ರಾಯಚೂರ ಜಿಲ್ಲೆಯ ಲಿಂಗಸೂಗೂರು ತಾಲೂಕಿನ ಭಾರತೀಯ ಜನತಾ ಪಾರ್ಟಿ ಲಿಂಗಸೂಗೂರು ಮಂಡಲದ ಕಚೇರಿಯಲ್ಲಿ ದೇಶದ ಮಾಜಿ ಪ್ರಧಾನ ಮಂತ್ರಿಗಳು, ಭಾರತೀಯ ಜನತಾ ಪಾರ್ಟಿಯ ನೇತಾರರಾದ ದಿ. ಅಟಲ್ ಬಿಹಾರಿ ವಾಜಪೇಯಿ ಯವರ ಜಯಂತಿಯನ್ನು “ಸುಶಾಸನ ದಿನ”ಎಂದು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಮುಖಂಡರಾದ ಜಗನ್ನಾಥ ಕುಲಕರ್ಣಿ ಮಾಹದೇವಯ್ಯ ಸ್ವಾಮಿ ಭೀಮಸೇನ ರಾವ್ ಕುಲಕರ್ಣಿ ಮಲ್ಲಿಕಾರ್ಜುನ ಸಜ್ಜನ್, ಚನ್ನಬಸವ ಹಿರೇಮಠ, ಅನಂತದಾಸ, ವಿಶ್ವನಾಥ ಗುತ್ತೆದಾರ, ಮಹಾಂತೇಶ ನರಕಲದಿನ್ನಿ, ಸುರೇಶ ಮೇಟಿ ಉಪಸ್ಥಿತರಿದ್ದರು.