ಇಂಡಿ: ನೆರೆಯ ಬಾಂಗ್ಲಾ ದೇಶದಲ್ಲಿ ಹಿಂದೂಗಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಖಂಡಿಸಿ ಶುಕ್ರವಾರ ವಿಶ್ವ ಹಿಂದೂ ಪರಿಷತ್ ಭಜರಂಗದಳ ಇಂಡಿ ಪ್ರಖಂಡ ಸಮೀತಿ ವತಿಯಿಂದ ಶುಕ್ರವಾರ ಪ್ರತ್ರಿಭಟನೆ ನಡೆಸಿ ಶಿರಸ್ಥೇದಾರ ಎಸ್.ಆರ್. ಮುಜಗೊಂಡ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ವಿ.ಹಿಂಪ ಜಿಲ್ಲೆಯ ಸಹ ಕಾರ್ಯದರ್ಶಿ ಸುನಿಲ ಜಮಖಂಡಿ, ಜಿಲ್ಲಾ ಪ್ರಮುಖರಾದ ಪ್ರಕಾಶ್ ಬಿರಾದಾರ, ಇಂಡಿ ನಗರ ಘಟಕದ ಅಧ್ಯಕ್ಷ ನೇತಾಜಿ ಪವಾರ, ಬಸವ ಸಮೀತಿ ಅಧ್ಯಕ್ಷ, ಹಿಂದಿನ ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ ಮಾತನಾಡಿ, ಹಿಂದೂಗಳನ್ನು ದ್ವಂಸ ಮಾಡಲು ಬಾಂಗ್ಲಾದೇಶದಲ್ಲಿ ಮರಣ ಮೃದುಂಗ ನಡೆದಿದೆ. ಕೂಡಲೆ ಅಲ್ಲಿನ ಸರಕಾರ ಅದನ್ನು ತಡೆದು ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು. ಭಾರತ ಸರಕಾರ ಇದರಲ್ಲಿ ಮಧ್ಯಸ್ಥಿಕೆವಹಿಸಿ ಅವರಿಗೆ ಎಚ್ಚರಿಕೆ ನೀಡಬೇಕು. ಹಿಂದೂಗಳ ನಾಶ ತಡೆಯುವ ಕಾರ್ಯವಾಗಬೇಕೆಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ವಿ.ಹಿಂ.ಪ ತಾಲೂಕ ಉಪಾಧ್ಯಕ್ಷ ವಿಠ್ಠಲ್ ಹೊಸಮನಿ, ತಾಲೂಕ ಸಹ ಕಾರ್ಯದರ್ಶಿ ಶಿವರಾಜ್ ಬಿರಾದಾರ, ಮಲ್ಲಿಕಾರ್ಜುನ ಹಾವಿನಳಮಠ, ಬಸವರಾಜ್ ಕಂಬಾರ, ಬಸವರಾಜ್ ಜಮಖಂಡಿ, ಕೇದಾರ್ ಭೋಜ, ದಯಾನಂದ್ ಪಾಟೀಲ್, ರೇವಣಸಿದ್ಧ ಗುಣದಾಳ, ದತ್ತ್ತಾ ಬಂಡೇನವರ, ಸುನಿಲಗೌಡ ಬಿರಾದಾರ, ಪಿಂಟು ಚವ್ಹಾಣ್, ದಯಾನಂದ ಮೈದರಗಿ, ಸಂಕೇತ್ ಮಹೇದ್ರಕರ, ಸಿದ್ದು ಪೂಜಾರಿ, ಸಾಗರ್ ಬಿರಾದಾರ, ಅಪ್ಪು ಸೂರ್ಯವಂಶಿ ಸೇರಿದಂತೆ ಇನ್ನಿತರರು ಇದ್ದರು.










