ವಿಜಯಪುರ : ಅಕ್ರಮವಾಗಿ ಸಿಲಿಂಡರ್ ಸಂಗ್ರಹಿಸಿ ಆಟೋ ಸೇರಿದಂತೆ ವಾಹನಗಳಿಗೆ ಬಳಕೆ ಮಾಡುತ್ತಿದ್ದ ಮೂರು ಅಂಗಡಿಗಳ ಮೇಲೆ ಆಹಾರ ಅಧಿಕಾರಿಗಳು, ಪೊಲೀಸರು ದಾಳಿಗೈದು 83 ಸಿಲಿಂಡರ್ ಜಪ್ತಿಗೈದಿರುವ ಘಟನೆ ನಗರದ ಜೋಡು ಗುಮ್ಮಟ ಬಳಿ ನಡೆದಿದೆ.
ನಗರದ ಬಾಗಲಕೋಟ ಕ್ರಾಸ್ ಬಳಿ ಒಂದು ಅಂಗಡಿ, ಜೋಡು ಗುಮ್ಮಟ ಬಳಿ ಎರಡು ಅಂಗಡಿಗಳ ಮೇಲೆ ದಾಳಿ ಮಾಡಿದ್ದಾರೆ. ಅಲ್ಲದೇ, ಅಕ್ರಮವಾಗಿ ಕಮರ್ಷಿಯಲ್, ಆಟೋಗಳಿಗೆ ಅನಧಿಕೃತವಾಗಿ ಬಳಕೆ ಮಾಡುತ್ತಿದ್ದರು ಎಂದು ಆಹಾರ ಅಧಿಕಾರಿ ಮಾಹಿತಿ ನೀಡಿದರು. ಗಾಂಧಿಚೌಕ್ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.