-
ಗ್ರಾಮೀಣ ಸೊಗಡಿನ ಸನ್ನಿವೇಶಗಳನ್ನು ಸೃಷ್ಟಿಸಿದ ವಿದ್ಯಾರ್ಥಿಗಳು.
-
ಬಣ್ಣ ಬಣ್ಣದ ಉಡುಗೆಗಳನ್ನು ತೊಟ್ಟು ಮಕ್ಕಳಿಂದ ನೃತ್ಯ.
-
ಶಿಕ್ಷಕರ ಪ್ರಯತ್ನಕ್ಕೆ ಗ್ರಾಮಸ್ಥರಿಂದ ಮೆಚ್ಚುಗೆಯ ನುಡಿಗಳು.
ಬಾಗಲಕೋಟೆ : ಸರ್ಕಾರಿ ಶಾಲೆ ಎಂದ್ರೇ ಮೂಗು ಮುರಿಯುವರೇ ಹೆಚ್ಚು. ಅಲ್ಲದೇ, ಸರ್ಕಾರಿ ಕೆಲಸ ಬೇಕು ಎನ್ನುವರು ಹೆಚ್ಚು. ಇದರ ಮಧ್ಯೆ ಆ ಶಾಲೆ ವಿಶಿಷ್ಟವಾದ ಕಾರ್ಯಕ್ರಮಕ್ಕೆ ಸಾಕ್ಷಿಯಾಗಿತ್ತು.
ಶಾಲೆಯ ಸುಂದರ ನೋಟ, ಪಾಠ, ಮೈಮಾಟ ನೋಡುಗರ ಕಣ್ಮನ ಸೆಳೆಯುವಂತೆ ಇತ್ತು. ಬಾಗಲಕೋಟೆ ಜಿಲ್ಲೆಯ ಬೀಳಗಿ ತಾಲೂಕಿನ ಮನ್ನಿಕೇರಿ ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಹಲವು ವಿಶೇಷತೆಗಳಿಗೆ ಹೆಸರುವಾಸಿಯಾಗಿದೆ.
ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ರಾಜ್ಯ ಸರ್ಕಾರದ ಆಶಯದಂತೆ “ನೂರು ದಿನ ಓದು” ಆಂದೋಲನ ಕಾರ್ಯಕ್ರಮದ ನಿಮಿತ್ಯ ಶಾಲೆಯಲ್ಲಿ ಒಂದು ವಿನೂತನ ಕಾರ್ಯಕ್ರಮವನ್ನು ಹಮ್ಮಿಕೊಂಡಿತ್ತು.
ಶಾಲೆಯ ಮಕ್ಕಳು ಬಗೆ ಬಗೆಯ ಬಣ್ಣದ ಉಡುಗೆ ತೊಡುಗೆಗಳನ್ನು ತೊಟ್ಟು ಗ್ರಾಮೀಣ ಸೊಗಡನ್ನು ಪ್ರತಿಬಿಂಬಿಸುವ ಕಾರ್ಯಕ್ರಮದಲ್ಲಿ ನೃತ್ಯವನ್ನು ಪ್ರದರ್ಶಿದ್ದಾರೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಕರ ಮಾರ್ಗದರ್ಶನದಂತೆ ಭಾರತ ದೇಶದ ಸಂಸ್ಕೃತಿ ಆಚಾರ ವಿಚಾರ, ಜನಪದ ಶೈಲಿಯ ಗ್ರಾಮೀಣ ವೇಷಭೂಷಣ, ಆಧುನಿಕ ಕಾಲದ ಪರಿಣಾಮವಾಗಿ ಮಾಯವಾಗುತ್ತಿರುವ ಗ್ರಾಮೀಣ ಕಸಬುಗಳಾದ ಕಂಬಾರಿಕೆ, ಕುಂಬಾರಿಕೆ, ಬಡಿಗತನ, ಬೀಸುವುದು, ಕೇರುವುದು, ಕುಟ್ಟುವುದು ಕುಲುಮೆ ಮಾಡುವುದು, ಆಕಳು ಮೇಯಿಸುವುದು, ಹಾಲು ಕರೆಯುವುದು,
ಉತ್ತರ ಕರ್ನಾಟಕ ಭಾಗದ ವಿಶೇಷವಾದ ಆಹಾರವಾದ ಜೋಳದ ರೊಟ್ಟಿಯನ್ನು ತಯಾರಿಸುವುದು, ಹಣ್ಣು ಮಾರುವುದು, ತರಕಾರಿ ಮಾರುವುದು, ವಿಶೇಷವಾಗಿ ಭವಿಷ್ಯವನ್ನು ತಿಳಿಸುವ ಖಣಿ ಹೇಳುವಂತಹ ವೈಶಿಷ್ಟಪೂರ್ಣ ಗ್ರಾಮೀಣ ಸೊಗಡಿನ ಜೀವಂತಿಕೆ ತುಂಬಿದ ಸುಂದರವಾದ ಕಾರ್ಯಕ್ರಮವನ್ನು ಮಕ್ಕಳು ಮಾಡುವುದು ನೋಡಿದರೆ ಮೈ-ಮನ ನವಿರೇಳುವತ್ತಿತ್ತು.
ಶಾಲೆಯ ಮುಖ್ಯ ಗುರುಮಾತೆಯರು ಬಿ. ಜಿ. ಶಂಭೋಜಿ, ಹಿರಿಯ ಶಿಕ್ಷಕ ಎ.ವಿ. ಬಿರಾದಾರ್, ಶ್ರೀ ಬಿ ಎನ್ ಬಿರಾದಾರ್, ಕುಮಾರಿ ಕೆ ವಿ ಪತ್ತಾರ, ಶ್ರೀ ಎಸ್ ಎಸ್ ಬೇಡರ, ಶ್ರೀಮತಿ ಸುಮಲತಾ ದಳವಾಯಿ, ಶ್ರೀಮತಿ ಕೆ ವಿ ರಡ್ಡೆಮ್ಮ ಹಾಗೂ ಶ್ರೀ ಬಿ ಜಿ ಗೌರ. ಹಾಗೂ ಅತಿಥಿ ಶಿಕ್ಷಕರುಗಳಾದ ಶ್ರೀ ಚಿದಾನಂದ ಕುರಿ, ಮತ್ತು ಶ್ರೀಮತಿ ಮೈತ್ರಾ ಸಿರಸಿ ಈ ಎಲ್ಲ ಶಿಕ್ಷಕರು ಕಾರ್ಯವೈಖರಿಯನ್ನು ನೋಡಿ ಅಧಿಕಾರಿಗಳು ಗ್ರಾಮದ ಹಿರಿಯರು ಪ್ರಶಂಶೆಯ ನುಡಿಗಳನ್ನು ವ್ಯಕ್ತಪಡಿಸಿದರು.