ಅಂತರ ರಾಜ್ಯ ಮೇವು ಸಾಗಣೆ ನಿಷೇದ
ಇಂಡಿ: ತಾಲೂಕಿನಿಂದ ಗಡಿ ಮಹಾರಾಷ್ಟ್ರ ಭಾಗಕ್ಕೆ ಮೇವು ಸಾಗಾಣಿಕೆ ಮತ್ತು ಮಾರಾಟ ಮಾಡದಂತೆ ತಹಸೀಲ್ದಾರ ಮಂಜುಳಾ ನಾಯಿಕ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಆದೇಶದಂತೆ ಅಗರಖೇಡ ಗ್ರಾಮದ
ಹತ್ತಿರ ಚೆಕ್ ಪೋಸ್ಟ ನಿಯೋಜಿಸಲಾಗಿದೆ. ಪ್ರತಿದಿನ
ಪಂಚಾಯತ ರಾಜ, ಕಂದಾಯ, ಪಶು ಸಂಗೋಪನೆ
ಮತ್ತು ಪೋಲಿಸ ಇಲಾಖೆ ಸಿಬ್ಬಂದಿ ತಂಡವನ್ನು ರಚಿಸಿ 24*7 ರಂತೆ ಸದರಿ ತಂಡವನ್ನು ರಚಿಸಿದ್ದು ಕಾರ್ಯನಿರ್ವಹಿಸಲು ತಿಳಿಸಲಾಗಿದೆ. ಮೇಲು ಉಸ್ತುವಾರಿಯಾಗಿ ಡಾ. ಪ್ರಕಾಶ ಮಿರ್ಜಿ
ಪಶು ವೈದ್ಯಾಧಿಕಾರಿಗಳು ಅಗರಖೇಡ ಮತ್ತು
ಕಂದಾಯ ನೀರಿಕ್ಷಕ ಎಚ್.ಎಚ್. ಗುನ್ನಾಪುರ ಇವರು
ನೋಡಿಕೊಳ್ಳುರೆಂದು ತಹಸೀಲ್ದಾರ ತಿಳಿಸಿದ್ದಾರೆ.
ಪ್ರತಿ ತಂಡವು ಬೆಳಗ್ಗೆ 6 ಗಂಟೆಯಿಂದ ಸಾಯಂಕಾಲ 6
ಗಂಟೆಯ ವರೆಗೆ ಮತ್ತು ಸಾಯಂಕಾಲ 6 ಗಂಟೆಯಿಂದ
ಬೆಳಗ್ಗೆ 6 ಗಂಟೆಯ ವರೆಗೆ ಪ್ರತಿದಿನ ಕಾರ್ಯ ನಿರ್ವಹಿಸುವರು. ತಮ್ಮ ಆಧೀನದಲ್ಲಿ ಬರುವ ಸಿಬ್ಬಂದಿಗಳಿಗೆ ಆದೇಶವನ್ನು ಜಾರಿಯು ಸದರಿಯ ಪ್ರಕಾರ ಕಾರ್ಯ ನಿರ್ವಹಿಸಲು ತಹಸೀಲ್ದಾರ ಸೂಚಿಸಿದ್ದಾರೆ.