ಇಂಡಿ : ಅಟಲ್ ಜೀ ಜನಸ್ನೇಹಿ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆಪರೇಟರ್‌ಗಳನ್ನು ಮುಂದುವರೆಸಿ ಸೇವಾ ಭದ್ರತೆ ಒದಗಿಸುವಂತೆ ಇಂಡಿ ಶಾಸಕ ಯಶವಂತರಾಯಗೌಡ ಪಾಟೀಲ್ರಗೆ ರಾಜ್ಯ ನಾಢ ಕಚೇರಿ ಅಟಲ್ ಜೀ ಜನಸ್ನೇಹಿ ಕೇಂದ್ರ ನೌಕರರ ಸಂಘದವರು ಮನವಿ ಸಲ್ಲಿಸಿದರು.
ವಿಜಯಪುರ ಜಿಲ್ಲೆಯ ಇಂಡಿಯಲ್ಲಿ ಮನವಿ ಸಲ್ಲಿಸಿದ್ದು, ಅಲ್ಪ ವೇತನದಲ್ಲಿ ಕಾರ್ಯನಿರ್ವಹಿಸುತ್ತಿರುವ ಆಪರೇಟರ್ ಗಳು ಸೇವೆ ಮಾಡುತ್ತಿದ್ದಾರೆ. ಆದ್ರೇ, ಅಟಲ್ ಜೀ ಜನಸ್ನೇಹಿ ಕೇಂದ್ರವನ್ನು ಸ್ಥಗಿತಗೊಳಸದೇ ಕರ್ತವ್ಯದಲ್ಲಿ ಮುಂದುವರೆಸಿ ಸೇವಾ ಭದ್ರತೆ ನೀಡಬೇಕು. ಇನ್ನೂ ಇದನ್ನೇ ನಂಬಿಕೊಂಡಿ 1222 ಆಪರೇಟರ್ ಗಳು ಸತತ 14 ವರ್ಷಗಳಿಂದ ಸೇವೆ ಮಾಡುತ್ತಿದ್ದಾರೆ. ಅದಕ್ಕಾಗಿ ಸರ್ಕಾರದ ಸೌಲಭ್ಯಗಳನ್ನು ಒದಗಿಸಿವಂತೆ ಸಂಘದವರು ಮನವಿ ಮಾಡಿದರು. ಈ ಸಂದರ್ಭದಲ್ಲಿ ರಾಹುಲ್ ದಳವಾಯಿ, ಶಂಕರ್ ಮಡಿವಾಳ, ಸಿದ್ದು ಕೋಳಿ, ಸಹದೇವ ರಾಠೋಡ, ಮಹೇಶ್ ಬೈರಶೆಟ್ಟಿ, ಸಂಗಣ್ಣ ಶಿವಪುರ, ಸೈಬಣ್ಣ ಹಳ್ಳಿ, ಅರವಿಂದ್ ಪಾಟೀಲ್, ಹನುಮಂತ ತಳವಾರ್ ಉಪಸ್ಥಿತರು.