ಬೆಂಗಳೂರು ಫೆಬ್ರವರಿ 03: ಮದುವೆಯ ಸಂಭ್ರಮಕ್ಕೆ ಮತ್ತಷ್ಟು ರಂಗನ್ನು ತುಂಬುವ ಉಡುಪುಗಳ ಪ್ರಸಿದ್ದ ಶೋರೂಮ್ ಅರುಣ ಸಿಲ್ಕ್ಸ್ ರವರ ನೂತನ ಶೋರೂಮ್ ಈಗ ಕೆಂಗೇರಿ ಉಪನಗರದಲ್ಲಿ ಪ್ರಾರಂಭವಾಗಲಿದೆ.
ಅಬಕಾರಿ ಸಚಿವರಾದ ಕೆ ಗೋಪಾಲಯ್ಯ ಅವರು ಶೋರೂಮ್ ಉದ್ಘಾಟಿಸಲಿದ್ದಾರೆ. ನಿವೃತ್ತ ಐಎಎಸ್ ಅಧಿಕಾರಿ ಶ್ರೀಮತಿ ಮೀರಾ ಸಕ್ಸೇನಾ, ಖ್ಯಾತ ಚಲನ ಚಿತ್ರ ನಟಿ ಸಂಜನ ಆನಂದ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಕೆಂಗೇರಿ ಉಪನಗರದ ಮುಖ್ಯ ರಸ್ತೆಯಲ್ಲಿರುವ ಹೋಯ್ಸಳ ಸರ್ಕಲ್ ಹತ್ತಿರ ಪ್ರಾರಂಭವಾಗುತ್ತಿರುವ ಈ ಶೋರೂಮ್ ನಿಂದ ಆಭಾಗದ ಜನರ ಅಗತ್ಯಗಳನ್ನು ಪೂರೈಸುವ ಉದ್ದೇಶವನ್ನು ಹೊಂದಲಾಗಿದೆ.
ಕಳೆದ 12 ವರ್ಷಗಳಿಂದ ಬೆಂಗಳೂರಿನ ರಾಜಾಜಿನಗರ ಸುತ್ತ ಮುತ್ತಲೂ ಭಾಗದಲ್ಲಿ ಮನೆಮಾತಾಗಿರುವ ಅರುಣ ಸಿಲ್ಕ್ಸ್ ಇಂದು ಕೆಂಗೇರಿ ಉಪನಗರದಲ್ಲಿ ತನ್ನ ಎರಡನೇ ಶಾಖೆಯನ್ನು ಪ್ರಾರಂಭಿಸಿದೆ.
ಮೂಲತಃ ಮೊಳಕಾಲ್ಮೂರು ನವರಾದ ನರಸಿಂಹ ಮೂರ್ತಿ ಮತ್ತು ಶ್ರೀನಿವಾಸ್ ರವರು ನೇಕಾರರಿಂದ ನೇರವಾಗಿ ಗ್ರಾಹಕರುಗಳಿಗೆ ಸೀರೆಗಳನ್ನು ತಲುಪಿಸಬೇಕು ಎನ್ನುವ ಉದ್ದೇಶದಿಂದ ಬೆಂಗಳೂರಿನ ರಾಜಾಜಿನಗರದಲ್ಲಿ ಮೊದಲ ಶೋರೂಮ್ ಅನ್ನು ಪ್ರಾರಂಭಿಸಲಾಗಿತ್ತು.
ಇದೀಗ ಬೆಂಗಳೂರಿನ ಕೆಂಗೇರಿ ಹಾಗೂ ಇನ್ನಿತರ ಪ್ರದೇಶಗಳ ಗ್ರಾಹಕರುಗಳಿಗೆ ಅತ್ಯುತ್ತಮ ಗುಣಮಟ್ಟದ ಸೀರೆಗಳನ್ನು ಸರಿಯಾದ ಬೆಲೆಯಲ್ಲಿ ತಲುಪಿಸಬೇಕು ಎನ್ನುವ ಉದ್ದೇಶದಿಂದ ನೂತನ ಶೋರೂಮ್ ಅನ್ನು ಪ್ರಾರಂಭಿಸಲಾಗುತ್ತಿದೆ.