ಲಿಂಗಸೂಗೂರು: ತಾಲ್ಲೂಕಿನ ಹಟ್ಟಿ ಹಾಗೂ ಲಿಂಗಸುಗೂರು ನಗರದ ವಿದ್ಯಾರ್ಥಿಗಳು ಉನ್ನತ ವ್ಯಾಸಂಗಕ್ಕೆ ಉಕ್ರೇನ್ಗೆ ಉನ್ನತ ವೈದ್ಯಕೀಯ ಶಿಕ್ಷಣ ಪಡೆಯಲು ವಿದ್ಯಾಭ್ಯಾಸಕ್ಕೆ ತೇರಳಿದ್ದರು. ಆದರೆ ಏಕಾಏಕಿ ರಷ್ಯಾ ಮತ್ತು ಉಕ್ರೇನ್ ಮದ್ಯೆ ಯುದ್ದದ ಕಾರ್ಮೋಡ ಆವರಿಸಿದೆ. ಈ ಬಿಕ್ಕಟ್ಟಿನ ಪರಿಣಾಮವಾಗಿ ರಾಜ್ಯದ ವಿದ್ಯಾರ್ಥಿಗಳು ಅತಂತ್ರ ಸ್ಥಿತಿಯಲ್ಲಿ ಬದುಕುವಂತೆ ಆಗಿದೆ.
ಯುದ್ದ ಪೀಡಿತ ದೇಶದಲ್ಲಿ ತುತ್ತು ಅನ್ನಕ್ಕಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ ಎಂಬುದು ಲಿಂಗಸುಗೂರು ತಾಲ್ಲೂಕಿನ ವೈದ್ಯಕೀಯ ಶಿಕ್ಷಣ ವಿದ್ಯಾರ್ಥಿಗಳ ಪೋಷಕರು ಮಾಹಿತಿ ನೀಡಿದರು. ಹಟ್ಟಿ ಚಿನ್ನದ ಗಣಿ ಪ್ರಥಮ ವೈದ್ಯಕೀಯ ಶಿಕ್ಷಣ ರುಬೀನಾ ಉಕ್ರೇನ್
ದೇಶದಲ್ಲಿ ಮೆಡಿಕಲ್ ಯೂನಿವರ್ಸಿಟಿ ಕಾಲೇಜಿನಲ್ಲಿ ಜನರಲ್ ಮೇಡಿಸನ್ ಅಕಾಡೆಮಿಕ್ 2021 – 2022 ನೇ ಸಾಲಿನಲ್ಲಿ ಓದುತ್ತಿರುವ ವಿದ್ಯಾರ್ಥಿನಿ.
ಈ ವಿದ್ಯಾರ್ಥಿನಿ ಉಕ್ರೇನ್ ಯುದ್ದ ಪೀಡಿತ ದೇಶದಲ್ಲಿ ಸಿಲುಕಿದ ವಿದ್ಯಾರ್ಥಿನಿ. ಇನ್ನು ಲಿಂಗಸುಗೂರು ನಗರದ ವಿಜಯ್ ಮಹಾಂತೇಶ ಮೇಡಿಕಲ್ ಸ್ಟೋರ್ ಅಂಗಡಿಯ ಮಾಲೀಕರ ಮಗನಾದ ಪ್ರಜ್ವಲ್ ಹೂಗಾರ ಉಕ್ರೇನ್ ದೇಶದಲ್ಲಿ ಉನ್ನತ ವೈದ್ಯಕೀಯ ವ್ಯಾಸಂಗಕ್ಕೆ ದ್ವಿತೀಯ ಮೇಡಿಕಲ್ ಕೋರ್ಸ್ ವಿದ್ಯಾರ್ಥಿಯಾಗಿದ್ದಾನೆ. ಈ ವಿದ್ಯಾರ್ಥಿಯೂ ಆಹಾರಕ್ಕಾಗಿ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ರಾಜ್ಯ ಸರ್ಕಾರ ಉಕ್ರೇನ್ ರಾಷ್ಟ್ರದಲ್ಲಿ ಇರುವ ವೈದ್ಯಕೀಯ ವ್ಯಾಸಂಗಕ್ಕೆ ತೆರಳಿರುವ ವಿದ್ಯಾರ್ಥಿಗಳನ್ನು ಕರೆ ತರಲು ಸರ್ಕಾರ ಮುಂದಾಗಬೇಕು ಎಂದು ವಿದ್ಯಾರ್ಥಿಗಳ ಪಾಲಕರು ಸರ್ಕಾರಕ್ಕೆ ಮತ್ತು ಜಿಲ್ಲಾಡಳಿತಕ್ಕೆ ಹಾಗೂ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದ್ದಾರೆ.