ಇಂಡಿ : ಭೀಮಾತೀರ ಖ್ಯಾತಿಯ ಇಂಡಿ ಕ್ಷೇತ್ರದಲ್ಲಿ ಪ್ರತಿಯೊಂದು ಚುನಾವಣೆ ತನ್ನದೇಯಾದ ಕಾವು ಪಡೆದುಕೊಳ್ಳುತ್ತದೆ. ಇದೀಗ್ ಅಂಜುಮನ್ ಇ ಇಸ್ಲಾಂ ಇಂಡಿ ಆಡಳಿತ ಮಂಡಳಿಗೆ ಚುನಾವಣೆ ಬಿಸಿಲಿನಂತೆ ಕಾವು ಏರಿಕೆ ಆಗಿದೆ. ಈಗಾಗಲೇ ಆ ಸಮಿತಿಯ ಚನಾವಣೆ ನಡೆದು ಫಲಿತಾಂಶ ಹೊರಬಿದ್ದು ಸದಸ್ಯರು ಆಯ್ಕೆಯಾಗಬೇಕಿತ್ತು. ಆದರೆ ಕರೋನಾ ಹಿನ್ನಲೆಯಲ್ಲಿ ಚುನಾವಣೆಯನ್ನು ಮುಂದುಡಲಾಗಿತ್ತು. ಸಧ್ಯ ಆಡಳಿತ ಮಂಡಳಿಯ ಚುನಾವಣಾ ದಿನಾಂಕ ಘೋಷಣೆಯಾಗಿದ್ದು, ಅಭ್ಯರ್ಥಿಗಳು ನಾ ಮುಂದು ತಾ ಮುಂದು ಅಂತಾ ನಾಮ ಪತ್ರಗಳನ್ನು ಸಲ್ಲಿಸಿದ್ದಾರೆ. 11 ಜನರ ಸದಸ್ಯರ ಆಯ್ಕೆಗೆ 40 ಜನರು ಕಣದಲ್ಲಿದ್ದಾರೆ. ಈ ಚುನಾವಣೆ ಎಲ್ಲರ ಉಬ್ಬೇರುವಂತಾಗಿ ತೀವ್ರ ಕುತೂಹಲ ಕೆರಳಿಸಿದೆ.
ಹೌದು ವಿಜಯಪುರ ಜಿಲ್ಲೆಯ ಇಂಡಿ ಪಟ್ಟಣದಲ್ಲಿರುವ ಅಂಜುಮನ್ ಇ ಇಸ್ಲಾಂ ಆಡಳಿತ ಮಂಡಳಿಯ ಚುನಾವಣೆಗೆ ಅಯೂಬ ಬಾಗವಾನ, ಮುಸ್ತಾಕ ಇಂಡಿಕರ, ಫಯಾಜ ಬಾಗವಾನ, ಅಬ್ದುಲಮಾಜೀದ ಸೌದಾಗಾರ, ಅಯೂಬ ನಾಟೀಕಾರ ಸೇರಿದಂತೆ 42 ನಾಮಪತ್ರ ಸಲ್ಲಿಸಿಕೆಯಾಗಿದ್ದು, ಇಬ್ಬರು ಅಭ್ಯರ್ಥಿಗಳು ನಾಮಪತ್ರಗಳನ್ನು ಹಿಂಪಡೆದುಕೊಂಡಿದ್ದಾರೆ. ಅಲ್ಲದೇ, ಇದೀಗ್ ಅಖಾಡದಲ್ಲಿ 40 ಪ್ರಮಖ ಘಟಾನುಘಟಿಗಳ ಅಭ್ಯರ್ಥಿಯ ಭವಿಷ್ಯ ಮಾರ್ಚ್ 16ಕ್ಕೆ ನಿರ್ಧಾರ ಆಗಲಿದೆ.
ಇನ್ನು ಕಳೆದ ಬಾರಿಯ ಚುನಾವಣೆಯಲ್ಲಿ 36 ಅಭ್ಯರ್ಥಿಗಳು ಸ್ಪರ್ಧೆ ಮಾಡಿದ್ದರು. 11 ಜನ ಆಯ್ಕೆಯಾಗಿದ್ದರು. ಆದ್ರೀಗ್ 40 ಅಭ್ಯರ್ಥಿಗಳ ಸ್ಪರ್ಧೆಯಲ್ಲಿ ಅದರಲ್ಲೂ ಹೋದ ಬಾರಿ ಆಯ್ಕೆಯಾದ 11 ಜನರಲ್ಲಿ 9 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಚುನಾವಣೆಯಲ್ಲಿ ಯಾರ ಹಣೆ ಬರಹದಲ್ಲಿ ಏನು ಬರೆದಿದ್ದೇ ಎಂದು ಕಾಯ್ದು ನೋಡಬೇಕಿದೆ. ಮತದಾನ ಅವಶ್ಯಕತೆ ಬಿದ್ದರೆ ಮಾರ್ಚ 16 ರಂದು ಬೆಳಿಗ್ಗೆ 7 ರಿಂದ ಸಂಜೆ 5ರ ವರೆಗೆ ಮತದಾನ ನಡೆಯಲಿದೆ ಎಂದು ಚುನಾವಣಾಧಿಕಾರಿ ಮಾಹಿತಿ ತಿಳಿಸಿದ್ದಾರೆ.
ಒಟ್ಟಾರೆಯಾಗಿ ಜಿದ್ದಾಜಿದ್ದಿನ ಚನಾವಣೆಯಲ್ಲಿ ಯಾರು ಗೆದ್ದು ಬೀಗುತ್ತಾರೋ ? ಮತದಾರ ಪ್ರಭು ಯಾರ ಪರ ಒಲವು ತೋರುತ್ತಾನೋ ? ಗೆಲುವಿನ ಹೂ ಮಾಲೆ ಯಾರ ಕೊರಳಿಗೆ ಬೀಳುತ್ತೋ ಕಾದು ನೋಡಬೇಕಿದೆ.
ಕಣದಲ್ಲಿರುವ ಅಭ್ಯರ್ಥಿಗಳು:
1: ಅಕಿಲಆಜಂ ಹವಾಲ್ದಾರ
2 : ಅಬ್ದುಲಹಮೀದ ಮುಲ್ಲಾ
3 : ಅಬ್ದುಲಜಬ್ಬರ ಅರಬ
4 : ಅಬ್ದುಲಮಾಜೀದ ಸೌದಾಗಾರ
5 : ಅಬ್ದುಸಮದ್ ಅರಬ
6 : ಅಬುಜರ ಟಾಮಟಗಾರ
7 : ಅಬುಶಾಮ ಅರಬ
8 : ಅಯೂಬ ನಾಟೀಕಾರ
9 : ಅಯೂಬ ಬಾಗವಾನ
10 : ಬಾಶಾ ಇಂಡಿಕರ
11 : ಚಾಂದ ಶೇಖ
12 : ಫಯಾಜಅಹ್ಮದ ಬಾಗವಾನ
13 : ಹಾಜಿಅಲಿ (ಮುನ್ನಾ) ಬಾಗವಾನ
14 : ಹಸನ ಮುಜಾವರ
15 : ಹುಸೇನ ಬೇಪಾರಿ
16 : ಹುಸೇನ ಶೇಖ
17 : ಹುಸೇನ ಜಮಾದಾರ
18 : ಜಮೀರ್ ಡಾಂಗೆ
19 : ಜಾವೀದ ಮೋಮಿನ
20 : ಕಾಸಿಮ ಬೊಸ್ಗೆ
21 : ಖಾಜೇಸಾಬ ಇಂಡಿಕರ
22 : ಮಹಿಬೂಬಪಾಶಾ ಇಂಡಿಕರ
23 : ಮಹ್ಮದಫಾರುಕ ಬೋರಾಮಣಿ
24 : ಮಹ್ಮದಇಮ್ರಾನ ಮುಜಾವರ
25 : ಮಹ್ಮದಮುಸ್ತಾಕ ನಾಯ್ಕೊಡಿ
26 : ಮುದಸರ ಬಳಗಾನೂರ
27 : ಮುಜಿಬುರ- ರಹಮಾನ ಅಫ್ಜಲಪುರ
28 : ಮುಕ್ತಾರಅಹ್ಮದ ಟಾಂಗೆವಾಲೆ
29 : ಮುಕ್ತಾರಅಹ್ಮದ ಅರಬ್
30 : ಮುಸ್ತಾಕಅಹಮದ್ ಇಂಡಿಕರ
31 : ನಬಿರಸೂಲ ಹವಾಲ್ದಾರ
32 : ರಫೀಕ ನಾಗಠಾಣ
33 : ರಫಿಕಅಹ್ಮದ ಬೇವನೂರ
34 : ರಮಜಾನ ವಾಲಿಕಾರ
35 : ಸದ್ದಾಂಹುಸೇನ ಗುಡ್ಡಳ್ಳಿ
36 : ಸಗೀರಅಹ್ಮದ ಮುಲ್ಲಾ
37 : ಶಾಹನವಾಜ ಅರಬ
38 : ಶಕೀಲಅಹ್ಮದ ಅರಬ
39 : ಉಮಾರಫಾರುಕ ಬಾಗವಾನ
40: ಜಮೀರಅಹ್ಮದ ಇಂಡಿಕರ.