ಇಂಡಿ ಪಿ.ಎಸ್.ಐ ಕೊಲೆಗೆ ಯತ್ನ, 10 ಜನರ ಬಂಧನ
ಪಿ.ಎಸ್.ಐ ಮೇಲೆ ಹಲ್ಲೆ : ಎಫ್.ಐ.ಆರ್
ವರದಿ: ಫಯಾಜಅಹ್ಮದ್ ಬಾಗವಾನ ವಿಜಯಪುರ
ಇಂಡಿ : ಗ್ರಾಮೀಣ ಪೋಲಿಸ್ ಠಾಣಾ ಪಿ.ಎಸ್.ಐ ಸೋಮೇಶ ಗೆಜ್ಜಿ ಹಾಗೂ ಪೋಲಿಸ್ ಸಿಬ್ಬಂದಿ ಹಾಗೂ ಸಾರ್ವಜನಿಕರ ಮೇಲೆ ಕಾರು ಹಾಯಿಸಿ ಕೊಲೆಗೆ ಯತ್ನ ನಡೆಸಿರುವ ಘಟನೆ ತಾಲೂಕಿನ ಸಾತಲಗಾಂವ ಪಿ.ಐ ಗ್ರಾಮದಲ್ಲಿ ನಡೆದಿದೆ.
ಸಾತಲಗಾಂವ ಗ್ರಾಮದ ದುಂಡಪ್ಪ ಶರಣಪ್ಪ ಮುಳಸಾವಳಗಿ ಇವರು ಪೋಲಿಸ್ ಠಾಣೆಗೆ ಕರೆ ಮಾಡಿ, ನಮ್ಮ ಕುಟುಂಬದ ಮೇಲೆ ಹಲ್ಲೆ ಮತ್ತು ಕೊಲೆ ಮಾಡಲು ಒಂದು ಗುಂಪು ನಾಲ್ಕು ವಾಹನಗಳು ತೆಗೆದುಕೊಂಡು ಬಂದಿದ್ದು, ಬೆದರಿಗೆ ಹಾಕುತ್ತಿದ್ದಾರೆ ಎಂದು ತಿಳಿಸಿದರು. ಆ ನಂತರ ಸ್ಥಳಕ್ಕೆ 112 ಪೋಲಿಸರು ಬೇಟಿ ನೀಡುತ್ತಿದ್ದಾಗ, ಆಗ ಅಲ್ಲಿ ಗ್ರಾಮದ ಜನರು ಸ್ವಿಪ್ಟ ಕಾರನ್ನು ನಿಲ್ಲಿಸಿ ಅವರ ಜೊತೆ ಬಾಯಿ ಮಾಡುತ್ತಿದ್ದರು. ಆಗ ಕಾರ ಹತ್ತಿರ ಹೋಗಿ ಅದರಲ್ಲಿದ್ದವರಿಗೆ ವಿಚಾರಿಸಲಾಗಿ ಅಫಜಲಪುರ ಗ್ರಾಮದವರಾಗಿದ್ದು ತಮ್ಮ ಹೆಸರು ರವಿ ಪೂಜಾರಿ, ಸಚೀನ ಸುತಾರ, ಈಶ್ವರ ಗಂಗಾವತಿ,ಪ್ರಕಾಶ ಸೀತನೂರ ಅಂತಾ ಹೇಳಿದ್ದಾರೆ.
ಆಗ ಅವರಿಗೆ ಇನ್ನಷ್ಟು ವಿಚಾರಿಸಲು ಮಾತನಾಡುವಾಗ ಅಷ್ಟೊತ್ತಿಗೆ ಅಲ್ಲಿ ಒಂದು ಎರಟಿಗಾ ಕಾರು ಬಂದು, ಅದರ ಹಿಂದೆ ಸ್ಕಾರಪಿಯೋ ವಾಹನ ಬಂದಿದ್ದು ಅಲ್ಲಿಂದ ಎರಟಿಗಾ ವಾಹನ ತಪ್ಪಿಸಿಕೊಂಡು ಹೋಗಿದ್ದು, ಸ್ಕಾರ್ಪಿಯೋ ತಡೆದು ವಿಚಾರಿಸಲಾಗಿ ಶರಣಪ್ಪ ದೇಗಿನಾಳ, ಸೋಮೇಶ್ವರ ಸಿದ್ದಪ್ಪ ಖಾನಾಪುರ, ಶರಣಬಸು ಹಚಡದ, ಬಸವರಾಜ ಬಿರಾದಾರ, ರಾಹುಲ್ ಪವಾರ, ಬಾಳು ಜಾಧವ, ಅಂತಾ ಹೇಳಿದ್ದು ಆಗ ಶರಣ ಬಸಪ್ಪ ಇತನಿಗೆ ವಿಚಾರಿಸುತ್ತಿದ್ದಾಗ ಶರಣಬಸಪ್ಪನು ವಾಹನ ಚಾಲಕರಿಗೆ ಜೋರಾಗಿ ಕೂಗಿ ಹೇಳಿ ಅಲ್ಲಿ ಸೇರಿದ್ದ ಜನರ ಮೇಲೆ ಮತ್ತು ಪೋಲಿಸರ ಮೇಲೆ ವಾಹನ ಹಾಯಿಸಿಕೊಂಡು ಹೋಗಿ ಅಂತಾ ಕಿರಿಚಾಡಿದ್ದಾನೆ. ಪೋಲಿಸರ ಜೀಪಿನ ಎದುರಿಗೆ ಇದ್ದ ವಾಹನ ಜೋರಾಗಿ ಬಂದು ಪಿ.ಎಸ್.ಐ ಗೆಜ್ಜಿ ಮತ್ತು ಸಿಬ್ಬಂದಿಯ ಮೇಲೆ ಸ್ಕಾರಪಿಯೋ ಒಮ್ಮೆಲೆ ಮುಂದೆ ಬಂದು ಪಿ.ಎಸ್.ಐ ಮೈ ಮೇಲೆ ಹಾಯಿಸಿ ಕೊಲೆ ಮಾಡುವ ಪ್ರಯತ್ನ ಪಟ್ಟಾಗ ಪಿಎಸ್.ಐ ಮತ್ತು ಸಿಬ್ಬಂದಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ ಪಿ.ಎಸ್.ಐ ಬಲಗೈಗೆ ಮುಂಗೈಗೆ , ಎಡ ಹಸ್ತಕ್ಕೆ ಹಾಗೂ ಹೊಟ್ಟೆಗೆ ಬಡಿದು ಒಳ ಪೆಟ್ಟಾಗಿದ್ದು ಸಿಬ್ಬಂದಿ ಎಸ್.ಕೆ.ಹಳ್ಳಿ ಇವರ ಬಲಗಾಲಿನ ಮೊಳಕಾಲಿಗೆ ಒಳಪೆಟ್ಟು ಹಾಗೂ ತೆರಚಿದ ಗಾಯ, ಗಾಜು ಬಡಿದು ರಕ್ತ ಗಾಯಗಳಾಗಿವೆ. ಇನ್ನೂ ಸುಮಾರು ೫೦೦೦ ರೂ ಗಳಷ್ಟು ಸರಕಾರಿ ವಾಹನದ ನಷ್ಟ ವಾಗಿದ್ದು ಅಲ್ಲಿದ್ದ ಜನರು ಆರೋಪಿಗಳನ್ನು ಹಿಡಿದು ಊರಿನ ಜನರು ಹಲ್ಲೆಗೆ ಮುಂದಾದಾಗ ಪಿ.ಎಸ್.ಐ ರಕ್ಷಣೆ ಮಾಡಿದ್ದಾರೆ. ನಂತರ ಪಿ ಎಸ್ ಐ ಗೆಜ್ಜೆ ಇವರು ಇಂಡಿಯ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ.
ಆರೋಪಿಗಳಾದ ಶರಣಪ್ಪ ದೇಗಿನಾಳ, ಸೋಮೇಶ್ವರ ಸಿದ್ದಪ್ಪ ಖಾನಾಪುರ, ಶರಣಬಸು ಹಚಡದ, ಬಸವರಾಜ ಬಿರಾದಾರ, ರಾಹುಲ್ ಪವಾರ, ಬಾಳು ಜಾಧವ, ರವಿ ಪೂಜಾರಿ, ಸಚೀನ ಸುತಾರ ಇವರ ಮೇಲೆ ಇಂಡಿ ಗ್ರಾಮೀಣ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇನ್ನೂ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ ಸಿ.ಪಿ.ಐ ಮಲ್ಲಿಕಾರ್ಜುನ ಡಪ್ಪಿನ ೧೦ ಜನ ಆರೋಪಿಗಳನ್ನು ಬಂದಿಸಿದ್ದಾರೆ..



















