ಅಫಜಲಪುರ: ಅಂಬೇಡ್ಕರರು ಕೇವಲ ದಲಿತರಿಗೆ ಸೀಮಿತರಲ್ಲ. ಒಂದು ವೇಳೆ ಹಾಗೆ ಯಾರಾದರೂ ಅಂದುಕೊಂಡರೆ ಅವರಂಥ ಮೂರ್ಖರು ಇನ್ನೊಬ್ಬರಿಲ್ಲ ಎಂದು ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಡಾ. ಮಲ್ಲಿಕಾರ್ಜುನ ಖರ್ಗೆ ಗುಡುಗಿದರು.
ಪಟ್ಟಣದ ನ್ಯಾಷನಲ್ ಫಂಕ್ಷನ್ ಹಾಲ್ ನಲ್ಲಿ ಏರ್ಪಡಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಾಬಾಸಾಹೇಬ ಅಂಬೇಡ್ಕರರ 131 ನೇ ಜಯಂತ್ಯುತ್ಸವ ಉದ್ಘಾಟಿಸಿ ಮಾತನಾಡಿದ ಅವರು ಈ ದೇಶದ 140 ಕೋಟಿ ಜನರ ಭವಿಷ್ಯವನ್ನು ಬಾಬಾ ಸಾಹೇಬರು ಬರೆದಿದ್ದಾರೆ. ಕೆಲವು ಸೌಲಭ್ಯಗಳನ್ನು ಹಿಂದುಳಿದ ವರ್ಗದವರ ಏಳ್ಗೆಗೆ ನೀಡಿದ್ದು ಇನ್ನುಳಿದ ಎಲ್ಲಾ ಮೂಲಭೂತ ಹಕ್ಕು ಮತ್ತು ಸೌಕರ್ಯಗಳನ್ನು ಈ ದೇಶದ ಜನರಿಗೆ ಸಂವಿಧಾನದ ಮೂಲಕ ನೀಡಿದ್ದಾರೆ. ಭೂ ಸುಧಾರಣೆ ಕಾನೂನು, ದುಡಿಯುವ ಕೈಗಳಿಗೆ ನರೇಗಾದಂತಹ ಉದ್ಯೋಗಾವಕಾಶವನ್ನು ಪ್ರತಿಯೊಬ್ಬರಿಗೂ ಕಲ್ಪಿಸಲಾಗಿದೆ. ಪ್ರತಿಯೊಂದು ಜಾತಿ ಜನಾಂಗದ ಜನಕ್ಕೆ ನೇರವಾಗಿ ಶಿಕ್ಷಣ ನೀಡಲು ಅವಕಾಶ ಮಾಡಿಕೊಡಲಾಗಿದೆ.
ಹಿಂದುಳಿದ ಪ್ರದೇಶಗಳ ಅಭಿವೃದ್ದಿಗಾಗಿ ಆರ್ಟಿಕಲ್ 371 ಜೆ ನೀಡಲಾಗಿದೆ. ಶಿಕ್ಷಣ, ಉದ್ಯೋಗ, ಬಡ್ತಿಯು ಕೇವಲ ಒಂದು ಜಾತಿಗೆ ಸೀಮಿತವಾಗಿರದೆ ಎಲ್ಲರಿಗೂ ಅನ್ವಯಾಗುತ್ತಿದೆ. ಹೀಗಾಗಿ ಇದನ್ನು ಎಲ್ಲರೂ ಅರಿಯಬೇಕು. ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡವುದು ಪಾಲಕರ ಆದ್ಯ ಕರ್ತವ್ಯವಾಗಿದೆ. ಜಮೀನು ಮಾರಿಕೊಂಡು ಇನ್ನೊಬ್ಬರ ಗುಲಾಮರಾಗಬೇಡಿ. ಮೂಢನಂಬಿಕೆಯನ್ನು ತಿರಸ್ಕಾರ ಮಾಡಿ. ಶತಮಾನಗಳ ಹಿಂದೆ ಮತದಾನದ ಹಕ್ಕು ಇರಲಿಲ್ಲ. ಆದರೆ ಸಂವಿಧಾನ ಜಾರಿಯಾದ ಬಳಿಕ ೨೧ ವರ್ಷದ ಬಳಿಕ ಹೆಣ್ಣು ಮಕ್ಕಳು ಮತದಾನದ ಹಕ್ಕು ಚಲಾಯಿಸುವ ಅಧಿಕಾರ ಬಂತು. ಬಡವನ ಹಾಗೂ ಶ್ರೀಮಂತನ ಮತಕ್ಕೆ ಒಂದೇ ಬೆಲೆ ಇದೆ. ರಾಜೀವ್ ಗಾಂಧಿ ಅವರು ಬಂದ ನಂತರ ೧೮ ವರ್ಷದವರಿಗೆ ಮತದಾನದ ಹಕ್ಕು ನೀಡಲಾಯಿತು. ಹೀಗಾಗಿ ಎಲ್ಲರೂ ಜಾಗೃತರಾಗಿ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಕರೆ ನೀಡಿದರು.
ಶಾಸಕ ಎಂ.ವೈ ಪಾಟೀಲ ಮಾತನಾಡಿ, ದೇಶದ ಪ್ರಜಾಪ್ರಭುತ್ವಕ್ಕೆ ಬಾಬಾ ಸಾಹೇಬರ ಕೊಡುಗೆ ಅಪಾರವಾಗಿದೆ. ಅವರ ಆದರ್ಶವನ್ನು ಎಲ್ಲರೂ ಅನುಸರಿಸುವ ಮೂಲಕ ಸಂವಿಧಾನದ ಘನತೆಯನ್ನು ಎತ್ತಿ ಹಿಡಿಯೋಣ ಎಂದರು.
ಪ್ರಾಸ್ತಾವಿಕ ನಾಗೇಶ ಕೊಳ್ಳಿ ಹಾಗೂ ಸಾನಿಧ್ಯ ವಹಿಸಿದ ವಿಶ್ವಾರಾಧ್ಯ ಮಳೇಂದ್ರ ಶಿವಾಚಾರ್ಯರು ಆಶೀರ್ವಚನ ನೀಡಿದರು.
ಕಾರ್ಯಕ್ರಮದಲ್ಲಿ ಮಾಜಿ ಎಂ. ಎಲ್.ಸಿ ಅಲ್ಲಂಪ್ರಭು ಪಾಟೀಲ್, ಜಗದೇವ ಗುತ್ತೇದಾರ್, ಅರುಣಕುಮಾರ ಎಂ.ವೈ ಪಾಟೀಲ್, ನಿತೀನ ಗುತ್ತೇದಾರ್, ಜೆ.ಎಂ ಕೊರಬು, ಮಕ್ಬೂಲ್ ಪಟೇಲ್, ರಾಜೇಂದ್ರ ಪಾಟೀಲ್ ರೇವೂರ, ಅಶೋಕ ಗುಡ್ಡಡಗಿ, ಅಪ್ಪಗೇರೆ ಸೋಮಶೇಖರ, ಶಿವಕುಮಾರ ನಾಟೀಕಾರ, ರಾಜಗೋಪಾಲ ರೆಡ್ಡಿ, ಪಪ್ಪು ಪಟೇಲ್, ಬಾಬಾ ಸಾಹೇಬ ಪಾಟೀಲ್, ಸಿದ್ದು ಸಿರಸಗಿ, ವಿಜಯಕುಮಾರ ಸಾಲಿಮನಿ,
ಮತೀನ ಪಟೇಲ್, ಸಿದ್ದಾರ್ಥ ಬಸರಿಗಿಡ, ಶಿವಾನಂದ ಗಾಡಿ ಸಾಹುಕಾರ, ರಾಜಶೇಖರ ಪಾಟೀಲ, ಶರಣು ಕುಂಬಾರ, ರಾಜು ಬಬಲಾದ, ಮಡಿವಾಳ ಹೂಗಾರ ಮಹಾಲಿಂಗ ಅಂಗಡಿ, ಮಹಾಂತೇಶ ಬಳೂಂಡಗಿ, ರವಿ ಗೌರ ಮುಂತಾದವರಿದ್ದರು.
ವರದಿ: ಉಮೇಶ್ ಅಚಲೇರಿ ವಾಯ್ಸ್ ಆಫ್ ಜನತಾ ಕಲಬುರಗಿ.