ಅಂಗನವಾಡಿ ಕೇಂದ್ರ ಶಿಥಿಲ ಗೊಂಡಿರುವುದರಿಂದ ಆದಷ್ಟು ಬೇಗ ಸ್ಥಳಾಂತರಿಸಬೇಕು:ರೈತ ಸಂಘದ ಅಧ್ಯಕ್ಷ ಅಮ್ಜದ್ ಖಾನ್
ಹನೂರು : ತಾಲೂಕಿನ ಅಂಬಿಕಾಪುರ (ಮೇಡ್) ಗ್ರಾಮದಲ್ಲಿ ಅಂಗನವಾಡಿ ಕಟ್ಟಡ ಶೀತಲ ಗೊಂಡಿರುವ ಸ್ಥಳಕ್ಕೆ ಕರ್ನಾಟಕ ರಾಜ್ಯ ರೈತ ಸಂಘ ಹನೂರು ಘಟಕ ರೈತ ಸಂಘದ ಸದಸ್ಯರು ಭೇಟಿ ನೀಡಿದರು.
ಹನೂರು ಘಟಕದ ರೈತ ಸಂಘದ ಅಧ್ಯಕ್ಷ ಅಮ್ಜದ್ ಖಾನ್ ಮಾತನಾಡಿ ಸುಮಾರು ಒಂದು ವರ್ಷಗಳಿಂದಲೂ ಈ ಗ್ರಾಮದ ಅಂಗನವಾಡಿ ಕಟ್ಟಡವು ಶೀತಲಗೊಂಡಿದ್ದು ಹಾಗೂ ಅಂಗನವಾಡಿ ಸುತ್ತಮುತ್ತ ಗಿಡಗಿಂಡಗಳು ಬೆಳೆದು ನಿಂತಿದೆ ಅಂಗನವಾಡಿಗೆ ಬರುವ ಮಕ್ಕಳು ಚಿಕ್ಕ ಮಕ್ಕಳಾಗಿದ್ದು ಆ ಮಕ್ಕಳ ಸುರಕ್ಷಿತವೇ ನಿಮ್ಮ ಹೊಣೆ ಆದರೆ ಆ ಮಕ್ಕಳನ್ನು ಬೇರೆ ಬಾಡಿಗೆ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ ಆ ಬಾಡಿಗೆ ಮನೆ ಕೂಡ ಚಿಕ್ಕ ಮಕ್ಕಳಿಗೆ ಯೋಗ್ಯವಲ್ಲದ ಕೊಠಡಿಯಾಗಿದೆ ಆದರಿಂದ ಸಂಬಂಧಪಟ್ಟ ಇಲಾಖೆಯವರು ಈ ಗ್ರಾಮದ ಅಂಗನವಾಡಿ ಕಟ್ಟಡವನ್ನು ಆದಷ್ಟು ಬೇಗ ಹೊಸ ಕಟ್ಟಡ ಕಟ್ಟಿಸಿ ಮಕ್ಕಳಿಗೆ ಅನುಕೂಲ ಮಾಡಿಕೊಡಬೇಕೆಂದು ಒತ್ತಾಯಿಸಿದರು.
ಅಂಬಿಕಾಪುರ (ಮೇಡ್) ಮುಖ್ಯ ರಸ್ತೆಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಆಟದ ಮೈದಾನ ವ್ಯವಸ್ಥೆ ಇರುವುದಿಲ್ಲ, ಆಟದ ಮೈದಾನ ಕಲ್ಲಿನಿಂದ ಕೂಡಿದೆ ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರಿ ಶಾಲೆಯ ಆಟದ ಮೈದಾನಕ್ಕೆ ಮಣ್ಣು ಹಾಕಿಸಿ ಮಟ್ಟ ಮಾಡಿ ಸಬೇಕೆಂದು, ಶಾಲೆಯು ಮುಖ್ಯರಸ್ತೆಯಲ್ಲಿ ಇರುವುದರಿಂದ ಮಕ್ಕಳು ರಸ್ತೆದಾಟಲು ಆಗುತ್ತಿಲ್ಲ ಏಕೆಂದರೆ ರಸ್ತೆಯಲ್ಲಿ ಹೆಚ್ಚಾಗಿ ವಾಹನ ಸಂಚರಿಸಿತ್ತಿದೆ ಆದ್ದರಿಂದ ಮಕ್ಕಳಿಗೆ ವಾಹನದ ಭಯ ಇರುವುದರಿಂದ ಶಾಲೆಯ ಮುಂಭಾಗದ ರಸ್ತೆಗೆ ಒಂದು ಅಮ್ಸ್ ಹಾಕಿಸಬೇಕೆಂದು ಆಗ್ರಹಿಸಿದರು.
ಅಂಗನವಾಡಿ ಕಟ್ಟಡ ಮತ್ತು ಸರ್ಕಾರಿ ಶಾಲೆಯ ಅಭಿವೃದ್ಧಿ ಬಗ್ಗೆ ಅಧಿಕಾರಿಗಳು ಹೆಚ್ಚಿನ ಗಮನ ವಹಿಸಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸಂಬಂಧಪಟ್ಟ ಇಲಾಖೆ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷ ರಾಜಣ್ಣ, ಅಂಬಿಕಾಪುರ ಗ್ರಾಮ ಘಟಕದ ರೈತ ಸಂಘದ ಅಧ್ಯಕ್ಷ ರುವುಲ್ಲಾ, ಸದಸ್ಯರಾದ ಬಿಸ್ಮಿಲ್ಲಾ, ಕುಮಾರ, ಪಳನಿ ಶೆಟ್ಟಿ, ಇನ್ನು ಮುಂತಾದವರು ಹಾರಿದ್ದರು.
ವರದಿ:ಚೇತನ್ ಕುಮಾರ್ ಎಲ್,ಚಾಮರಾಜನಗರ ಜಿಲ್ಲೆ