VOJ ನ್ಯೂಸ್ ಡೆಸ್ಕ್: ಆಸ್ಟ್ರೇಲಿಯಾದ ಸರ್ವಕಾಲಿಕ ಲೆಗ್ ಸ್ಪಿನ್ನರ್ ಶೇನ್ ವಾರ್ನ್ (52) ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಶೇನ್ ವಾರ್ನ್ ಥೇಲ್ಯಾಂಡ್ನ ಕೊಹ್ ಸಮುಯಿಯಲ್ಲಿ ಇಹಲೋಕ ತೈಜಿಸಿದ್ದಾರೆ. ಮನೆಯಲ್ಲಿ ಒಬ್ಬರೆ ಇದ್ದಾಗ ಹೃದಯಾಘಾತ ವಾಗಿದೆ. ವೈಧ್ಯಕೀಯ ಚಿಕಿತ್ಸೆ ನೀಡಿತಾದರೂ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ ಎಂದು ವಾರ್ನ್ ಅವರ ಮ್ಯಾನೇಜರ್ ರಿಂದ ವಿಷಯ ತಿಳಿದು ಬಂದಿದೆ ಎಂದು ಹೇಳಲಾಗುತ್ತಿದೆ. ಶೇನ್ ವಾರ್ನ್ ನಿಧನಕ್ಕೆ ಕ್ರಿಕೆಟ್ ಜಗತ್ತು ಅಘಾತವಾಗಿದೆ. ಏಕದಿನ, ಟೆಸ್ಟ್, ಐಪಿಎಲ್ ಪಂದ್ಯಗಳಲ್ಲಿ ಬೌಲರ್ ಆಗಿ ಕಾರ್ಯ ನಿರ್ವಹಿಸಿದ್ದರು ಶೇನ್ ವಾರ್ನ್. ಅಲ್ದೆ ರಾಜಸ್ಥಾನ ರಾಯಲ್ಸ್ ತಂಡದ ನಾಯಕರಾಗಿಯೂ ತಂಡವನ್ನು ಮನ್ನೆಡೆಸಿದ್ದರು. ಮಾಜಿ ಕ್ರಿಕೆಟಿಗ ಸೆಹ್ವಾಗ್ ಸೇರಿದಂತೆ ಕ್ರಿಕೆಟ್ ಜಗತ್ತು ಸಂತಾಪ ಸೂಚಿಸುತ್ತಿದೆ.