ಸ್ನೇಹಿತನನ್ನ ಬೈದಿದ್ದಕ್ಕೆ ಪ್ರಶ್ನೇ ಮಾಡಲು ಹೋಗಿ ಅಟೋ ಚಾಲಕ ವಿಶಾಲ್ ಕೊಲೆ..!
ರಾಯಚೂರು :ಸ್ನೇಹಿತನನ್ನ ಬೈದಿದ್ದಕ್ಕೆ ಪ್ರಶ್ನೇ ಮಾಡಲು ಹೋಗಿ ಕೊಲೆಯಾದ ಯುವಕ .ಹೌದು ಇಂತಹದೊಂದು ಘಟನೆ ರಾಯಚೂರ ನಗರದ ಜಹೀರಾಬಾದ್‌ನ ಮಾವಿನ ಕೆರೆ ಬಳಿ ಬೆಳ್ಳಂಬೆಳಿಗ್ಗೆ ನಡೆದಿದೆ.
ಹಳೆ ವೈಷಮ್ಯ ಹಿನ್ನೆಲೆ ಕ್ಷುಲ್ಲಕ ಕಾರಣಕ್ಕೆ ಜಗಳ ತೆಗೆದು ಅಟೋ ಚಾಲಕ ವಿಶಾಲ್ ವಯಸ್ಸು (22) ಆತನನ್ನು ಹತ್ಯೆ ಮಾಡಲಾಗಿದೆ.
ಸ್ನೇಹಿತನನ್ನ ಬೈದಿದ್ದಕ್ಕೆ ಪ್ರಶ್ನೇ ಮಾಡಲು ಹೋಗಿದ್ದರ ಹಿನ್ನೆಲೆ ಬೆಳಗಿನ ಜಾವ 1 ಗಂಟೆ ಸುಮಾರಿಗೆ ಚಾಕುವಿನಿಂದ ಮನಬಂದಂತೆ ಇರಿದು ಹತ್ಯೆ ಮಾಡಿದ್ದಾರೆ. ಇನ್ನೂ
ಆರೋಪಿ ರಾಜು, ಬಸವರಾಜ್ ಅವರನ್ನು ಪೊಲೀಸರ ವಶಕ್ಕೆ, ಚಾಕು ಜಪ್ತಿ ಮಾಡಿದ್ದಾರೆ.ಮರಣೋತ್ತರ ಪರೀಕ್ಷೆಗಾಗಿ ರಿಮ್ಸ್ ಆಸ್ಪತ್ರೆಗೆ ಶವ ರವಾನೆಸಲಾಗಿದೆ.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಶು ಗಿರಿ
ಶವಾಗಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದರ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖುಲಾಗಿದೆ.


















