ಕಾಲೇಜು ಸ್ಥಾಪನೆಗಾಗಿ ಅನಿರ್ದಿಷ್ಟ ಧರಣಿ..!
ವಿಜಯಪುರ : ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಅನಿರ್ದಿಷ್ಟ ಧರಣಿಯು ೪ ದಿನಕ್ಕೆ ಕಾಲಿಟ್ಟಿತು. ಈ ಧರಣಿಗೆ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದರು. ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನಾ ಹೋರಾಟ ಸಮಿತಿ ಹಮ್ಮಿಕೊಂಡಿರುವ ೩ನೇ ದಿನದ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹಕ್ಕೆ ಬಡವರ ಮಕ್ಕಳು ವೈದ್ಯಕೀಯ ಕಲಿಯಲು ವಿಜಯಪುರಕ್ಕೆ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆಗಾಗಿ ಆಗ್ರಹಿಸಿ ಅನಿರ್ಧಿಷ್ಟ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ. ಖಾಸಗಿಯವರಒಪ್ಬಿಪಿಸುವುದನ್ನು ಈ ಕೂಡಲೆ ಹಿಂತೆಗೆದುಕೊಳ್ಳಬೇಕು ಎಂದು ಹೇಳಿದರು. ಇಲ್ಸಲವಾದರೆ ಮುಂದಿನ ದಿನಗಳಲ್ಲಿ ಉಗ್ರವಾದ ಹೋರಾಟ ನಡೆಸಬೇಕಾಗುತ್ತದೆ ಎಂದರು.
ಆಸ್ಪತ್ರೆಯ ಹಿಂದುಗಡೆ ೧೪೯ ಎಕರೆ ಜಮೀನು ಇದ್ದರೂ ಕೂಡ ಸರ್ಕಾರ ಜಬಾಬ್ದಾರಿ ತೆಗೆದುಕೊಳ್ಳುತ್ತಿಲ್ಕ. ಜನ ಪ್ರತಿನಿಧಿಗಳು ಜನಪರ ಎಂದುಕೊಳ್ಳುವವರು ಧರಣಿ ಸ್ಥಳಕ್ಕೆ ಬರಬೇಕು ಅಥವಾ ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಹೇಳಿದರು.ಈ ಸಂದರ್ಭದಲ್ಲಿ ಜನ ಪ್ರತಿನಿಧಿಗಳು ಬಂದು ಮನವಿ ಪತ್ರ ಸ್ವೀಕಾರ ಮಾಡಬೇಕು. ಎಷ್ಟೋ ಬಡ ಮಕ್ಕಳಿಗೆ
ಆಟೋ ಯೂನಿಯನ್ ಅಧ್ಯಕ್ಷರು ಅಬ್ದುಲ್ ರಜಾಕ್ ಪಟೇಲ್ ಮಾತನಾಡುತ್ತಾ ಉನ್ನತ ಶಿಕ್ಷಣ ಪಡೆಯಲು ಆಸೆ ಇದ್ದರೂ ಅವಕಾಶ ಸಿಗದಿರುವುದಕ್ಕೆ ಅವರ ಕನಸು ನನಸಾಗುತ್ತಿಲ್ಲ. ರಾಜ್ಯ ಸರ್ಕಾರ ಕೆಂದ್ರ ಸರಕಾರಕ್ಕೆ ಒತ್ತಡ ತಂದು ವಿಜಯುರಕ್ಕೆ ಸರ್ಕಾರಿ ಮೆಡಿಕಲ್ ಕಾಲೇಜು ಮಾಡಲು ಅವಕಾಶ ಮಾಡಿಕೊಡಬೇಕು. ಮೈನಾರಿಟಿ ಮತ್ತು ಲಂಡಿ ನಿವೃತ್ತ ನೌಕರರ ಸಂಘದ ಅಧ್ಯಕ್ಷರು ಮಾತನಾಡುತ್ತಾ ಬೆಳಗಾವಿ ವಿಭಾಗದಲ್ಲಿ ಹೆಚ್ಚು ಸೌಕರ್ಯ ಇರುವ ಜಿಲ್ಲೆ ವಿಜಯಪುರ ಪಕ್ಕದಲ್ಲಿ ಇರುವ ಬಾಗಲಕೋಟೆ ಗೆ ಸರ್ಕಾರಿ ಕಾಲೇಜು ಅನುಮತಿ ನೀಡಿದ್ದಾರೆ. ಎಲ್ಲಾ ಅವಕಾಶಗಳಿದ್ದರೂ ಕೂಡ ಬಿಜಾಪುರ ಕ್ಕೆ ಅವಕಾಶ ನೀಡುತ್ತಿಲ್ಲ. ನಮ್ಮ ಸಂಘದ ಎಲ್ಲಾ ಸದಸ್ಯರು ನಿಮ್ಮ ಹೋರಾಟಕ್ಕೆ ಬೆಂಬಲಿಸುತ್ತೇವೆ ಎಂದು ಹೇಳಿದರು.
ಬಸವರಾಜ ಹೋಳ್ಕರ್ ಬುದ್ದಿಸ್ಟ್ ಸಮಾಜದ ರಾಜ್ಯ ಕಾರ್ಯದರ್ಶಿಯವರು ಮಾತನಾಡುತ್ತಾ, ನಮ್ಮ ಸಮುದಾಯದಿಂದ ಧರಣಿಗೆ ಸಂಪೂರ್ಣ ಬೆಂಬಲವಿದೆ. ರಾಜ್ಯದಲ್ಲಿ ದೇಶದಲ್ಲಿ ದಲಿತರು,ಹಿಂದುಳಿದವರನ್ನು ಹಿಂದಿಕ್ಕಿ ಯೋಜನೆಗಳನ್ನು ರೂಪಿಸುತ್ತಿದ್ದಾರೆ ಅವುಗಳು ಬಡವರಿಗೆ ಸಿಗುವಂತಾಗಬೇಕು. ಮುಖ್ಯವಾದವೊಂದೇ ಬೇಡಿಕೆಯನ್ನು ಸರಕಾರ ಸ್ಪಂದಿಸುತ್ತಿಲ್ಲ ಎಂದು ಹೇಳಿದರು.ಅನಿರ್ಧಿಷ್ಟ ಧರಣಿಯನು ಉದ್ದೇಶಿಸಿ ಮಾತನಾಡುತ್ತಾ ಅಫೀಜ ಸಿದ್ದಿಕಿ ಅಧ್ಯಕ್ಷರು ಮುಸ್ಲಿಂ ಮೈನಾರಿಟಿ ಡೆವಲಪ್ಮೆಂಟ್ ಕಮಿಟಿ ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪನೆ ಮಾಡುವವರೆಗೆ ನಾವು ಹೋರಾಟದಶ ಜೊತೆ ಇರುತ್ತೇವೆ, ಯಾವುದೇ ಕಾರಣಕ್ಕೂ ಖಾಸಗೀಯವರಿಗೆ ಬಿಡುವುದಿಲ್ಲ, ನಮ್ಮ ಜಿಲ್ಲೆಯಲ್ಲಿ ವೈದ್ಯಕೀಯ ಕಾಲೇಜು ಮೊದಲೇ ಸ್ಥಾಪನೆಯಾಗಬೇಕಿತ್ತು. ಬಡವರ ಮಕ್ಕಳು ವೈದ್ಯಕೀಯ ಶುಲ್ಕ ಕಡಿಮೆ ಕೊಟ್ಟು ಓದಲು ಸರ್ಕಾರಿ ವೈದ್ಯಕೀಯ ಕಾಲೇಜು ನಮ್ಮ ಜಿಲ್ಲೆಗೆ ಅವಶ್ಯಕತೆ ಇದೆ. ಇದನ್ನು ಸರ್ಕಾರ ಜವಾಬ್ದಾರಿಯಿಂದ ಅದನ್ನು ನಿರ್ಮಾಣ ಮಾಡಿಕೊಡಬೇಕೆಂದು ಕರೆ ನೀಡಿದರು.
ಆಮ್ ಆದ್ಮಿ ಪಕ್ಷದ ಜಿಲ್ಲಾಧ್ಯಕ್ಷರಾದ ಬೋಗೇಶ್ ಸೋಲಾಪುರ ರವರು ಮಾತನಾಡುತ್ತ ಬಡವರ ಮತ್ತು ಹಿಂದುಳಿದವರು ಓದುವುದೇ ಸರ್ಕಾರಿ ಶಾಲಾ ಕಾಲೇಜುಗಳಲ್ಲಿ ಅದಕ್ಕಾಗಿ ಯಾವುದೇ ಕಾರಣಕ್ಕೂ ಖಾಸಗಿಯವರಿಗೆ ನಾವು ಇದನ್ನು ಒಪ್ಪಸಿಬಾರದು ನಾವೆಲ್ಲರೂ ಸೇರಿ ಒಗ್ಗಟ್ಟಿನಿಂದ ಹೋರಾಟ ಮಾಡಿ ನಮ್ಮ ಹಕ್ಕನ್ನು ಪಡೆದುಕೊಳ್ಳೋಣ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ, ಅಂಬೇಡ್ಕರ್ವಾದ ಸಂಜು ಕಂಬಾಗಿ ಯವರು ಮಾತನಾಡುತ್ತ ಜಿಲ್ಲೆಯ ಎಲ್ಲಾ ಜನರು ಖಾಸಗಿ ಸಹಭಾಗಿತ್ವ ಖಂಡಿಸಿ ಮತ್ತು ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸುವAತೆ ಈ ಹಿಂದೆAದಿಗಿAತಲೂ ಗಟ್ಟಿಯಾಗಿ ಜನರು ಹೋರಾಟದ ದ್ವನಿಯನ್ನು ಮತ್ತಷ್ಟು ಗಟ್ಟಿಗೊಳಿಸಬೇಕಾಗಿದೆ. ಜನ ಹೋರಾಟ ಕಟ್ಟಲು ವಿಜಯಪುರ ಜಿಲ್ಲೆಯ ಜನತೆ ಮುಂದೆ ಬರಬೇಕೆಂದು ಕರೆ ನೀಡುತ್ತೇವೆ.
ಸಿವಿಲ್ ಇಂಜಿನಿಯರಿAಗ್ ಅಸೋಸಿಯೇಷನ್ ನವರು ಕೂಡ ಭಾಗವಹಿಸಿ ಮಾತನಾಡುತ್ತ ರಾಜ್ಯ ಸರಕಾರ ತನ್ನ ಸ್ವಾಯತ್ತತೆ ಬಳಸಿ ಸರಕಾರಿ ವೈದ್ಯಕೀಯ ಕಾಲೇಜು ಆರಂಭಿಸಬೇಕು ಮತ್ತು ಕೇಂದ್ರ ಸರಕಾರದ ಜನ ವಿರೋಧಿ ಮಾರ್ಗ ಸೂಚಿಯನ್ನೇ ರಾಜ್ಯ ಸರಕಾರ ತಿರಸ್ಕರಿಸಬೇಕು ಎಂದು ಹೇಳಿದರು.
ಮುಖಂಡರುಗಳಾದ ಅರವಿಂದ ಕುಲಕರ್ಣಿ, ಅಕ್ರಂಮಾಶಾಳಕರ, ಮಲ್ಲಿಕಾರ್ಜುನ ಬಟಗಿ, ಬಾಬುರಾವ್ ಬೀರಕಬ್ಬಿ, ಅನಿಲ ಹೊಸಮನಿ,ಭರತಕುಮಾರ ಹೆಚ್ ಟಿ, ಸಿದ್ದಲಿಂಗ ಬಾಗೇವಾಡಿ, ಗೀತಾ. ಹೆಚ್. ಸಿದ್ರಾಮ ಹಿರೇಮಠ, ಜಯದೇವ ಸರ‍್ಯವಂಶಿ, ಪ್ರಭುಗೌಡ ಪಾಟೀಲ, ಒmಜಛಿ ಮುಖಂಡರಾದ ಇರ್ಫಾನ್ ಶೇಖ್ , ಅಲ್ತಾಪ್ ಇಟಗಿ, ಜಿ ಎಮ್ ಪಟಾಣ್, ಪಿರ್ಪಾಷ ಗಚ್ಚಿನಮಲ್,ಶೀವು ಮೇಲಿನಮನೆ ಅಧ್ಯಕ್ಷರು,ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ, ಅರುಣ ಮಠ, ಸಿ ಆರ್ ಗಂಗಾಧರ,ಅಶ್ರಫ್ ಕುಡಚಿ,ಮಹೇಶ್ ರಾಂಪುರ,ಪಾAಡುರAಗ ದೇಸಾಯಿ,ಸುಭಾಷ್ ಜಾಂಬೋರೆ, ಶಿವಬಾಳಮ್ಮು ಕೊಂಡಗೂಳಿ,ಶ್ರೀಕಾAತ್ ಕೊಂಡಗೂಳಿ ಮುಂತಾದವರು ಭಾಗವಹಿಸಿದ್ದರು