ಅಮೃತ ಸರೋವರ ಭರ್ತಿ ರೈತರು ಹರ್ಷ..! ಯಾವುದು..?ಎಲ್ಲಿ..?
ವಿಜಯಪುರ : ೭೫ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಪ್ರಯುಕ್ತವಾಗಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ಆದೇಶದಂತೆ ಜಿಲ್ಲೆಯ ತಿಕೋಟಾ ತಾಲೂಕಿನಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ ಗ್ರಾಮ ಪಂಚಾಯತಿಗಳ ಮೂಲಕ ಒಟ್ಟು ೦೭ ಅಮೃತ ಸರೋವರಗಳನ್ನು ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ತಾಲೂಕಿನ ಸಿದ್ಧಾಪುರ (ಕೆ) ಗ್ರಾಮ ಪಂಚಾಯತಿ ವ್ಯಾಪ್ತಿಯ ಧನ್ನರ್ಗಿ ಗ್ರಾಮದಲ್ಲಿ ನಿರ್ಮಿಸಿದ ಅಮೃತ ಸರೋವರದಲ್ಲಿ ನಿನ್ನೆ ಸುರಿದ ಭಾರಿ ಮಳೆಯಿಂದಾಗಿ ಅಮೃತ ಸರೋವರ ಮಳೆ ನೀರಿನಿಂದ ತುಂಬಿ, ಸುಂದರವಾಗಿ ಕಂಗೊಳಿಸುತ್ತಿದೆ. ಇದರಿಂದ ಈ ಭಾಗದ ಸಾವಿರಾರು ರೈತ್ತರಿಗೆ ಅನುಕೂಲವಾಗಲಿದ್ದು, ಗ್ರಾಪಂ ಸದಸ್ಯರು & ರೈತ್ತರು ಹರ್ಷ ವ್ಯಕ್ತ ಪಡಿಸುತ್ತಿದ್ದಾರೆ ಎಂದು ತಿಕೋಟಾ ತಾಲೂಕು ಪಂಚಾಯತಿಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಪ್ರವೀಣಕುಮಾರ ಸಾಲಿ ಹೇಳಿದರು.
ಧನ್ನರ್ಗಿ ಗ್ರಾಮದಲ್ಲಿರುವ ಅಮೃತ ಸರೋವರ ಕೆರೆಗೆ ಇಂದು ತಿಕೋಟಾ ತಾಲೂಕು ಪಂಚಾಯತಿಯ ತಾಂತ್ರಿಕ ಸಂಯೋಜಕ ಸಂಜೀವಕುಮಾರ ಬಿರಾದಾರ ಮತ್ತು ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ ಭೇಟಿ ನೀಡಿ ವೀಕ್ಷಣೆ ಮಾಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿಯ ಸದಸ್ಯರು & ಸಿಬ್ಬಂದಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯತಿ ಸದಸ್ಯರಾದ ಸುರೇಶ ಅವಟಿ ಅವರು ಮಾತನಾಡಿ “ಈ ಅಮೃತ ಸರೋವರ ನಿರ್ಮಾಣದಲ್ಲಿ ನಮಗೆ ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳು ತುಂಬಾ ಸಹಾಯ ಸಹಕಾರ ನೀಡಿದ್ದಾರೆ. ಕಾಲಕಾಲಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವವದರ ಜೊತೆಗೆ ಸೂಕ್ತ ಸೂಚನೆಗಳನ್ನು ನೀಡಿದ ಫಲವಾಗಿ ಇಂದು ನಮ್ಮ ಊರಿನಲ್ಲಿ ಸುಂದರವಾದ ಅಮೃತ ಸರೋವರ ನಿರ್ಮಾಣವಾಗಿದೆ. ಈ ಅಮೃತ ಸರೋವರದಲ್ಲಿ ಈಗಾಗಲೇ ರಾಷ್ಟಿಯ ಹಬ್ಬಗಳಂದು ಧ್ವಜಾರೋಹಣ ನೇರೆವೇರಿಸಲಾಗಿದೆ ಹಾಗೂ ಸೈನಿಕರ ನೆನಪಿಗಾಗಿ ಒಂದು ಫಲಕವನ್ನು ಸಹ ಅಳವಡಿಸಲಾಗಿದ್ದು, ಜನರಲ್ಲಿ ದೇಶ ಪ್ರೇಮ ಬೆಳೆಸಲು ಈ ಸರೋವರ ಸಹಾಯಕವಾಗಿದೆ ಎಂದರು. ಈ ಸರೋವರ ನಮ್ಮೆಲ್ಲರ ಹೆಮ್ಮೆಯ & ಖುಷಿಯ ತಾಣವಾಗಿದೆ ಎಂದರು.
ನಂತರ ಗ್ರಾಮದ ಮುಖಂಡರಾದ ಮಚ್ಚೇಂದ್ರ ಹೊಸಮನಿ ಅವರು ಮಾತನಾಡಿ “ಈ ಸರೋವರ ತುಂಬಿರುವದರಿAಧ ನಮಗೆಲ್ಲಾ ತುಂಬಾ ಆನಂದವಾಗಿದೆ. ಈ ಸರೋವರ ನಿರ್ಮಿಸಲು ಶ್ರಮಿಸಿದ ಎಲ್ಲರಿಗೂ ವಂದನೆಗಳನ್ನು ಸಲ್ಲಿಸುತ್ತೇನೆ. ಪ್ರಸ್ತುತ ಮಳೆಯಿಂದ ಈ ಸರೋವರ ಸಂಪೂರ್ಣ ಭರ್ತಿಯಾಗಿದ್ದು, ಮುಂದಿನ ಸಾಕಷ್ಟು ದಿನಗಳವರೆಗೆ ಈ ನೀರಿ ನೀಲುವದರಿಂದ ನಮಗೆ ಬಹು ಕಾಲ ನೀರಿನ ಸಮಸ್ಯೆ ಇಲ್ಲದಂಗಾಗುತ್ತದೆ ಎಂದು ಸಂತಸ ವ್ಯಕ್ತಪಡಿಸಿದರು.
ತಾಂತ್ರಿ ಸಂಯೋಜಕ ಸಂಜೀವಕುಮಾರ ಬಿರಾದಾರ ಮಾತನಾಡಿ “ತಾಲೂಕಿನ ಧನ್ನರ್ಗಿ ಗ್ರಾಮದಲ್ಲಿ ಸರೋವರವನು ನಿರ್ಮಿಸಿದ್ದು, ಪ್ರಸ್ತುತ ಅದು ರೈತ್ತರಿಗೆ ಅನುಕೂಲವಾಗುತ್ತಿದೆ ಇದರಿಂದ ನಮಗೆಲ್ಲಾ ತುಂಬಾ ಖುಷಿಯಾಗುತ್ತಿದೆ. ಇದು ನಮ್ಮ ಇಲಾಖೆಯ ಶ್ರಮಕ್ಕೆ ಸಿಕ್ಕ ಫಲ ಎಂದರು.ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಬಾಲಕೃಷ್ಣ ಕದಂ, ಸುರೇಶ ಅವಟಿ, ತಾಲೂಕು ಪಂಚಾಯತಿಯ ತಾಂತ್ರಿಕ ಸಂಯೋಜಕ ಸಂಜೀವಕುಮಾರ ಬಿರಾದಾರ, ತಾಲೂಕು ಐಇಸಿ ಸಂಯೋಜಕ ಕಲ್ಲಪ್ಪ ನಂದರಗಿ, ಗ್ರಾಮದ ಮುಖಂಡರಾದ ಬಾಲಕೃಷ್ಣ ಕದಂ, ಗ್ರಾಪಂ ಸಿಬ್ಬಂದಿ ಸುರೇಶ ಸಪ್ತಾಳಕರ ಸೇರಿದಂತೆ ಇತರರು ಹಾಜರಿದ್ದರು.