ಅಂಬಾಭವಾನಿ ದೇವಸ್ಥಾನದ ಕಳಸಾರೋಹಣ :
ಸಂಭ್ರಮದ ನಾಡದೇವಿ ಉತ್ಸವ..
ಇಂಡಿ : ಶಕ್ತಿ ದೇವತೆ ಆರಾಧನೆಯ ನವರಾತ್ರಿ ಉತ್ಸವಕ್ಕೆ
ಪಟ್ಟಣ ಸೇರಿದಂತೆ ತಾಲೂಕಿನಾದಂತ ನವರಾತ್ರಿಯ
ಸಂಭ್ರಮ ಆರಂಭಗೊಂಡಿತು. ಅಂಬಾಭವಾನಿ ದೇವಸ್ಥಾನದಲ್ಲಿ ಒಂಬತ್ತು ದಿನಗಳ ವಿಶೇಷ ಪೂಜೆ, ಪುರಸ್ಕಾರ, ಸಾಂಸ್ಕøತಿಕ ಕಾರ್ಯಕ್ರಮಕ್ಕೆ ಅದ್ದೂರಿಯ ಸಿದ್ಧತೆಗೊಂಡಿತು.
ಶ್ರೀ ಭುವನೇಶ್ವರಿ ಯುವಕ ಮಂಡಳಿ ಕುಂಬಾರ ಓಣಿ,
ಶ್ರೀ ಭುವನೇಶ್ವರಿ ಯುವಕ ಮಂಡಳಿ ಹೂಗಾರ ಓಣಿ, ದುರ್ಗಾ ಪರಮೇಶ್ವರಿ ಮಿತ್ರ, ಮಂಡಳಿ ಭೀರಪ್ಪ ನಗರ,
ಶ್ರೀ ಅಂಬಾಭವಾನಿ ಯುವಕ ಮಂಡಳಿ ಚಾವಡಿ ಓಣಿ ಇವರಿಂದ ನಗರದ ಪ್ರಮುಖ ಬೀದಿಗಳಲ್ಲಿ ಅಲಂಕೃತ ವಾಹನದಲ್ಲಿ ದೇವಿಯ ಭವ್ಯ ಮೆರವಣೆಗೆ ನಡೆಯಿತು.
ಅದಲ್ಲದೆ ಶ್ರೀ ಅಂಬಾಭವಾನಿ ದೇವಸ್ಥಾನದಲ್ಲಿ
ನೂತನವಾಗಿ ನಿರ್ಮಿಸಿದ ಗೋಪುರದ
ಕಳಸಾಹರೋಹಣ ಕಾರ್ಯಕ್ರಮ ನಡೆಯಿತು. ಅರ್ಚಕ ಉದಯ ಜೋಶಿ, ಶಿವಾನಂದ ಪೂಜಾರಿ ಮತ್ತು ಶಾಂತು ಪೂಜಾರಿ ಸಕಲ ಪೂಜಾ ವಿಧಾನದೊಂದಿಗೆ ಕಳಸಾಹರೋಃಣ ನೇರವೇರಿಸಿದರು.
ಈ ವೇಳೆ ದೇವಸ್ಥಾನ ಸಮಿತಿಯ ಅಧ್ಯಕ್ಷ ಅರುಣ
ಕೋಳೆಕರ, ನಾಗನಾಥ ಹಂಚಾಟೆ,ಬಾಪು ಮಹೀಂದ್ರಕರ, ಬಾಳು ಕಠಾರೆ, ಗಣೇಶ ಮಹೀಂದ್ರಕರ, ರಮೇಶ ಸುಲಾಖೆ, ಮನೋಜ ಕೋಳೆಕರ, ವಿಜಯ ಪತಂಗೆ, ಸುಭಾಸ ಬಳಮಕರ, ಬಾಬುರಾವ ಸುಲಾಖೆ ಸೇರಿದಂತೆ ಸುನೀಲ ಸುಲಾಖೆ, ಸತೀಶ ಕೋಳೆಕರ, ಲಕ್ಷ್ಮೀಕಾಂತ
ಅಂಬರಕರ,ಸುನೀಲ ಮಹೀಂದ್ರಕರ, ಮಯೂರ ಪತಂಗೆ, ಶಶಿಕಾಂತ ಕೋಳೆಕರ, ಸುರೇಶ ಅಂಬಾದಾಸ ಕೋಳೆಕರ, ಗೀರೀಶ ಸುಲಾಖೆ, ಉಮೇಶ, ಮಹಾವೀರ ಕೋಳೆಕರ, ಅಮರ ಕೋಳೆಕರ, ಸೀತಲ ಅಂಬರಕರ, ಉಮೇಶ ಕಾಂಬಳೆ,ಅಕ್ಷಯ ಮಹೀಂದ್ರಕರ, ಅಕ್ಷಯ ಸುಲಾಖೆ, ಕಿರಣ ಕೋಳೆಕರ, ವಿನೋದ ಕೋಳೆಕರ, ವಿಶಾಲ ಕೋಳೆಕರ, ರಾಹುಲ್ ಕೋಳೆಕರ, ಉಮೇಶ ಪವಾರ ಮತ್ತಿತರಿದ್ದರು.