ಲೂಯಿಸ್ ರೊಜಾರಿಯೊ ಚಾಮರಾಜನಗರ ಪ್ರಾದೇಶಿಕ ಎಸ್‌ಬಿಐ ನೂತನ ಮುಖ್ಯ ವ್ಯವಸ್ಥಾಪಕರು
ಹನೂರು : ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮಾರ್ಟಳ್ಳಿ ಮೂಲದ ಶ್ರೀ ಲೂಯಿಸ್ ರೊಜಾರಿಯೊ ರವರು ಚಾಮರಾಜನಗರ ಎಸ್‌ಬಿಐನ ಪ್ರಾದೇಶಿಕ ಮುಖ್ಯ ವ್ಯವಸ್ಥಾಪಕರಾಗಿ ನೇಮಕಗೊಂಡಿದ್ದಾರೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಚಾಮರಾಜನಗರ ಹಾಗೂ ರಾಮನಗರ ಜಿಲ್ಲೆಗೆ ಮುಖ್ಯ ವ್ಯವಸ್ಥಾಪಕರಾಗಿ ಶ್ರೀ ಲೂಯಿಸ್ ರೊಜಾರಿಯೊ ರವರು ಸೋಮವಾರ ಚಾಮರಾಜನಗರದ ಪ್ರಾದೇಶಿಕ ವ್ಯವಹಾರಗಳ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡಿದ್ದಾರೆ.
ಇವರು ಜಿಲ್ಲೆಯ 52 ಶಾಖೆಗಳ ಕಾರ್ಯಾಚರಣೆಯನ್ನು ನೋಡಿಕೊಳ್ಳುತ್ತಾರೆ.ಈ ಎಲ್ಲಾ ಶಾಖೆಗಳಿಗೂ ಮುಖ್ಯ ವ್ಯವಸ್ಥಾಪಕರಾಗಿರುವರು. ಅವರಲ್ಲಿ ಮಾತನಾಡಿದಾಗ ಅವರು ಹೆಚ್ಚಾಗಿ ಕೃಷ್ಣ ಸಾಲ,ಶಿಕ್ಷಣ ಸಾಲ ,ವ್ಯವಹಾರಿಕ ಸಾಲ ಮತ್ತು ಕೈಗಾರಿಕಾ ಉದ್ಯಮಗಳಿಗೆ ಸಾಲ ನೀಡಲಾಗುವುದು ಹಾಗೂ ಇನ್ನಿತರ ಸಾಲಗಳಿಗೆ ಪ್ರಾಮುಖ್ಯತೆ ನೀಡಲಾಗುವುದು ಎಂದು ತಿಳಿಸಿದರು.