- ಲಿಂಗಸೂಗೂರು:ರಾಯಚೂರ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಮುದಗಲ್ ಸರಕಾರಿ ಪ್ರಥಮ ಧರ್ಜೆ ಕಾಲೇಜು ಆವರಣದಲ್ಲಿ ಅತಿಥಿ ಉಪಾನ್ಯಾಸಕರ ಸೇವಾ ಭದ್ರತೆ ನೀಡಲು ಅನಿರ್ಧಿಷ್ಟಾವಧಿ ಧರಣಿ ನಡೆಸಲಾಯಿತು.
ಸ್ಥಳೀಯ ಅತಿಥಿ ಉಪನ್ಯಾಸಕರಿಂದ ಕಳೆದ ಡಿಸೆಂಬರ ೧೦ ರಿಂದ ಇಲ್ಲಿಯವರೆಗೂ ಧರಣಿ ಮಾಡುತ್ತಾ ಬಂದಿದ್ದೆವೆ.ಬೆಳಗಾವಿಯ ಅದಿವೇಶನದಲ್ಲಿ ಮುತ್ತಿಗೆ ಹಾಕಲಾಯಿತು. ಇಲ್ಲಿಯವರೆಗೆ ಸರ್ಕಾರ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸುವಲ್ಲಿ ಕಾಳಜಿ ವಹಿಸುತ್ತಿಲ್ಲ. ರಾಜ್ಯಾದ್ಯಂತ ೪೧೨ ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಈ ಸಮಸ್ಯೆ ಇದೆ.ಇದರಿಂದ ಯಾವದೇ ಕಾಲೇಜಿನಲ್ಲಿ ಕ್ಲಾಸ್ಗಳನ್ನು ತೆಗೆದು ಕೊಳ್ಳುದಿಲ್ಲ.ಎಲ್ಲಿಯ ವರೆಗೆ ನಮ್ಮ ಅತಿಥಿ ಉಪನ್ಯಾಸಕರ ಸೇವಾ ಭದ್ರತೆ ನೀಡುವುದಿಲ್ಲ ಅಲ್ಲಿಯ ವರೆಗೆ ನಮ್ಮ ಅನಿಧೀಷ್ಟಾವಧಿ ಧರಣಿ ಎಸ್ ಎಫ್ ಐ ಸಂಘಟನೆಯ ವಿಧ್ಯಾರ್ಥಿಗಳೊಂದಿಗೆ ಮುಂದು ವರೆಸುತ್ತೆವೆ ಎಂದು ಅತಿಥಿ ಉಪನ್ಯಾಸಕಿ ಸಿದ್ದಮ್ಮ ಹಾಗೂ ಭೀಮಣ್ಣ ಹೇಳಿದರು.