VOJ ನ್ಯೂಸ್ ಡೆಸ್ಕ್:
ಶಿವಮೊಗ್ಗ: ಹಿಂದೂ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದ ಹರ್ಷಾ ಎನ್ನುವ ವ್ಯಕ್ತಿಯನ್ನು ನಿನ್ನೆ ರಾತ್ರಿ 9:00 ಗಂಟೆಯ ವೇಳೆಗೆ ನಾಲ್ಕೈದು ಜನರ ಹಂತಕ ತಂಡವೊಂದು ಹರ್ಷಾರನ್ನು ಮಾರಾಕಾಸ್ತ್ರಗಳಿಂದ ಕೊಚ್ಚಿ ಪರಾರಿಯಾಗಿದ್ದರು. ವಿಷಯ ತಿಳಿದ ಪೊಲೀಸರು ಮೂವರು ಆರೋಪಿಗಳನ್ನು ಈಗಾಗಲೇ ಬಂಧಿಸಿದ್ದಾರೆ ಎನ್ನಲಾಗುತ್ತಿದೆ. ಇನ್ನು ಹರ್ಷಾ ಪಾರ್ಥಿವ ಶರೀರದ ಮೆರವಣೆಗೆ ವೇಳೆ ಕೆಲವು ಪ್ರದೇಶಗಳಲ್ಲಿ ಕಲ್ಲು ತೂರಾಟ ನಡೆದಿದೆ. ಸ್ವತಃ ಜಿಲ್ಲಾಧಿಕಾರಿ ಸೆಲ್ವಮಣಿ ಅವರೇ ಮುಂದೆ ನಿಂತು ಪರಿಸ್ಥಿತಿ ನಿಭಾಹಿಸುತ್ತಿದ್ದಾರೆ. ಇದೇ ವೇಳೆ ಪರಿಸ್ಥಿತಿ ನಿಯಂತ್ರಿಸಲು ಪೊಲೀಸರು ಅಶ್ರುವಾಯು ಸಿಡಿಸಿದ್ದಾರೆ. ರೋಟರಿ ಚಿತಾಗಾರದತ್ತ ಪಾರ್ಥಿವ ಶರೀರವನ್ನು ಮೆರವಣಿಗೆಯಲ್ಲಿ ಕೊಂಡೊಯ್ಯಲಾಗುತ್ತಿದೆ. ಸಂಸದ ರಾಘವೇಂದ್ರ ಮತ್ತು ಸಚಿವ ಈಶ್ವರಪ್ಪ ಹರ್ಷಾ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿ ಅಂತಿಮ ನಮನ ಸಲ್ಲಿಸಿದ್ದಾರೆ.