ಪ್ರತಿಭಾವಂತ ಮಕ್ಕಳೇ ಭಾವಿ ಭಾರತದ ರತ್ನದಶಿಲ್ಪಿಗಳು: ದಯಾಸಾಗರ ಪಾಟೀಲ..
ಇಂಡಿ : ಮಕ್ಕಳ ಮುಗ್ಧ ಮನಸ್ಸನ್ನು ಅರಿತು ಮಕ್ಕಳ ಪ್ರತಿಭೆಯನ್ನು ಗುರುತಿಸುವಲ್ಲಿ ನಮ್ಮ ಶಾಲೆಯ ಪಾತ್ರ ಬಹಳ ಮಹತ್ವದ್ದಾಗಿದೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ದಯಾಸಾಗರ ಪಾಟೀಲ ಹೇಳಿದರು.
ತಾಲೂಕಿನ ತಡವಲಗಾ ಗ್ರಾಮದಲ್ಲಿ ನಮ್ಮ ಶಿಕ್ಷಣ ಪ್ರೋತ್ಸಾಹಿ ಸಂಘದ ಅಡಿಯಲ್ಲಿ ನಡೆಯುತ್ತಿರುವ ನಮ್ಮ ಕನ್ನಡ ಮಾಧ್ಯಮ ಶಾಲೆಯ 14ನೇ ವರ್ಷದ ವಾರ್ಷಿಕ ಸ್ನೇಹ ಸಮ್ಮೇಳನದ ಹಾಗೂ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಜರುಗಿತು.
ಈ ಕಾರ್ಯಕ್ರಮಕ್ಕೆ ಜ್ಞಾನ ಗಂಗೆ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ದಯಾಸಾಗರ ಪಾಟೀಲ್ ಮಾಡಿದರು. ತದನಂರ ಮಾತಾನಾಡಿದ ಅವರು, ಮಗುವಿನ ಮನೆ ಮೊದಲ ಪಾಠಶಾಲೆ ಜನನಿ ತಾನೇ, ಮೊದಲ ಗುರು ಇಂಥ ಮುಗ್ಧ ಮನಸ್ಸಿನ ಮಕ್ಕಳನ್ನು ತಿದ್ದಿ ಬುದ್ದಿ ಹೇಳುವಾತನೆ ಗುರು ಎಂದರು. ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಶಿಕ್ಷಣದ ಜೊತೆಗೆ ಸಂಸ್ಕಾರದ ಅಗತ್ಯವಿದೆ. ಪ್ರತಿಭಾವಂತ ಮಕ್ಕಳೇ ಭಾವಿ ಭಾರತದ ರತ್ನದಶಿಲ್ಪಿಗಳು ಎಂದು ಹೇಳಿದರು.
ಈ ಸಂದರ್ಭದಲ್ಲಿ ಶಿಕ್ಷಣ ಪ್ರೋತ್ಸಾಹಿ ಸಂಘದ ಅಧ್ಯಕ್ಷ ಅರ್ಜುನ್ ತಳವಾರ್, ಉಪನ್ಯಾಸಕ ಆರ್ ಬಿ ಪುರೋಹಿತ , ಮುಖ್ಯ ಅತಿಥಿ ಕಲ್ಯಾಣಿ ಗಣವಲಗಾ, ಉಸ್ಮಾನ್ ಕಸಾಬ, ತಮ್ಮಣ್ಣ ಪೂಜಾರಿ, ಪರಶುರಾಮ್ ಬಾಸಗಿ, ಆರ್ ಎಸ್ ಪೂಜಾರಿ, ಸುಭಾಷ್ ಜನವಾಡ್, ತಮ್ಮರಾಯ ಮಿರ್ಜಿ, ಧರೆಪ್ಪ ಮೇತ್ರಿ, ಶ್ರೀಮಂತ ಜೇವೂರು, ಸಂತೋಷ್ ವಾಲಿಕಾರ್ ಭಾಗವಹಿಸಿದ್ದರು . ಕಾರ್ಯಕ್ರಮದಲ್ಲಿ ಶಾಲಾ ಮುಖ್ಯ ಗುರುಗಳು ಎನ್ ಎ ತಳವಾರ್ ಸ್ವಾಗತಿಸಿದರೆ ಸೈನಾಜ್ ಮನಿಯರ್ ವಂದಿಸಿದರು ನಿರೂಪಣೆ ಕುಮಾರಿ ವಿದ್ಯಾರಾಣಿ ಮಿರ್ಜಿ ಪ್ರಶಸ್ತಿ ಪ್ರಧಾನ ಕುಮಾರಿ ಪೂಜಾ ಗೊಳಗಿ ನಿರ್ವಹಿಸಿದರು.