ಇಂಡಿ : ಕೊಳೆತ ಮೊಟ್ಟೆಗಳನ್ನು ಅಂಗನವಾಡಿ ಮಕ್ಕಳಿಗೆ ನೀಡಿರುವ ಆರೋಪ ಜಿಲ್ಲೆಯಲ್ಲಿ ಕೇಳಿಬಂದಿದೆ.
ವಿಜಯಪುರ ಜಿಲ್ಲೆಯ ಇಂಡಿ ತಾಲ್ಲೂಕಿನ ಝಳಕಿ ಸಮೀಪದ ಜೇವೂರ ಗ್ರಾಮದ ಶಾಂತಿ ನಗರ ಅಂಗನವಾಡಿ ಕೇಂದ್ರದಲ್ಲಿ ಕೊಳೆತ ಮೊಟ್ಟೆಗಳನ್ನು ಮಕ್ಕಳಿಗೆ ನೀಡಿತ್ತಿದ್ದ ವೇಳೆ ಜೇವೂರ ಗ್ರಾಮದ ಗ್ರಾಮಸ್ಥರ ಗಮನಕ್ಕೆ ಬಂದಿದೆ.
ಇದರಿಂದ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೆ ಅಲ್ಲಿನ ಅಕ್ಕಪಕ್ಕದ ಮಹಿಳೆಯರು ಸೇರಿ ಅಂಗನವಾಡಿ ಭೀಗ ಹಾಕಿದ್ದಾರೆ.
ನಂತರ ಅಂಗನವಾಡಿ ಸಾಹಾಯಕಿಗೆ ಕೇಳಿದಾಗ ನನಗೆ ಮೇಲಿಂದ ಹಿಂಗೆ ಕೊಟ್ಟಿದ್ದಾರೆ. ನಾ ಏನ್ ಮಾಡಲಿ, ನಾ ಮನೆಯಿಂದ ತಂದಿಲ್ಲಾ ಎಂದು ವಾದ ಮಾಡಿದ್ದಾಳೆ. ಇಷ್ಟೆಲ್ಲಾ ಆದ್ರೂ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸದೇ ಇರುವುದು ವಿಪರ್ಯಾಸದ ಸಂಗತಿ. ಅದಕ್ಕಾಗಿ ಮೇಲಾಧಿಕಾರಿಗಳು ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದರು.