ಮಹಿಳೆಯರ ಏಷ್ಯಾಕಪ್: ಇಂದು ಸೆಮಿಫೈನಲ್ಸ್ ಕದನ
Voice of JANATAA : Sports NEWS : Asia CUP 2024
ಏಷ್ಯಾಕಪ್ ಹಾಲಿ ಚಾಂಪಿಯನ್ ಭಾರತ ವನಿತೆಯರ ತಂಡವು, ದಾಖಲೆಯ 8ನೇ ಟ್ರೋಫಿ ಗೆಲ್ಲುವ ಗುರಿ ಹಾಕಿಕೊಂಡಿದೆ. ಜುಲೈ 26ರಂದು ಶ್ರೀಲಂಕಾದ ಡಂಬುಲ್ಲಾದಲ್ಲಿ ನಡೆಯುತ್ತಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವನಿತೆಯರ ತಂಡವನ್ನು ಎದುರಿಸುತ್ತಿದೆ.
ಶಫಾಲಿ ವರ್ಮ ಮತ್ತು ಸ್ಮೃತಿ ಮಂಧಾನ ಅವರ ಸ್ಪೋಟಕ ಆಟದಿಂದ ಆತ್ಮ ವಿಶ್ವಾಸದ ಅಲೆಯಲ್ಲಿ ಬೀಗುತ್ತಿರುವ ಭಾರತ ತಂಡ ಮಹಿಳೆಯರ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಶುಕ್ರವಾರ ಬಾಂಗ್ಲಾದೇಶ ತಂಡದ ಸವಾಲು
ಎದುರಿಸಲಿದ್ದು, ಗೆಲ್ಲುವ ಫೇವರಿಟ್ ಆಗಿದೆ.
ಎ ಗುಂಪಿನಲ್ಲಿ ಆಡಿದ ಎಲ್ಲಾ ಮೂರು ಪಂದ್ಯಗಳಲ್ಲಿ ಗೆಲುವು ದಾಖಲಿಸಿದ ಭಾರತ, ಅಜೇಯ ದಾಖಲೆಯೊಂದಿಗೆ ನಾಲ್ಕರ ಘಟ್ಟ ಪ್ರವೇಶಿಸಿದೆ. ಪಾಕಿಸ್ತಾನ ವಿರುದ್ದ 7 ವಿಕೆಟ್, ಯುಎಇ ವಿರುದ್ದ 78 ರನ್ ಹಾಗೂ ನೇಪಾಳ ವಿರುದ್ದ 82 ರನ್ ಜಯ ಗಳಿಸಿದ ಭಾರತ, ಉಪಾಂತ್ಯದಲ್ಲೂ ಗೆಲ್ಲುವ ನೆಚ್ಚಿನ ತಂಡವಾಗಿದೆ. ಆದಾಗ್ಯೂ ಬಾಂಗ್ಲಾದೇಶ ಅಪಾಯಕಾರಿ ತಂಡವಾಗಿದ್ದು, ನಾವು ಎಚ್ಚರಿಕೆಯಿಂದ ಆಡಬೇಕಿದೆ ಎಂದು ಟೀಮ್ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್ ತಂಡದ ಸಹ ಆಟಗಾರರಿಗೆ ಕಿವಿ ಮಾತು ಹೇಳಿದ್ದಾರೆ. ಅತ್ತ ಬಿ ಗುಂಪಿನಲ್ಲಿ ಆಡಿದ ಮೂರು ಪಂದ್ಯಗಳ ಪೈಕಿ 2ರಲ್ಲಿಗೆದ್ದು ದ್ವಿತೀಯ ತಂಡವಾಗಿ ಸೆಮಿಫೈನಲ್ಗೆ ಆರ್ಹತೆ
• ಮೊದಲ ಸೆಮಿಫೈನಲ್:
ಭಾರತ-ಬಾಂಗ್ಲಾದೇಶ
• ಪಂದ್ಯ ಆರಂಭ: ಮಧ್ಯಾಹ್ನ 2ಕ್ಕೆ
• ಎರಡನೇ ಸೆಮಿಫೈನಲ್:
ಶ್ರೀಲಂಕಾ-ಪಾಕಿಸ್ತಾನ
• ಪಂದ್ಯ ಆರಂಭ: ಸಂಜೆ 7ಕ್ಕೆ
ಹೊಂದಿರುವ ಬಾಂಗ್ಲಾದೇಶ, ಎರಡನೇ ಬಾರಿ ಫೈನಲ್ ಪ್ರವೇಶಿಸುವ ಗುರಿಯಲ್ಲಿದೆ.
ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಆತಿಥೇಯ ಶ್ರೀಲಂಕಾ ತಂಡಗಳು ಪೈಪೋಟಿ ನಡೆಸಲಿವೆ.