ಇಂಡಿ : ಸಂವಿಧಾನ ಶಿಲ್ಪಿ ಡಾ. ಬಿ ಆರ್ ಅಂಬೇಡ್ಕರ್ ನ್ನ ಪೂಜಿಸಬೇಕು, ಆರಾಧಿಸಬೇಕು. ಅವರ ತತ್ವ, ಸಿದ್ದಾಂತ ಆದರ್ಶ ಮೈಗೂಡಿಸಿಕೊಳ್ಳಬೇಕು. ಏಕೆಂದರೆ ?
ಪ್ರತಿಕ್ಷೇತದ ರಂಗದಲ್ಲೂ ಎಲ್ಲಾ ಜಾತಿ, ಎಲ್ಲಾ ಧರ್ಮದವರಿಗೆ ಸಮಾನದ ಸಂವಿಧಾನ ನೀಡಿದ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಎಂದು ಶಿವಾಜಿ ಮೇಟಗಾರ ಹೇಳಿದರು.
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ನಿಂಬಾಳ ಕೆ ಡಿ ಗ್ರಾಮದಲ್ಲಿ ಡಾ ಬಾಬಾಸಾಹೇಬ್ ಅಂಬೇಡ್ಕರ್ ಅವರ ೧೩೧ ನೇ ಜಯಂತಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಹಿಂದುಳಿದ ಜನರ ಅಭಿವೃದ್ಧಿಗೆ ದಿನ ದಲಿತರ ಒಲಿತಿಗಾಗಿ ಹಗಳಿರುಳು ಶ್ರಮಿಸಿದ ಏಕ ಮಾತ್ರ ನಾಯಕ ಅಂಬೇಡ್ಕರ್.
ಮನುವಾದಿಗಳ ಕುತಂತ್ರವನ್ನು ಗಟ್ಟಿಯಾದ ದ್ವನಿಯಲ್ಲಿ ಪ್ರತಿದ್ವನಿಸಿದ ನಾಯಕ. ಪವರ ಪರಿಶ್ರಮದ ಪಲವೇ ನಾವು ಸರ್ವ ಜನರಲ್ಲಿ ಕುಳಿತುಕೊಳ್ಳಲು ಅವಕಾಶ ಸಿಕ್ಕಿದ್ದು, ಸಮಾಜದಲ್ಲಿ ಎಲ್ಲರೂ ಸಮಾನರು ಎಲ್ಲಾ ಜಾತಿ ಧರ್ಮಗಳಿಗೆ ಸಮಾನ ರೀತಿಯ ನ್ಯಾಯದ ಪರಿಕಲ್ಪನೆ ನೀಡಿದ ಕೊಡುಗೆ ಅವರಿಗೆ ಸಲ್ಲುತ್ತದೆ. ಮಹಿಳೆಯರಿಗಾಗಿ ನೀಡಿದ ಮೀಸಲಾತಿಗಳು ಮಹಿಳೆಯರು ಮರೆಯುವಂತಿಲ್ಲ. ಹಾಗಾಗಿ ಈ ದೇಶದ ಏಕೈಕ ಮಹಾನ ನಾಯಕ ಡಾ ಬಾಬಾಸಾಹೇಬ ಅಂಬೇಡ್ಕರ್ ಎಂದು ಮಾತಾನಾಡಿದರು.
ಈ ಸಂದರ್ಭದಲ್ಲಿ ವಾಯ್. ಸಿ. ಮಯೂರ, ಯಮನಪ್ಪ ಗುಣಕಿ, ದಸ್ತಗಿರಿ ಮುಲ್ಲಾ , ಕಲ್ಲಪ್ಪ ಅಂಜುಟಗಿ, ಸಂತೋಶ ತಳಕೇರಿ, ಪ್ರಿತು ದಶವಂತ, ರಮೇಶ ನಿಂಬಾಳಕರ, ಇನ್ನೂ ಅನೇಕ ಮುಖಂಡರು, ಯುವಕರು ಗ್ರಾಮಸ್ಥರು ಉಪಸ್ಥಿತರು.