ತಾಲೂಕು ಸಮಸ್ಯೆಗಳ ಸರಮಾಲೆಯಲ್ಲಿ ಜಿಲ್ಲಾಧಿಕಾರಿಗೆ ಮನವಿ : ವಾಲಿ
ಇಂಡಿ : ತಾಲ್ಲೂಕಿನಲ್ಲಿ ಸಮಸ್ಯೆಗಳ ಸರಮಾಲೆ ತುಂಬಿಕೊಂಡಿವೆ. ಅವುಗಳನ್ನು ಕೂಡಲೇ ಸರಕಾರದ ಗಮನಕ್ಕೆ ತಂದು ಪರಿಹರಿಸಬೇಕು ಎಂದು ಬಿಜೆಪಿ ಮುಖಂಡ ಅದೃಷಪ್ಪ ವಾಲಿ (ಮಸಳಿ) ಅವರು ಜಿಲ್ಲಾಧಿಕಾರಿ ಟಿ ಭೂಬಾಲನ್ ಅವರಿಗೆ ಮನವಿ ಸಲ್ಲಿಸಿದರು.
ಬುಧವಾರ ಪಟ್ಟಣದ ಆಡಳಿತ ಸೌಧಕ್ಕೆ ಡೆಂಗ್ಯೂ ಜಾಗೃತಿ ಜಾಥಾ ಚಾಲನೆ ನೀಡಲು ಜಿಲ್ಲಾಧಿಕಾರಿ ಆಗಿಮಿಸಿದರು. ಈ ಸಂದರ್ಭದಲ್ಲಿ ಮಸಳಿ ಹಾಗೂ ಇತರೆ ಗ್ರಾಮಸ್ಥರು ತಾಲ್ಲೂಕಿನಲ್ಲಿ ಹಲವಾರು ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತಂದು ಮನವಿ ಸಲ್ಲಿಸಿದರು. ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯ ಅಧಿಕಾರಿ, ಹಾಗೂ ಗರ್ಭಿಣಿಯರಿಗೆ ಬಿಸಿ ನೀರು ಸೇರಿದಂತೆ ಇತರೆ ಸಮಸ್ಯೆಗಳು ಎದ್ದು ಕಾಣುತ್ತಿವೆ. ಇನ್ನೂ ತಾಲ್ಲೂಕಿನ ಗ್ರಾಮೀಣ ಭಾಗದ ರಸ್ತೆಗಳು ಹದಗೆಟ್ಟು ಹೋಗಿವೆ. ಜನರು ವ್ಯಾಪಾರ, ವಹಿವಾಟು, ಆಸ್ಪತ್ರೆ, ಶಾಲೆಗೆ ಬರುವ ಮಕ್ಕಳ ಗೋಳು ಹೇಳತಿರದಂತಾಗಿದೆ. ಇನ್ನೂ ಪಡಿತರ ಚೀಟಿ, ಶುದ್ದ ಕುಡಿಯುವ ನೀರಿನ ಸಮಸ್ಯೆ ಇನ್ನೂ ಹಲವಾರು ಸಮಸ್ಯೆಗಳು ತಾಲ್ಲೂಕಿನಲ್ಲಿ ತಾಂಡವಾಡುತ್ತಿವೆ. ಕೂಡಲೇ ಜಿಲ್ಲಾಧಿಕಾರಿಗಳು ಸರಕಾರದ ಗಮನಕ್ಕೆ ತಂದು ಜನಸಾಮಾನ್ಯರ ಸಾರ್ವಜನಿಕ ಸಮಸ್ಯೆಗಳು ಪರಿಹಾರ ನೀಡಬೇಕು ಎಂದು ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಕಂದಾಯ ಉಪವಿಭಾಗ ಆಧಿಕಾರಿ ಅಬೀದ್ ಗದ್ಯಾಳ, ತಹಶಿಲ್ದಾರ ಸಂಜಯ ಇಂಗಳೆ, ಗ್ರೇಡ್ ೨ ತಹಶಿಲ್ದಾರ ಧನಪಾಲಶೇಟ್ಟಿ ದೇವೂರ, ಶಿರಸ್ತೆದಾರ ಬಿ ಎ ರಾವೂರ ಹಾಗೂ ರೈತರು ಇನ್ನೂ ಅನೇಕ ಜನರು ಉಪಸ್ಥಿತರಿದ್ದರು.