Voice of Janata : Asia Cup 2024:Sports News :
ಪಾಕ್ ವಿರುದ್ಧ ಭಾರತಕ್ಕೆ 7 ವಿಕೆಟ್ ಜಯ..!
ದಂಬುಲಾ (ಶ್ರೀಲಂಕಾ): ಪ್ರಸ್ತುತ ನಡೆಯುತ್ತಿರುವ 2024ರ ಮಹಿಳೆಯರ ಏಷ್ಯಾ ಕಪ್ ಟೂರ್ನಿಯಲ್ಲಿ ಭಾರತ ವನಿತೆಯರು ಶುಭಾರಂಭ ಕಂಡಿದ್ದಾರೆ. ಶುಕ್ರವಾರ ನಡೆದಿದ್ದ ಟೂರ್ನಿಯ ‘ಎ’ ಗುಂಪಿನ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ದ 7 ವಿಕೆಟ್‌ಗಳಿಂದ ಹರ್ಮನ್‌ಪ್ರೀತ್ ಕೌರ್ ಪಡೆ ಗೆಲುವು ಪಡೆದಿದೆ.
ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ವಿಭಾಗಗಳಲ್ಲಿ ಸಂಘಟಿತ ಪ್ರದರ್ಶನ ತೋರಿದ ಭಾರತ ಮಹಿಳಾ ತಂಡ, 2024ರ ಮಹಿಳೆಯರ ಏಷ್ಯಾ ಕಪ್ ಟೂರ್ನಿಯ ಎರಡನೇ ಪಂದ್ಯದಲ್ಲಿ ಪಾಕಿಸ್ತಾನ ಎದುರು 7 ವಿಕೆಟ್‌ಗಳ ಗೆಲುವು ಪಡೆದಿದೆ. ಆ ಮೂಲಕ ಟೂರ್ನಿಯಲ್ಲಿ ಶುಭಾರಂಭ ಪಡೆದಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ್ದ ಪಾಕಿಸ್ತಾನ ತಂಡ, 19.2 ಓವರ್‌ಗಳಿಗೆ 108 ರನ್‌ಗಳಿಗೆ ಆಲ್‌ಔಟ್ ಆಯಿತು. ಬಳಿಕ ಗುರಿ ಹಿಂಬಾಲಿಸಿದ ಭಾರತ ಮಹಿಳಾ ತಂಡ, 14.1 ಓವರ್‌ಗಳಿಗೆ 109 ರನ್ ಗಳಿಸಿ ಗೆಲುವಿನ ದಡ ಸೇರಿತು.
ಸ್ಕೋರ್ ವಿವರ
ಪಾಕಿಸ್ತಾನ ಮಹಿಳಾ ತಂಡ:
19.2 ಓವರ್‌ಗಳಿಗೆ 108-10 (ಅಮೀನ್ 25 ರನ್, ತುಬಾ ಹಸನ್ 22 ರನ್, ಫಾತಿಮಾ ಸನಾ 22 ರನ್ ; ದೀಪ್ತಿ ಶರ್ಮಾ 20ಕ್ಕೆ 3, ರೇಣುಕಾ ಸಿಂಗ್ 14ಕ್ಕೆ 2, ಶ್ರೇಯಾಂಕ ಪಾಟೀಲ್ 14ಕ್ಕೆ 2)
ಭಾರತ ಮಹಿಳಾ ತಂಡ:
14.3 ಓವರ್‌ಗಳಿಗೆ 109-3 (ಸ್ಮೃತಿ ಮಂಧಾನಾ 45 ರನ್, ಶಫಾಲಿ ವರ್ಮಾ 40; ಸೈಯದ್ ಅರೂಬ್ ಶಾ 9 ಕ್ಕೆ 2)
ಪಂದ್ಯ ಶ್ರೇಷ್ಠ ಪ್ರಶಸ್ತಿ: ದೀಪ್ತಿ ಶರ್ಮಾ