ಬಾಲಚಂದ್ರ ಹುಲ್ಲೂರ ಡಿ.ಎಸ್.ಎಸ್. ಅಂಬೇಡ್ಕರ್ ಧ್ವನಿ (ಕಾದ್ರೋಳ್ಳಿ ಬಣ) ವಿಜಯಪುರ ಜಿಲ್ಲಾ ಅಧ್ಯಕ್ಷರಾಗಿ ಆಯ್ಕೆ
ವರದಿ :ಬಸವರಾಜ ಕುಂಬಾರ,ಮುದ್ದೇಬಿಹಾಳ ವಿಜಯಪುರ
ಮುದ್ದೇಬಿಹಾಳ: ದಲಿತ ಸಂಘರ್ಷ ಸಮಿತಿ – ಅಂಬೇಡ್ಕರ್ ಧ್ವನಿ (ಚಂದ್ರಕಾಂತ ಎಸ್. ಕಾದ್ರೋಳ್ಳಿ ಬಣ) ಸಂಘಟನೆಯ ಪದಾಧಿಕಾರಿಗಳ ಪುನರ್ಆಯ್ಕೆ ಪ್ರಕ್ರಿಯೆಯನ್ನು ಡಿಸೆಂಬರ್ ತಿಂಗಳಲ್ಲಿ ಜಿಲ್ಲೆಯ ಮಟ್ಟದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.
ಈ ವೇಳೆ ಸಂಘಟನೆಯ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಚಂದ್ರಕಾಂತ ಎಸ್. ಕಾದ್ರೋಳ್ಳಿ ಅವರು ಬಾಲಚಂದ್ರ ಹುಲ್ಲೂರ ಅವರನ್ನು ವಿಜಯಪುರ ಜಿಲ್ಲಾ ಅಧ್ಯಕ್ಷರಾಗಿ ಅಧಿಕೃತವಾಗಿ ಆಯ್ಕೆ ಮಾಡಿ ನೇಮಕಾತಿ ಆದೇಶವನ್ನು ಹಸ್ತಾಂತರಿಸಿದರು.
ಸಂಘಟನೆಯ ಸಂವಿಧಾನಾತ್ಮಕ ಮೌಲ್ಯಗಳು, ಸಾಮಾಜಿಕ ನ್ಯಾಯ, ಸಮಾನತೆ ಹಾಗೂ ದಲಿತರ ಹಕ್ಕುಗಳ ರಕ್ಷಣೆಯನ್ನು ಪ್ರಧಾನ ಗುರಿಯಾಗಿ ಇಟ್ಟುಕೊಂಡು ಜಿಲ್ಲೆಯಲ್ಲಿ ಸಂಘಟನೆಯ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ಜವಾಬ್ದಾರಿಯನ್ನು ನೂತನ ಜಿಲ್ಲಾಧ್ಯಕ್ಷರು ವಹಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ನೇಮಕಾತಿಗೆ ಸಂಘಟನೆಯ ನೂತನ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಸಂತಸ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ವಿಜಯಪುರ ಜಿಲ್ಲೆಯಲ್ಲಿ ದಲಿತ ಸಮಸ್ಯೆಗಳ ಕುರಿತು ಸಂಘಟಿತ ಹೋರಾಟ, ಜಾಗೃತಿ ಕಾರ್ಯಕ್ರಮಗಳು ಮತ್ತು ಸಾಮಾಜಿಕ ಚಟುವಟಿಕೆಗಳು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಲಿವೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಬಾಲಚಂದ್ರ ಹುಲ್ಲೂರ ಅವರ ಆಯ್ಕೆಯಿಂದ ದಲಿತ ಸಂಘರ್ಷ ಸಮಿತಿ – ಅಂಬೇಡ್ಕರ್ ಧ್ವನಿ (ಕಾದ್ರೋಳ್ಳಿ ಬಣ) ಸಂಘಟನೆಯ ಜಿಲ್ಲಾಮಟ್ಟದ ಚಟುವಟಿಕೆಗಳಿಗೆ ಹೊಸ ಚೈತನ್ಯ ದೊರೆಯಲಿದೆ ಎಂದು ಸಂಘಟನೆಯ ಮುಖಂಡರು ಅಭಿಪ್ರಾಯಪಟ್ಟಿದ್ದಾರೆ.