ಬೆಂಗಳೂರು: ಉಕ್ರೇನ್ ನಲ್ಲಿ ರಷ್ಯಾ ನಡೆಸಿದ ವೈಮಾನಿಕ ಶೆಲ್ ದಾಳಿಯಲ್ಲಿ ಮೃತಪಟ್ಟ ರಾಜ್ಯದ ವಿದ್ಯಾರ್ಥಿ ನವೀನ್ ಪಾರ್ಥಿವ ಶರೀರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಿದೆ.
ಮಧ್ಯರಾತ್ರಿ ಕಳೆದು ಬೆಂಗಳೂರು ತಲುಪಿದ ನವೀನ್ ಪಾರ್ಥಿವ ಶರೀರವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಿದ್ದಾರೆ.
ಇಂದು ಹುಟ್ಟೂರಿನಲ್ಲಿ ನವೀನ್ ಅವರಿಗೆ ನಮನ ಸಲ್ಲಿಸಲಾಗುವುದು.
ನವೀನ್ ಹುಟ್ಟೂರು ರಾಣೆಬೆನ್ನೂರು ತಾಲೂಕಿನ ಚಳ್ಳಗೇರಿ ಗ್ರಾಮದಲ್ಲಿ ಎಲ್ಲ ಸಿದ್ಧತೆ ಮಾಡಲಾಗಿದೆ.