ಇಂಡಿಯಲ್ಲಿ ಅಕ್ರಮವಾಗಿ ಅಕ್ಕಿ ಸಂಗ್ರಹಿಸಿದ ಅಡ್ಡೆಯ ಮೇಲೆ ದಾಳಿ..!
ಇಂಡಿ: ಅಕ್ರಮವಾಗಿ ಅಕ್ಕಿ ಸಂಗ್ರಹಿಸಿದ ಅಡ್ಡೆಯ ಮೇಲೆ ಖಚಿತ ಮಾಹಿತಿ ಆಧರಿಸಿ ಆಹಾರ ನಿರೀಕ್ಷಕರ ಅಧಿಕಾರಿಗಳ ನೇತೃತ್ವದಲ್ಲಿ ಪೊಲೀಸರು ದಾಳಿಗೈದಿರುವ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಶಿರಶ್ಯಾಡ ಗ್ರಾಮದಲ್ಲಿ ನಡೆದಿದೆ. ತೆಗ್ಗಿಹಳ್ಳಿ ಗ್ರಾಮದ ಅಸುದುಲ್ಲಾ ಮುಜಾವರ ಬಂಧಿತ ಆರೋಪಿ. ಇನ್ನು ಅಕ್ರಮವಾಗಿ ಶಿರಶ್ಯಾಡ ಗ್ರಾಮದಲ್ಲಿರುವ ಜಮೀನಿನಲ್ಲಿ ಅಕ್ರಮವಾಗಿ ಶೆಡ್‌ನಲ್ಲಿ ಪಡಿತರ ಅಕ್ಕಿಯಾದ ಅನ್ನಭಾಗ್ಯ ಅಕ್ಕಿ ಸಂಗ್ರಹಿಸಿದರು. ಅದಕ್ಕಾಗಿ ಪೊಲೀಸರು ದಾಳಿಗೈದು 1,89,290 ಮೌಲ್ಯದ 8230 ಕೆಜಿ ಅಕ್ಕಿಯನ್ನು ಜಪ್ತಿಗೈದಿದ್ದಾರೆ. ಇಂಡಿ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಸಂದರ್ಭದಲ್ಲಿ ಆಹಾರ ನಿರೀಕ್ಷಿಕ ಪರಮಾನಂದ ಹೂಗಾರ, ಗ್ರಾಮೀಣ ಪೋಲಿಸ್ ಠಾಣಾ ಪಿ ಎಸ್ ಐ ಮಂಜುನಾಥ ಹುಲಕುಂದ, ಎ ಎಸ್ ಐ ಪಿ.ಐ ಅರವತ್ತಿ, ಎಸ್ ಎಚ್ ನರೋಟಿ, ಎಸ್ ವೈ ಜೇರಟಗಿ, ಆರ್ ಗಡೇದ ಪೋಲಿಸ್ ಸಿಬ್ಬಂದಿ ಉಪಸ್ಥಿತರಿದ್ದರು.