VOJ ನ್ಯೂಸ್ ಡೆಸ್ಕ್ : ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನಡುವಿನ ಕೋಲ್ಡ್ ವಾರ್ ಹೆಚ್ಚಾಗಿದೆ. ಮೇಕೆದಾಟು ಪಾದಯಾತ್ರೆಯ ನಂತರ ಅದು ಮತ್ತಷ್ಟು ಬಿಗಡಾಯಿಸಿದೆ. ಇಬ್ಬರ ನಡುವಿನ ಅಂತರ ಉತ್ತರ ದ್ರುವದಿಂದ ದಕ್ಷಿಣದ್ರುವಕ್ಕೂ ಎನ್ನುವಂತಾಗಿದೆ.
ಇತ್ತೀಚೆಗೆ ನಡೆದ ಮೇಕೆದಾಟು ಪಾದಯಾತ್ರೆಯ ಸಂಪೂರ್ಣ ಯಶಸ್ವಿಯಾಗಿದ್ದೇನೋ ನಿಜ. ಪಾದಯಾತ್ರೆ ಡಿಕೆಶಿ,ಸಿದ್ದು ನೇತೃತ್ವದಲ್ಲೇ ನಡೆದಿದ್ದು ನಿಜವಾದ್ರೂ ಹಿರಿಯ ನಾಯಕರು ಸಾಥ್ ಕೊಟ್ಟಿದ್ರು. ಇದರ ಕ್ರೆಡಿಟ್ ಎಲ್ಲರಿಗೂಸಲ್ಲಬೇಕಿತ್ತು. ಆದ್ರೆ ಸಂಪೂರ್ಣ ಕ್ರೆಡಿಟ್ ಪಡೆಯುವ ಪ್ರಯತ್ನ ಡಿಕೆಶಿ ಮಾಡಿದ್ದಾರೆ ಎನ್ನಲಾಗಿದೆ. ಇದರ ಜೊತೆಗೆ ಸಿದ್ದರಾಮಯ್ಯ ಸೈಡ್ ಲೈನ್ ಮಾಡೋಕೆ ಡಿಕೆಶಿ ತಮ್ಮದೇ ಪಟಾಲಂ ಕಟ್ಟಿಕೊಳ್ತಿದ್ದಾರೆ. ವ್ಯವಸ್ಥಿತವಾಗಿ ಸಿದ್ದಾರಾಮಯ್ಯನವರನ್ನ ದೂರ ಇಡೋಕೆ ಪ್ರಯತ್ನ ಮಾಡ್ತಿದ್ದಾರೆ. ಇದು ಸಿದ್ದರಾಮಯ್ಯನವರ ಕೋಪಕ್ಕೆ ಕಾರಣವಾಗಿದೆ. ಹಾಗಾಗಿಯೇ ಪಾದಯಾತ್ರೆಯಲ್ಲೂ ಅಂತರ ಕಾಯ್ದುಕೊಳ್ತಿದ್ರು. ವೇದಿಕೆ ಕಾರ್ಯಕ್ರಮ ಸುದ್ದಿಗೋಷ್ಠಿಗಳಲ್ಲೂ ಇಬ್ಬರು ಪ್ರತ್ಯೇಕತೆ ಕಾಯ್ದುಕೊಳ್ತಿದ್ದಾರೆ.
ಪ್ರಸ್ತುತ ವಿಧಾನಮಂಡಲ ಅಧಿವೇಶನ ನಡೆಯುತ್ತಿದೆ. ಅಧಿವೇಶನದ ನಂತರ ಸಿದ್ದರಾಮಯ್ಯ ಹೈಕಮಾಂಡ್ ನಾಯಕರ ಭೇಟಿಗೆ ಮುಂದಾಗಿದ್ದಾರೆ. ಈಗಾಗಲೇ ವೇಣುಗೋಪಾಲ್ ಬಳಿ ಸಮಯಾವಕಾಶವನ್ನೂ ಕೋರಿದ್ದಾರೆ. ಸದನ ಮುಗಿದ ನಂತರ ದೆಹಲಿಗೆ ತೆರಳಿ ರಾಹುಲ್ ಹಾಗೂ ಸೋನಿಯಾ ಗಾಂಧಿಯವರನ್ನ ಭೇಟಿ ಮಾಡಲಿದ್ದಾರೆ. ಈ ವೇಳೆ ರಾಜ್ಯದಲ್ಲಿ ಡಿಕೆಶಿ ನಡೆ ಹಾಗೂ ನಾಯಕರನ್ನ ನಡೆಸಿಕೊಳ್ತಿರುವ ರೀತಿಯ ಬಗ್ಗೆ ವಿವರಿಸಲಿದ್ದಾರಂತೆ. ಈ ಮೂಲಕ ಡಿಕೆಶಿ ಓಟಕ್ಕೆ ಲಗಾಮುಹಾಕೋಕೆ ಮಾಜಿ ಸ್ಕೆಚ್ ರೆಡಿಮಾಡಿಕೊಂಡಿದ್ದಾರೆಂದು ಅವರ ಆಪ್ತ ವಲಯದಲ್ಲೇ ಚರ್ಚೆಯಾಗ್ತಿದೆ.
ಒಟ್ಟಿನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವಿನ ಕೋಲ್ಡ್ ವಾರ್ ಮುಂದುವರಿದಿದೆ. ಸಿದ್ದು ಸೈಡ್ ಲೈನ್ ಮಾಡೋಕೆ ಡಿಕೆಶಿ ಇನ್ನಿಲ್ಲದಂತೆ ಪ್ರಯತ್ನಗಳನ್ನ ಮಾಡ್ತಿದ್ದಾರೆ ಎನ್ನಲಾಗಿದೆ. ಅತ್ತ ಸಿದ್ದು ಕೂಡ ಡಿಕೆಶಿ ಲಗಾಮ್ ಹಾಕೋಕೆ ಹೈಕಮಾಂಡ್ ಕದ ತಟ್ಟುತ್ತಿದ್ದಾರೆ ಎನ್ನುವ ಮಾತುಗಳು ಹರಿದಾಡುತ್ತಿದೆ.