ಬೆಳಗಾವಿ : ಬಹಿಷ್ಕಾರಕ್ಕೆ ಒಳಗಾದ ಕುಟುಂಬಕ್ಕೆ ಸ್ವಾಂತನ ಹೇಳಿ, ಪ್ರತಿ ಕುಟುಂಬಕ್ಕೆ ರೇಷನ್ ವಿತರಿಸಿ ಮಾನವಿಯತೇ ಸಂದೇಶ ಸಾರಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಬೆಳಗಾವಿ ಜಿಲ್ಲಾ ಘಟಕ.
ಹೌದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚಿಕ್ಕ ಮುನವಳ್ಳಿ ಗ್ರಾಮದಲ್ಲಿ ದಲಿತರಿಗೆ ಸವರ್ಣಿಯರಿಂದ ಬಹಿಷ್ಕಾರ ಹಾಕಲಾಗಿತ್ತು. ಅದನ್ನು ಗಮನಿಸಿದ ಕರ್ನಾಟಕ ದಲಿತ ಸಂಘರ್ಷ ಸಮಿತಿ ಭೀಮವಾದ ಸಂಘಟನೆ ಹಾಗೂ ಸಮಾಜ ಕಲ್ಯಾಣ ಇಲಾಖೆಯ ನೇತೃತ್ವದಲ್ಲಿ ಬಹಿಷ್ಕಾರಕ್ಕೆ ಒಳಗಾದ ಕುಟುಂಬಗಳಿಗೆ ಒಂದು ತಿಂಗಳಕ್ಕೆ ಆಗುವಷ್ಟು 25 ಕೆಜಿ ಅಕ್ಕಿ, 10 ಕೆಜಿ ಗೋಧಿ ಹಿಟ್ಟು, 5 ಕೆಜಿ ಬೆಳೆ, 5 ಕೆಜಿ ಸಕ್ಕರೆ,3 ಪಾಕಿಟ್ ಎಣ್ಣೆ, ಒಂದು ಕೆಜಿ ಚಹಾಪುಡಿ, ಕೆಜಿ ಕಾರದಪುಡಿ ಪ್ರತಿ ಕುಟುಂಬಕ್ಕೆ ಹಂಚಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಾಲಕ ರವಿ ಬಿಸ್ತವಡಕರ್, ನೌಕರ ಸಂಘದ ರಾಜ್ಯ ಸಂಚಾಲಕ ಬಸವರಾಜ ರಾಯವಗೌಲ, ಸಂಘಟನೆಯ ಹಿರಿಯರು ಯುವಕರು ಪ್ರಮುಖರು ಮತ್ತು ಸಂಘಟನೆಯ ಪದಾಧಿಕಾರಿಗಳು ಭಾಗಿಯಾಗಿದ್ದರು.