ಕರ್ನಾಟಕದಲ್ಲಿ ಇನ್ನೊಂದು ಅಂತರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ, ಎಲ್ಲಿ ಗೊತ್ತಾ..?
Voice Of Janata : Editot : Sports News : ಕರ್ನಾಟಕದಲ್ಲಿ ಹಲವು ಸುಸಜ್ಜಿತ ಕ್ರಿಕೆಟ್ ಸ್ಟೇಡಿಯಂಗಳು ತಲೆ ಎತ್ತಿವೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕ್ರಿಕೆಟ್ ಮೈದಾನಗಳಿದ್ದು, ಯುವ ಪ್ರತಿಭೆಗಳಿಗೆ ನೆರವಾಗುತ್ತಿವೆ. ಇದೀಗ ತುಮಕೂರು ಜಿಲ್ಲೆಯಲ್ಲಿ ನೂತನ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಒಂದು ವೇಳೆ ಕಾಮಗಾರಿ ಪೂರ್ಣಗೊಂಡರೆ ಇದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನಕ್ಕೆ ಪರ್ಯಾಯ ಎಂದು ಹೇಳಲಾಗುತ್ತಿದೆ. ಹೌದು ಬೆಂಗಳೂರಿನ ಎಂ ಚಿನ್ನಸ್ವಾಮಿ ಮೈದಾನ ಹೊರತುಪಡಿಸಿದರೆ, ಕರ್ನಾಟಕದಲ್ಲಿ ಅಂತಾರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಆಡಿಸುವ ಮತ್ತೊಂದು ಕ್ರಿಕೆಟ್ ಮೈದಾನ ಇಲ್ಲ. ಆದರೆ ಇದೀಗ ಕರ್ನಾಟಕದಲ್ಲಿ ಹಲವು ಸುಸಜ್ಜಿತ ಕ್ರಿಕೆಟ್ ಸ್ಟೇಡಿಯಂಗಳು ತಲೆ ಎತ್ತಿವೆ. ಬೆಂಗಳೂರು, ಮೈಸೂರು, ಶಿವಮೊಗ್ಗ, ಹುಬ್ಬಳ್ಳಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕ್ರಿಕೆಟ್ ಮೈದಾನಗಳಿದ್ದು, ಯುವ ಪ್ರತಿಭೆಗಳಿಗೆ ನೆರವಾಗುತ್ತಿವೆ. ಇದೀಗ ತುಮಕೂರು ಜಿಲ್ಲೆಯಲ್ಲಿ ನೂತನ ಕ್ರಿಕೆಟ್ ಸ್ಟೇಡಿಯಂ ನಿರ್ಮಾಣಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಒಂದು ವೇಳೆ ಕಾಮಗಾರಿ ಪೂರ್ಣಗೊಂಡರೆ ಇದು ಬೆಂಗಳೂರಿನ ಚಿನ್ನಸ್ವಾಮಿ ಮೈದಾನಕ್ಕೆ ಪರ್ಯಾಯ ಎಂದು ಹೇಳಲಾಗುತ್ತಿದೆ.
ತುಮಕೂರು ಜಿಲ್ಲಾ ಕೇಂದ್ರದಿಂದ ಹೊರವಲಯದಲ್ಲಿ ಅಂತಾರಾಷ್ಟ್ರೀಯ ದರ್ಜೆಯ ಕ್ರಿಕೆಟ್ ಕ್ರೀಡಾಂಗಣದ ಜೊತೆಗೆ ಅಕಾಡೆಮಿ ನಿರ್ಮಿಸುವ ವಿಚಾರವನ್ನು ಗೃಹ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಜಿ ಪರಮೇಶ್ವರ ಅವರು ಇತ್ತೀಚೆಗೆ ಪ್ರಸ್ತಾಪಿಸಿದ್ದರು. ಹಾಗಾಗಿ, ವಸಂತನರಸಾಪುರ ಪ್ರದೇಶದ 4ನೇ ಕೈಗಾರಿಕಾ ಹಂತದ ಗೊಲ್ಲಹಳ್ಳಿ ಭಾಗದಲ್ಲಿ 20 ರಿಂದ 25 ಎಕರೆಯನ್ನು ಇಂಟರ್ನ್ಯಾಷನಲ್ ಸ್ಟೇಡಿಯಂ ಕಟ್ಟಲು ಜಾಗವನ್ನು ಗುರುತಿಸಲಾಗಿದೆ.
ಅಧಿಕಾರಿಗಳ ಜೊತೆಗೆ ಸಚಿವ ಪರಮೇಶ್ವರ ಅವರು ಜಾಗವನ್ನು ಪರಿಶೀಲಿಸಿದ್ದರು. ಸದ್ಯ ಜಾಗವನ್ನೇನೋ ಗುರುತಿಸಲಾಗಿದೆ. ಆದರೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ಸಿಎ) ಒಪ್ಪಿಗೆ ನೀಡುವುದು ಮಾತ್ರ ಬಾಕಿ ಇದೆ. ಕೆಎಸ್ಸಿಎ ನಿಯಮದ ಪ್ರಕಾರ, ನಗರದಿಂದ ಕೂಗಳತೆಯ ದೂರದಲ್ಲಿದ್ದರೆ ಮಾತ್ರ ಅನುಮತಿ ಸಿಗಲಿದೆ. ಕೆಎಸ್ಸಿಎ ಒಪ್ಪಿಗೆ ನೀಡಿದರೆ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಈಗಾಗಲೇ ನೀಲಿ ನಕ್ಷೆಯನ್ನೂ ಸರ್ಕಾರಕ್ಕೆ ಸಲ್ಲಿಸಲಾಗಿದೆ.