾತ್ರೆ ನಡೆಯಲಿದೆ.