ಇಂಡಿ : ರಾಷ್ಟ್ರ ಮಾತೆ ವೀರರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ್ತಗಳ ಉದ್ಘಾಟನೆ ಕಾರ್ಯಕ್ರಮ ತಾಂಬಾ ಗ್ರಾಮದಲ್ಲಿ ಜನವರಿ 25 ಸಂಜೆ 4 ಗಂಟೆಗೆ ನಡೆಯಲಿದೆ.
ಇನ್ನು ಕೂಡಲಸಂಗಮದ ಜಯಮೃತ್ಯುಂಜಯ ಸ್ವಾಮೀಜಿ ಹಾಗೂ ಹುಲಜಂತಿಯ ಮಾಳಿಂಗರಾಯ ಮಹಾರಾಜರ ನೇತೃತ್ವದಲ್ಲಿ ನೆರವೇರಲಾಗುವುದು ಎಂದು ಕರವೇ ಅಧ್ಯಕ್ಷ ಹಾಗೂ ವಿಜಯಪುರ ಜಿಲ್ಲಾ ಲಿಂಗಾಯತ ಪಂಚಮಸಾಲಿ ಯುವ ಘಟಕದ ಕಾರ್ಯದರ್ಶಿ ಶಿವರಾಜ್ ಕೆಂಗನಾಳ ಪತ್ರಿಕಾ ಪ್ರಕಟಣೆಗೆ ತಿಳಿಸಿದರು.
ಈ ಸಂದರ್ಭದಲ್ಲಿ ಶ್ರೀನಾಥ್ ಚಟ್ಟರಕಿ, ಕಾಮೇಶ್ ಉಕ್ಕಲಿ, ಬಸವರಾಜ ಅವಟಿ, ದರೇಪ್ಪ ಕೆಂಗನಾಳ ಹಾಗೂ ಮುಖಂಡರು ಭಾಗವಹಿಸಿದರು.