ವಿಜಯಪುರ : ಕ್ಷುಲ್ಲಕ ಕಾರಣಕ್ಕೆ ಇಬ್ಬರ ಮೇಲೆ 12 ಜನರು ಹಲ್ಲೆಗೈದಿರುವ ಘಟನೆ ವಿಜಯಪುರ ನಗರದ ಐನಾಪುರ ಕ್ರಾಸ್ ಬಳಿ ಶನಿವಾರ ನಡೆದಿದೆ. ದಿಲಶಾದ್ ವಾಲೀಕಾರ್, ಮೌಸೀನ್ ಹಲ್ಲೆಗೊಳಗಾದರು. ಇನ್ನೂ ರಶೀದ್ ಮುಲ್ಲಾ, ಶಾದುಲ್ ಮುಲ್ಲಾ, ಕೈಫ್ ನಗರಬೌಡಿ ಸೇರಿದಂತೆ 12 ಜನರು ಕಟ್ಟಿಗೆ, ಕಲ್ಲಿನಿಂದ ಹಲ್ಲೆಗೈದು ಪರಾರಿಯಾಗಿದ್ದಾರೆ. ಅಲ್ಲದೇ, ಹಲ್ಲೆಗೊಳಗಾದವರು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನೂ ಹಲ್ಲೆಗೈದಿರುವ ಆರೋಪಿಗಳ ವಿರುದ್ಧ ಕ್ರಮಕ್ಕೆ ದಿಲಶಾದ್ ಒತ್ತಾಯಿಸಿದ್ದಾರೆ. ಜಲನಗರ ಪೊಲೀಸ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.